ಸಂಖ್ಯಾಶಾಸ್ತ್ರದ ಮೂಲಕ ಲಕ್ಕಿ ಗರ್ಲ್:  ಸಂಖ್ಯಾಶಾಸ್ತ್ರದಲ್ಲಿ, ಪ್ರತಿ ರಾಡಿಕ್ಸ್ನ ಜನರ ಗುಣಲಕ್ಷಣಗಳನ್ನು ಹೇಳಲಾಗಿದೆ. ಈ ಗುಣಲಕ್ಷಣಗಳ ಆಧಾರದ ಮೇಲೆ, ಅವರ ವ್ಯಕ್ತಿತ್ವವು ರೂಪುಗೊಳ್ಳುತ್ತದೆ ಮತ್ತು ಅವರ ಭವಿಷ್ಯವೂ ನಿರ್ಧರಿಸಲ್ಪಡುತ್ತದೆ ಎಂದು ಹೇಳಲಾಗುತ್ತದೆ. ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸುವುದು ಎಲ್ಲರ ಕನಸು.  ಕೆಲವು ಹುಡುಗಿಯರು ಈ ವಿಷಯದಲ್ಲಿ ಜನ್ಮತಃ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಯಾವುದೇ ತಿಂಗಳ 3, 12, 21 ಅಥವಾ 30 ರಂದು ಜನಿಸಿದ ಹುಡುಗಿಯರ ರಾಡಿಕ್ಸ್ ಸಂಖ್ಯೆ 3 ಆಗಿರುತ್ತದೆ. ರಾಡಿಕ್ಸ್ ಸಂಖ್ಯೆ 3ರ ಹುಡುಗಿಯರನ್ನು ವೃತ್ತಿ ಜೀವನದ ವಿಷಯದಲ್ಲಿ ಬಹಳ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇವರು ಯಾವುದೇ ಕ್ಷೇತ್ರದಲ್ಲಿ ಹೋದರೂ ಉನ್ನತ ಸ್ಥಾನ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ರಾಡಿಕ್ಸ್ ಸಂಖ್ಯೆ 3ರ ಹುಡುಗಿಯರ ಗುಣ ಸ್ವಭಾವ:
ಸಂಖ್ಯಾ ಶಾಸ್ತ್ರದ ಪ್ರಕಾರ ರಾಡಿಕ್ಸ್ 3 ರ ಹುಡುಗಿಯರು ಅದ್ಭುತ ನಾಯಕತ್ವದ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಅವರು ತುಂಬಾ ಶ್ರಮಶೀಲರು, ಬುದ್ಧಿವಂತರು. ಅಷ್ಟೇ ಅಲ್ಲ ಈ ಜನರು ಸಹ ತುಂಬಾ ಕರುಣಾಮಯಿಗಳು ಎನ್ನಲಾಗುತ್ತದೆ. ಈ ಗುಣಗಳಿಂದಾಗಿ, ಅವರು ವೇಗವಾಗಿ ಯಶಸ್ಸನ್ನು ಪಡೆಯುತ್ತಾರೆ. ಈ ಜನರು ತಮಗೆ ವಹಿಸಿದ ಕೆಲಸವನ್ನು ಪೂರ್ಣಗೊಳಿಸಿದ ನಂತರವಷ್ಟೇ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಹೀಗಾಗಿಯೇ ಅವರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗವನ್ನು ಏರುತ್ತಾರೆ. 


ಇದನ್ನೂ ಓದಿ- Numerology: ಈ ದಿನಾಂಕದಂದು ಹುಟ್ಟಿದವರ ಮೇಲೆ ಲಕ್ಷ್ಮಿಯ ಅನುಗ್ರಹ ಸದಾ ಇರುತ್ತದೆ


ಇತರರಿಗೆ ಸಹಾಯ ಮಾಡುವಲ್ಲಿ ಸದಾ ಮುಂದು:
ರಾಡಿಕ್ಸ್ 3 ರ ಹುಡುಗಿಯರು ಅದ್ಭುತ ಮತ್ತು ಯಶಸ್ವಿ ಜೀವನವನ್ನು ನಡೆಸುವುದು ಮಾತ್ರವಲ್ಲ, ಅವರು ಇತರರ ಒಳಿತಿಗಾಗಿ ಸಾಕಷ್ಟು ಕೆಲಸ ಮಾಡುತ್ತಾರೆ. ಈ ರಾಡಿಕ್ಸ್ ಸಂಖ್ಯೆಯ ಜನರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಮಾತ್ರವಲ್ಲ, ಇವರು ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಸ್ವಭಾವತಃ ಕರುಣಾಮಯಿಗಳಾದ ಇವರು ಇತರರಿಗೆ ಸಹಾಯ ಮಾಡುವಲ್ಲಿ ತುಂಬಾ ಮುಂದಿರುತ್ತಾರೆ.  ಇವರ ಈ ಗುಣದಿಂದಾಗಿಯೇ ಇವರು ಸಮಾಜದಲ್ಲಿ ಒಳ್ಳೆಯ ಹೆಸರನ್ನೂ ಗಳಿಸುತ್ತಾರೆ.


ಇದನ್ನೂ ಓದಿ- Numerology: ಈ ದಿನಾಂಕದಂದು ಜನಿಸಿದ ಜನರು ಸ್ವಭಾವತಃ ಸರಳರು, ಆಸ್ತಿಯ ವಿಷಯದಲ್ಲಿ ಅದೃಷ್ಟವಂತರು


ರಾಡಿಕ್ಸ್ 3 ರ ಹುಡುಗಿಯರು ತುಂಬಾ ಅದೃಷ್ಟವಂತರು. ಇವರು ಯಶಸ್ವಿ-ಸಂತೋಷದ ಜೀವನವನ್ನು ನಡೆಸುತ್ತಾರೆ. ಅಷ್ಟೇ ಅಲ್ಲ ಇವರೊಂದಿಗೆ ಸಂಬಂಧ ಹೊಂದಿರುವ ಜನರಿಗೂ ಇವರು ಅದೃಷ್ಟಶಾಲಿ ಎಂದು ಸಾಬೀತುಪಡಿಸುತ್ತಾರೆ. ರಾಡಿಕ್ಸ್ 3ರ ಕುಟುಂಬದವರೂ ಸಹ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ. ಈ ಹುಡುಗಿಯರು ಇತರರಿಗೆ ಸ್ಫೂರ್ತಿಯಾಗುತ್ತಾರೆ. ಅವರು ನ್ಯಾಯಾಧೀಶರು, ವಕೀಲರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.