which prasad best to pooja at home: ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ತಾನು ಮಾಡುವ ಪ್ರಕ್ರಿಯೆಯ ಅನುಸಾರವಾಗಿ ಫಲಿತಾಂಶಗಳನ್ನು ಬಯಸುತ್ತಾರೆ, ಇತ್ತೀಚಿನ ದಿನಗಳಲ್ಲಿ ಮನುಷ್ಯ ತಮಗೆ ಇಷ್ಟಬಂದಂತೆ ಬದುಕುವುದು ಸಾಮಾನ್ಯ. ಹಾಗೆಯೇ ಪೂಜಾ ಕಾರ್ಯಗಳ ಸಂದರ್ಭದಲ್ಲಿ ತಮ್ಮ ಮನಸ್ಸಿಗೆ ದೋಚಿದ ಸಿಹಿಯನ್ನು ಅಥವಾ ಪ್ರಸಾದವನ್ನು ತಯಾರಿಸಿ ದೇವರಿಗೆ ಅರ್ಪಿಸುತ್ತಾನೆ, ಆದರೆ ದೇವರಿಗೆ ನೆಚ್ಚಿನ ನೈವೇದ್ಯ ಯಾವುದೆಂದು ಅರಿಯುವ ಗೋಜಿಗೆ ಹೋಗುವುದು ಕಡಿಮೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವೇಗವಾಗಿ ಕೂದಲು ಉದುರುತ್ತಿವೆಯೇ? ಈ ನೀರಿನಿಂದ ಕೂದಲು ತೊಳೆದರೆ ತಕ್ಷಣಕ್ಕೆ ನಿಂತುಹೋಗುತ್ತವೆ!


ಇಂದು ನಾವು ಯಾವ ದೇವರಿಗೆ ಯಾವ ನೈವೇದ್ಯ ಇಷ್ಟ? ಯಾವ ನೈವೇದ್ಯ ತಯಾರಿಸಿ ದೇವರಿಗೆ ಅರ್ಪಿಸಿದರೆ ಒಳಿಯಾಗುವುದು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.


ಒಂದೊಮ್ಮೆ ಶ್ರೀಕೃಷ್ಣ ಹೇಳುತ್ತಾನೆ; “ಯಾವ ಭಕ್ತನು ಎಲೆ, ಹೂವು, ಹಣ್ಣು, ನೀರು ಇತ್ಯಾದಿಗಳನ್ನು ನನಗೆ ಪ್ರೀತಿಯಿಂದ ಅರ್ಪಿಸುತ್ತಾನೋ, ಆ ಶುದ್ಧ ಮನಸ್ಸಿನ ನಿಸ್ವಾರ್ಥ ಪ್ರೇಮಿಯು ಪ್ರೀತಿಯಿಂದ ಅರ್ಪಿಸಿದ ಹೂವನ್ನು ನಾನು ಸದ್ಗುಣ ರೂಪದಲ್ಲಿ ಕಾಣಿಸಿಕೊಂಡು ಅದನ್ನು ಪ್ರೀತಿಯಿಂದ ತಿನ್ನುತ್ತೇನೆ” ಎಂದು.


ಹಿಂದೂ ಧರ್ಮದಲ್ಲಿ ಪುರಾತನ ಕಾಲದಿಂದಲೂ ದೇವಸ್ಥಾನದಲ್ಲಿ ಪ್ರಸಾದವನ್ನು ನೀಡುವುದು ಸಂಪ್ರದಾಯವಾಗಿದೆ. ಯಾವ ದೇವರಿಗೆ ಯಾವ ಪ್ರಸಾದವನ್ನು ನೀಡಲಾಗುತ್ತದೆ ಎಂಬುದು ಬಹಳ ಮುಖ್ಯವಾದ ಪ್ರಶ್ನೆಯಾಗಿದೆ. ಈ ಬಗ್ಗೆ ಸಂಕ್ಷಿಪ್ತ ವರದಿಯನ್ನು ನೀಡಲಿದ್ದೇವೆ.


ಗಣೇಶ: ಗಣೇಶನಿಗೆ ಮೋದಕ ಅಥವಾ ಲಡ್ಡು ಇಷ್ಟ. ಇದಲ್ಲದೆ, ನೀವು ಬೂಂದಿ ಲಡ್ಡೂಗಳನ್ನು ಸಹ ಅರ್ಪಿಸಬಹುದು. ಇದರ ಜೊತೆಗೆ ಕಬ್ಬು, ಕೊಬ್ಬರಿ ಮತ್ತು ಬೆಲ್ಲ ಎಂದರೆ ಕೂಡ ಗಣಪತಿಗೆ ತುಂಬಾ ಪ್ರೀತಿ.


ಶ್ರೀರಾಮ- ಭಗವಾನ್ ಶ್ರೀರಾಮನಿಗೆ ಕೇಸರಿಯುಕ್ತ ಪಾಯಸವನ್ನು ಅರ್ಪಿಸಿದರೆ ಶುಭವಾಗುತ್ತದೆ. ಇದರ ಜೊತೆಗೆ ಕಲಾಕಂಡ್ ಎಂದರೂ ತುಂಬ ಪ್ರಿಯ.


ಮಹಾವಿಷ್ಣು- ಭುಜಗಶಯನನಿಗೆ ಒಣದ್ರಾಕ್ಷಿ ನೈವೇದ್ಯ ಅರ್ಪಿಸಿದರೆ ಅದೃಷ್ಟ ಬೆಳಗುತ್ತದೆ. ಇದರೊಂದಿಗೆ ನೆಲ್ಲಿಕಾಯಿಯೆಂದರೂ ಬಹಳ ಪ್ರಿಯವಂತೆ, ಹಾಲು ಪಾಯಸದಲ್ಲಿ ಒಣದ್ರಾಕ್ಷಿ ಬೆರೆಸಿ, ಕೊನೆಯಲ್ಲಿ ತುಳಸಿ ಸೇರಿಸಿದರೆ ಮಹಾವಿಷ್ಣುವಿಗೆ ಸಂತೃಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.


ಮಹಾಶಿವ- ಈಶ್ವರ ದೇವರಿಗೆ ಭಾಂಗ್ ಮತ್ತು ಪಂಚಾಮೃತ (ಹಾಲು, ಮೊಸರು, ಜೇನುತುಪ್ಪ, ಗಂಗಾಜಲ, ತುಪ್ಪ) ಎಂದರೆ ಇಷ್ಟ. ಶ್ರಾವಣ ಮಾಸದಲ್ಲಿ ಶಿವನ ವ್ರತವನ್ನು ಆಚರಿಸಿ ಈ ನೈವೇದ್ಯ ಅರ್ಪಿಸುವುದರಿಂದ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.


ಮಹಾಲಕ್ಷ್ಮಿ- ತಾಯಿ ಲಕ್ಷ್ಮೀದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗಿದೆ. ದೇವಸ್ಥಾನಕ್ಕೆ ಹೋಗಿ ಬಿಳಿ ಮತ್ತು ಹಳದಿ ಬಣ್ಣದ ಸಿಹಿತಿಂಡಿಗಳನ್ನು ಅರ್ಪಿಸಿದರೆ ತಾಯಿ ಸಂತೃಪ್ತಿ ಹೊಂದಿ ಇಷ್ಟಾರ್ಥ ಕರುಣಿಸುತ್ತಾಳೆ ಎಂದು ಹೇಳಲಾಗುತ್ತದೆ.  


ದುರ್ಗೆ- ಮಾತೆ ದುರ್ಗೆಯನ್ನು ಶಕ್ತಿಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಪಾಯಸ, ಮಲ್ಪುವಾ, ಸಿಹಿ ಕಡುಬು, ಬಾಳೆಹಣ್ಣು, ತೆಂಗಿನಕಾಯಿ ಮತ್ತು ಸಿಹಿತಿಂಡಿಗಳನ್ನು ತಾಯಿಗೆ ಅರ್ಪಿಸಬಹುದು.


ಶ್ರೀ ಕೃಷ್ಣ: ಕೃಷ್ಣನಿಗೆ ಬೆಣ್ಣೆ ಮತ್ತು ಸಕ್ಕರೆ ಮಿಠಾಯಿ ಎಂದರೆ ತುಂಬಾ ಇಷ್ಟ. ಇದನ್ನು ನೈವೇದ್ಯವಾಗಿ ಅರ್ಪಿಸಿ


ಹನುಮಾನ್: ಆಂಜನೇಯನಿಗೆ ಕಡುಬು, ಕೆಂಪು ಮತ್ತು ತಾಜಾ ಹಣ್ಣುಗಳು, ಬೆಲ್ಲ, ಕೊತ್ತಂಬರಿ ಮತ್ತು ತುಳಸಿಯಿಂದ ಮಾಡಿದ ಲಡ್ಡುಗಳೆಂದರೆ ಇಷ್ಟ. ಇವುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಶುದ್ಧ ತುಪ್ಪದಿಂದ ಮಾಡಿದ ಬೇಳೆ ಹಿಟ್ಟಿನ ಲಡ್ಡೂಗಳು ಸಹ ಇಷ್ಟವಾಗುತ್ತವೆ.


ಇದನ್ನೂ ಓದಿ: ಈ ಒಂದು ಸಣ್ಣ ಕಾಯಿ ಸಾಕು ಕೂದಲು ದಷ್ಟ ಪುಷ್ಟವಾಗಿ ಬೆಳೆಯುವಂತೆ ಮಾಡಲು


(ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಊಹೆಗಳು ಮತ್ತು ಮಾಹಿತಿಯನ್ನು ಮಾತ್ರ ಆಧರಿಸಿದೆ. Zee Kannada News ದೃಢೀಕರಿಸುವುದಿಲ್ಲ).


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.