Saturn Retrograde 2024: ಹೊಸ ವರ್ಷ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕರ್ಮಫಲದಾತ, ನ್ಯಾಯದ ದೇವರು ಎಂದು ಪರಿಗಣಿಸಲಾಗಿರುವ ಶನಿಯು 2024ರಲ್ಲಿಯೂ ಕುಂಭ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ. ಆದರೆ, ಶನಿ ರಾಶಿಚಕ್ರವನ್ನು ಬದಲಾಯಿಸದಿದ್ದರೂ ಕೂಡ ಆತನ ನಡೆ ಬದಲಾಗಲಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2024 ರಲ್ಲಿ, ಜೂನ್ 30 ರಿಂದ ನವೆಂಬರ್ 15ರವರೆಗೆ ಶನಿಯು ಹಿಮ್ಮುಖವಾಗಿ ಚಲಿಸಲಿದ್ದಾನೆ. ಶನಿಯ ವಕ್ರ ನಡೆಯು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಈ ಸಮಯದಲ್ಲಿ ಶನಿ ಮಹಾತ್ಮ ಕೆಲವು ರಾಶಿಯವರಿಗೆ ವಿಶೇಷ ಆಶೀರ್ವಾದವನ್ನು ನೀಡಲಿದ್ದು ಬಂಪರ್ ಧನಲಾಭವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ.


ಹೊಸ ವರ್ಷದಲ್ಲಿ ಈ ಮೂರು ರಾಶಿಯವರ ಭಾಗ್ಯ ಬೆಳಗಳಿದ್ದಾನೆ ಶನಿ ಮಹಾತ್ಮ: 
ಮೇಷ ರಾಶಿ: 

2024ರಲ್ಲಿ ಶನಿಯ ಹಿಮ್ಮುಖ ಚಲನೆಯು ಮೇಷ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿದ್ದು, ಹೂಡಿಕೆಯಿಂದ ಭರ್ಜರಿ ಲಾಭವನ್ನು ಪಡೆಯಬಹುದು. ವೃತ್ತಿ ರಂಗದಲ್ಲಿಯೂ ಮಹತ್ವದ ಬದಲಾವಣೆಗಳು ಕಂಡು ಬರುವ ಸಾಧ್ಯತೆ ಇದೆ. 


ಇದನ್ನೂ ಓದಿ- Rahu-Ketu: ಜಾತಕದಲ್ಲಿ ರಾಹು-ಕೇತು ದೋಷಕ್ಕೆ ಇಂದೇ ಈ ಪರಿಹಾರ ಕೈಗೊಳ್ಳಿ


ಸಿಂಹ ರಾಶಿ: 
2024ರಲ್ಲಿ ಸಿಂಹ ರಾಶಿಯವರ ಮೇಲೆ ಶನಿ ಮಹಾತ್ಮನ ವಿಶೇಷ ಆಶೀರ್ವಾದ ಇರಲಿದೆ. ಈ ಸಮಯದಲ್ಲಿ ಸಿಂಹ ರಾಶಿಯವರ ಜಾತಕದಲ್ಲಿಯೇ ಅತ್ಯಂತ ಮಂಗಳಕರ ಶಶ ರಾಜಯೋಗ ಸೃಷ್ಟಿಯಾಗುತ್ತಿದ್ದು, ಇದರ ಪರಿಣಾಮವಾಗಿ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣಬಹುದು. ಮಾತ್ರವಲ್ಲ, ಅವಿವಾಹಿತರಿಗೆ ವೈವಾಹಿಕ ಮಾತುಕತೆಗಳು ಮುಂದುವರೆದು ಕೌಟುಂಬಿಕ ಸಂತೋಷವನ್ನು ನಿರೀಕ್ಷಿಸಬಹುದು. 


ಇದನ್ನೂ ಓದಿ- Surya Gochar: ನಾಳೆಯಿಂದ ಈ 4 ರಾಶಿಯವರಿಗೆ ಬಂಗಾರದ ಸಮಯ, ಉದ್ಯೋಗದಲ್ಲಿ ಯಶಸ್ಸು​


ಮಕರ ರಾಶಿ: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವ 2024ರಲ್ಲಿ ಮಕರ ರಾಶಿಯವರಿಗೆ ಪೂರ್ವಿಕಾರ ಆಸ್ತಿಯಿಂದ ಪ್ರಯೋಜನವನ್ನು ನೀಡಲಿದ್ದಾನೆ. ಮಾತ್ರವಲ್ಲ, ಈ ಉದ್ಯೋಗದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.