ಮೀನ ರಾಶಿ

  • Dec 13, 2023, 06:25 AM IST
1 /10

ಕಲಿಯುಗ ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿ ದೇವನು 2024ರಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುವುದಿಲ್ಲ. ಮೂವತ್ತು ವರ್ಷಗಳ ಬಳಿಕ ಕುಂಭ ರಾಶಿಗೆ ಪ್ರವೇಶಿಸಿರುವ ಶನಿ ದೇವನು 2024ರಲ್ಲಿಯೂ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. 

2 /10

ಶನಿ ಸಾಡೇಸಾತಿ- ಧೈಯಾ ಪ್ರಭಾವ : ಆದಾಗ್ಯೂ, 2024ರಲ್ಲಿಯೂ ಕುಂಭ ರಾಶಿಯಲ್ಲಿಯೇ ಇರುವ ಶನಿಯ ಸಾಡೇಸಾತಿ ಹಾಗೂ ಧೈಯಾ ಪ್ರಭಾವವು ಕೆಲವು ರಾಶಿಯವರನ್ನು ಬೆಂಬಿಡದೆ ಕಾಡಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ... 

3 /10

ಕರ್ಕಾಟಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಕರ್ಕಾಟಕ ರಾಶಿಯ ಜನರು ಶನಿಯ ಧೈಯಾ ಪ್ರಭಾವವನ್ನು ಎದುರಿಸಬೇಕಾಗುತ್ತದೆ.   ಈ ಸಮಯದಲ್ಲಿ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಜೊತೆಗೆ ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆಯಿಂದ ಇರಿ. 

4 /10

ವೃಶ್ಚಿಕ ರಾಶಿ:  2024ರಲ್ಲಿಯೂ ಸಹ ವೃಶ್ಚಿಕ ರಾಶಿಯವರು ಶನಿಯ ಧೈಯಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷ ನೀವು ಉದ್ಯೋಗ ರಂಗದಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣಬಹುದು. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. 

5 /10

ಶನಿ ಸಾಡೇ ಸಾತಿ ಪ್ರಭಾವ:  ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2024ರಲ್ಲಿ ಮೂರು ರಾಶಿಯವರ ಮೇಲೆ ಶನಿ ಸಾಡೇಸಾತಿ ಪ್ರಭಾವ ಕಂಡು ಬರುತ್ತದೆ. ಆ ರಾಶಿಗಳೆಂದರೆ...  

6 /10

ಮಕರ ರಾಶಿ:  2024ರಲ್ಲಿ ಮಕ್ರ ರಾಶಿಯವರಿಗೆ ಶನಿ ಸಾಡೇಸಾತಿಯ ಮೂರನೇ ಹಂತ ಆರಂಭವಾಗಲಿದೆ. ಇದರಿಂದಾಗಿ ನೀವು ಕೆಲಸಕಾರ್ಯಗಳಲ್ಲಿ ಅಡತಡೆಗಳನ್ನು ಎಉದ್ರಿಸಬೇಕಾಗಬಹುದು. ಕೌಟುಂಬಿಕ ಸುಖ-ಸಂತೋಷದಲ್ಲಿ ಕೊರತೆ ಕಾಣಬಹುದು.

7 /10

ಕುಂಭ ರಾಶಿ:  ಮುಂದಿನ ವರ್ಷ ಕುಂಭ ರಾಶಿಯವರಿಗೆ ಶನಿ ಸಾಡೇ ಸಾತಿಯ ಎರಡನೇ ಹಂತ ಆರಂಭವಾಗಲಿದೆ. ಇದರ ಪ್ರಭಾವದಿಂದಾಗಿ ವ್ಯಾಪಾರ-ವ್ಯವಹಾರದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸಬಹುದು. ಕುಟುಂಬದಿಂದ ದೂರವಾಗುವ ಸಾಧ್ಯತೆಯೂ ಇದೆ. 

8 /10

ಮೀನ ರಾಶಿ:  ಮೀನ ರಾಶಿಯವರಿಗೆ 2024ರಲ್ಲಿ ಶನಿ ಸಾಡೇಸಾತಿಯ ಮೊದಲ ಹಂತ ಆರಂಭವಾಗಲಿದೆ. ಈ ಹಂತವು ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಣದ ನಷ್ಟದ ಜೊತೆಗೆ ಭಾರೀ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. 

9 /10

ಶನಿ ಸಾಡೇಸಾತಿ, ಧೈಯಾ ಪ್ರಭಾವವನ್ನು ಕಡಿಮೆ ಮಾಡಲು ಶನಿವಾರದಂದು ಶನಿ ದೇವರನ್ನು ಪೂಜಿಸಿ, ಶನಿಸ್ತೋತ್ರವನ್ನು ಪಠಿಸಬೇಕು. ಕಪ್ಪು ವಸ್ತುಗಳನ್ನು ಅಗತ್ಯವಿದ್ದವರಿಗೆ ದಾನ ಮಾಡುವುದರಿಂದ ಶನಿಯ ಪ್ರಭಾವ ಕಡಿಮೆಯಾಗುತ್ತದೆ. ಪ್ರತಿ ಮಂಗಳವಾರ ಮತ್ತು ಶನಿವಾರ ಹನುಮಾನ್ ಚಾಲೀಸಾವನ್ನು ಪಠಿಸಬೇಕು. 

10 /10

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.