ಬೆಂಗಳೂರು : ಸನಾತನ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಫಾಲ್ಗುಣ ಮಾಸ ಆರಂಭವಾಗಿದೆ. ಈ ತಿಂಗಳ ಕೃಷ್ಣ ಪಕ್ಷದ ನಾಲ್ಕನೇ ದಿನಾಂಕದಂದು ದ್ವಿಜಪ್ರಿಯ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ವಿಧಿ ವಿಧಾನಗಳೊಂದಿಗೆ ಗಣೇಶನನ್ನು ಪೂಜಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂದು ಹೇಳಲಾಗುತ್ತದೆ. ದ್ವಿಜಪ್ರಿಯ ಸಂಕಷ್ಟ ಚತುರ್ಥಿಯ ದಿನದಂದು ಗಣೇಶನ 32 ರೂಪಗಳಲ್ಲಿ ಆರನೇ ರೂಪವನ್ನು ಪೂಜಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ದ್ವಿಜಪ್ರಿಯ ಸಂಕಷ್ಟ ಚತುರ್ಥಿಯ ಶುಭ ಸಮಯ ಮತ್ತು ಮಹತ್ವ :
 ಗಣೇಶನ ಕೃಪೆಗೆ ಪಾತ್ರರಾಗಲು ದ್ವಿಜಪ್ರಿಯ ಸಂಕಷ್ಟ ಚತುರ್ಥಿಯನ್ನು ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಪಂಚಾಂಗದ ಪ್ರಕಾರ ಇಂದು ದ್ವಿಜಪ್ರಿಯ ಸಂಕಷ್ಟ ಚತುರ್ಥಿ. ಬೆಳಿಗ್ಗೆ 06.23 ರಿಂದ ಈ ದಿನದ ಶುಭ ಮುಹೂರ್ತ ಆರಂಭವಾಗಿದ್ದು,  ಫೆಬ್ರವರಿ 10ರ ಬೆಳಿಗ್ಗೆ 07.58 ರವರೆಗೆ ಇರುತ್ತದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ಥಿ ದಿನಾಂಕವನ್ನು ದ್ವಿಜಪ್ರಿಯ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ದ್ವಿಜಪ್ರಿಯ ಸಂಕಷ್ಟ ಚತುರ್ಥಿಯಂದು ಗಣಪತಿಯನ್ನು ಪೂಜಿಸುವುದರಿಂದ ಜೀವನದ ಎಲ್ಲಾ ರೀತಿಯ ಕಷ್ಟ ಪರಿಹಾರವಾಗುತ್ತದೆ. ಮನೆಯ ಋಣಾತ್ಮಕ ಪರಿಣಾಮಗಳು ದೂರವಾಗಿ,  ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ. 
 
 ಇದನ್ನೂ ಓದಿ :
 Astro Tips for Money : ಸಂಬಳ ಬಂದ ತಕ್ಷಣ ಈ 3 ಕೆಲಸ ಮಾಡಿ : ಸಂಪತ್ತು, ಸಮೃದ್ಧಿ ನಾಲ್ಕು ಪಟ್ಟು ಹೆಚ್ಚಾಗುತ್ತೆ!


ಪೂಜಾ ವಿಧಾನ, ಉಪವಾಸ ಮತ್ತು ತಯಾರಿ : 
ದ್ವಿಜಪ್ರಿಯ ಸಂಕಷ್ಟ ಚತುರ್ಥಿಯಂದು ಸ್ನಾನ ಮಾಡಿ ಮಡಿಯುಟ್ಟು ಪೂಜೆ ಮಾಡಬೇಕು. ಮನೆಯಲ್ಲಿ ಪೂಜಾ ಸ್ಥಳವನ್ನು ಶುಚಿಗೊಳಿಸಿದ ನಂತರ, ಉತ್ತರ ದಿಕ್ಕಿಗೆ ಮುಖ ಮಾಡಿರುವ ಗಣೇಶನಿಗೆ ನೀರನ್ನು ಅರ್ಪಿಸಿ. ಈ ಶುಭ ದಿನದಂದು ಗಣೇಶನಿಗೆ ನೀರನ್ನು ಅರ್ಪಿಸುವ ಮೊದಲು ಆ ನೀರಿನಲ್ಲಿ ಎಳ್ಳು ಸೇರಿಸಬೇಕು. ಅದರಲ್ಲಿ ಎಳ್ಳನ್ನು ಹಾಕಿ. ದಿನವಿಡೀ ಉಪವಾಸ ಇರಿ. ಸಂಜೆ ಗಣಪತಿಯನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಿ. ಉಪವಾಸದ ಸಮಯದಲ್ಲಿ ಗಣೇಶನ ಯಾವುದೇ ಮಂತ್ರವನ್ನು ಪಠಿಸಿ.  ಗಣಪತಿಗೆ ಮೋದಕವನ್ನು ಅರ್ಪಿಸಿ.   ರಾತ್ರಿ ಚಂದ್ರನನ್ನು ನೋಡಿದ ನಂತರ ಅರ್ಘ್ಯವನ್ನು ಅರ್ಪಿಸಿ, ನಂತರ ಲಡ್ಡು ಅಥವಾ ಎಳ್ಳು ತಿನ್ನುವ ಮೂಲಕ ಉಪವಾಸ ಕೈ ಬಿಡಿ. 


ಇದನ್ನೂ ಓದಿ : ಶನಿ ರಾಶಿಗೆ ಸೂರ್ಯ ಪ್ರವೇಶಿಸುವ ವೇಳೆ ಈ ಒಂದು ಕೆಲಸ ಮಾಡಿದರೆ ಸಾಕು ಅದೃಷ್ಟವೇ ಬದಲಾಗುತ್ತೆ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.