ಈ ಒಂದು ಸಣ್ಣ ಕಾಯಿ ಸಾಕು ಕೂದಲು ದಷ್ಟ ಪುಷ್ಟವಾಗಿ ಬೆಳೆಯುವಂತೆ ಮಾಡಲು

ಶಿಕಾಕಾಯಿ ಕೂದಲನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡುವುದಲ್ಲದೆ ರೇಷ್ಮೆಯಂತೆ ಮೃದುವಾಗಿಸುತ್ತದೆ. ಇದರ ಬಳಕೆಯಿಂದ ನೆತ್ತಿಯೂ ಚೆನ್ನಾಗಿ ಶುಚಿಯಾಗುತ್ತದೆ. 

Written by - Ranjitha R K | Last Updated : Aug 8, 2023, 09:48 AM IST
  • ಕೂದಲಿನ ಬೆಳವಣಿಗೆಗೆ ಶಿಕಾಕಾಯಿ ಹೇಗೆ ಪ್ರಯೋಜನ
  • ಶಿಕಾಕಾಯಿಯನ್ನು ಬಳಸುವ ವಿಧಾನ ಹೇಗೆ ?
  • ಕೂದಲ ಬೆಳವಣಿಗೆಯಲ್ಲಿ ಶಿಕಾಕಾಯಿ ಸಹಕಾರಿ
ಈ ಒಂದು ಸಣ್ಣ ಕಾಯಿ ಸಾಕು ಕೂದಲು ದಷ್ಟ ಪುಷ್ಟವಾಗಿ ಬೆಳೆಯುವಂತೆ ಮಾಡಲು  title=

ಬೆಂಗಳೂರು : ಕೂದಲ ಬೆಳವಣಿಗೆಗೆ ಸಹಾಯ ಮಾಡುವ ನೈಸರ್ಗಿಕ ವಸ್ತುಗಳ ಪೈಕಿ ಶಿಕಾಕಾಯಿಗೆ ಪ್ರಮುಖ ಸ್ಥಾನ. ಶಿಕಾಕಾಯಿಯನ್ನು ಕೂದಲಿನ ಹಣ್ಣು ಎಂದು ಕೂಡಾ ಕರೆಯಲಾಗುತ್ತದೆ. ಇದು ಆಯುರ್ವೇದ ಔಷಧವಾಗಿದೆ. ಇದನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ವಿಟಮಿನ್ ಎ, ಸಿ, ಡಿ, ಕೆ ಮತ್ತು ಅನೇಕ ಆಂಟಿ ಆಕ್ಸಿಡೆಂಟ್‌ಗಳು ಶಿಕಾಕಾಯಿಯಲ್ಲಿ ಕಂಡುಬರುತ್ತವೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿನ ಕಿರುಚೀಲಗಳು ಶಿಕಾಕಾಯಿಯಿಂದ ಪ್ರಯೋಜನ ಪಡೆಯುತ್ತವೆ. ಶಿಕಾಕಾಯಿ ಕೂದಲನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡುವುದಲ್ಲದೆ ರೇಷ್ಮೆಯಂತೆ ಮೃದುವಾಗಿಸುತ್ತದೆ. ಇದರ ಬಳಕೆಯಿಂದ ನೆತ್ತಿಯೂ ಚೆನ್ನಾಗಿ ಶುಚಿಯಾಗುತ್ತದೆ. 

ಕೂದಲಿನ ಬೆಳವಣಿಗೆಗೆ ಶಿಕಾಕಾಯಿ ಹೇಗೆ ಪ್ರಯೋಜನ : 
ಶಿಕಾಕಾಯಿಯಲ್ಲಿ ಉರಿಯೂತ ನಿವಾರಕ ಗುಣಗಳು ಹೇರಳವಾಗಿದ್ದು, ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ. ಇದು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ.  ತಲೆ ಹೊಟ್ಟು ತೆಗೆದುಹಾಕುವಲ್ಲಿ ಉತ್ತಮ ಪರಿಣಾಮ ಬೀರುತ್ತದೆ. ಶಿಕಾಕಾಯಿಯನ್ನು ಕೂದಲು ಉದುರುವಿಕೆಯ ವಿರುದ್ಧದ ಚಿಕಿತ್ಸೆಯಾಗಿಯೂ ಬಳಸಬಹುದು ಮತ್ತು ಇದು ಕೂದಲಿಗೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಒದಗಿಸುತ್ತದೆ. ಇದರಿಂದಾಗಿ ಇದರ ಬಳಕೆಯಿಂದ ಕೂದಲು ದಪ್ಪ ಬೆಳೆಯುವುದಲ್ಲದೆ  ರೇಷ್ಮೆಯಂತಾಗುತ್ತದೆ.  

ಇದನ್ನೂ ಓದಿ ಟೋಮ್ಯಾಟೊ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತಾ? ತಜ್ನರು ಹೇಳುವುದೇನು?

ಶಿಕಾಕಾಯಿಯನ್ನು ಬಳಸುವ ವಿಧಾನ ಹೇಗೆ ? : 
ಶಿಕಾಕಾಯಿ ಪೇಸ್ಟ್ : 
ಶಿಕಾಕಾಯಿಯನ್ನು ಕೂದಲಿಗೆ ಸರಳವಾಗಿ ಅನ್ವಯಿಸಬಹುದು. ಇದಕ್ಕಾಗಿ, 2 ರಿಂದ 3 ಚಮಚ ಶಿಕಾಕಾಯಿ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಇರಿಸಿ ನಂತರ ತೊಳೆಯಿರಿ. ಬೇಕಿದ್ದರೆ ಶಿಕಾಕಾಯಿಯಲ್ಲಿ ಸ್ವಲ್ಪ ಹೆಚ್ಚು ನೀರು ಹಾಕಿ ಶಾಂಪೂ ರೀತಿಯಲ್ಲಿ ಹೇರ್ ವಾಶ್ ಮಾಡಲು  ಕೂಡಾ ಬಳಸಬಹುದು.  

ಶಿಕಾಕಾಯಿ ಮತ್ತು ನಿಂಬೆ :
ಕೂದಲಿನ ಮೇಲೆ ಅತಿಯಾದ ಕೊಳಕು ಮತ್ತು ತಲೆಹೊಟ್ಟು ಕಾಣಿಸಿದರೆ ಶಿಕಾಕಾಯಿ ಮತ್ತು ನಿಂಬೆ ಪೇಸ್ಟ್ ಅನ್ನು ಕೂದಲಿಗೆ ಹಚ್ಚಬಹುದು.  ಇದಕ್ಕಾಗಿ, ಶಿಕಾಕಾಯಿಯನ್ನು ನೀರಿನಲ್ಲಿ ಕುದಿಸಿ ಮತ್ತು ಅದಕ್ಕೆ ಅರ್ಧ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ತಣ್ಣಗಾಗಿಸಿ ಕೂದಲಿಗೆ ಹಚ್ಚಿ. ಸ್ವಲ್ಪ ಸಮಯದ ನಂತರ ಕೂದಲನ್ನು ತೊಳೆಯಿರಿ. ಈ ವಿಧಾನವನ್ನು ವಾರಕ್ಕೆ 3 ರಿಂದ 4 ಬಾರಿ ಪ್ರಯತ್ನಿಸಬಹುದು.

ಇದನ್ನೂ ಓದಿ : ಮದ್ಯಪಾನ ಮಾಡುವಾಗ ಅಥವಾ ನಂತರ ಈ ಆಹಾರಗಳನ್ನು ಮರೆತೂ ಕೂಡ ಮುಟ್ಟಬೇಡಿ!

ಶಿಕಾಕಾಯಿ ಮತ್ತು ಮೊಸರು :
ಕೂದಲಿನ ಬೆಳವಣಿಗೆ ಮತ್ತು ಹೊಳೆಯುವ ಕೂದಲಿಗೆ ಈ ಪಾಕವಿಧಾನ ಅದ್ಭುತವಾಗಿದೆ. ಶಿಕಾಕಾಯಿ ಪುಡಿಯನ್ನು ಮೊಸರಿನಲ್ಲಿ ಹಾಕಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸುಮಾರು ಮತ್ತು ಅರ್ಧ ಗಂಟೆವರೆಗೆ ಹಾಗೆಯೇ ಬಿಡಿ. ನಂತರ ಸ್ನಾನ ಮಾಡಿ. ಹೀಗೆ ಮಾಡುತ್ತಾ ಬಂದರೆ ಒಡೆದ ಕೂದಲು, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ದೂರವಾಗಲು ಪ್ರಾರಂಭಿಸುತ್ತವೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದಕ್ಕೆ ಜವಾಬ್ದಾರನಾಗಿರುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News