ಜುಲೈ 2022 ರಲ್ಲಿ ಶನಿ ದೇವ್ ರಾಶಿಚಕ್ರ ಬದಲಾವಣೆ: ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿಯು ಕರ್ಮಗಳಿಗೆ ತಕ್ಕ ಫಲ ನೀಡುತ್ತಾನೆ. ಹಾಗಾಗಿಯೇ ಇವನನ್ನು ಕರ್ಮಫಲದಾತ ಎಂತಲೂ ಕರೆಯಲಾಗುತ್ತದೆ. ಜಾತಕದಲ್ಲಿ ಶನಿ ಸಾಡೇ ಸಾತಿ ಅಥವಾ ಧೈಯಾ ಪ್ರಭಾವ ಇದ್ದರೆ ಶನಿಯು ಅಂತಹವರನ್ನು ಬೆಂಬಿಡದೆ ಕಾಡುತ್ತಾನೆ ಎಂದು ನಂಬಲಾಗಿದೆ. ಶನಿಯ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ತನ್ನದೇ ಆದ ಪ್ರಭಾವ ಉಂಟು ಮಾಡುತ್ತದೆ. 


COMMERCIAL BREAK
SCROLL TO CONTINUE READING

ಇತರ ಗ್ರಹಗಳಂತೆ,  ಶನಿ ದೇವನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸದ್ಯ ಕುಂಭ ರಾಶಿಯಲ್ಲಿರುವ ಶನಿಯು ಮುಂದಿನ ತಿಂಗಳು ಅಂದರೆ ಜುಲೈ 12 ರಂದು ಅವರು ಹಿಮ್ಮುಖ ಸ್ಥಿತಿಯಲ್ಲಿ ಮಕರ ರಾಶಿಯಲ್ಲಿ ಸಾಗುತ್ತಾರೆ.  ಮುಂದಿನ ವರ್ಷ ಜನವರಿ ತನಕ ಶನಿಯು ಮಕರ ರಾಶಿಯಲ್ಲಿಯೇ ಇರಲಿದ್ದಾರೆ. ಈ ಸಮಯದಲ್ಲಿ ಶನಿಯು ಮೂರು ರಾಶಿ ಚಕ್ರದ ಜನರ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಮುಂದಿನ 20 ದಿನಗಳ ಬಳಿಕ ಈ ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಚಕ್ರ ಚಿಹ್ನೆಗಳು ಯಾವುವು ತಿಳಿಯೋಣ...


ಇದನ್ನೂ ಓದಿ- Shani Gochar: ಶನಿಯ ವಕ್ರ ದೃಷ್ಟಿಯಿಂದ ಮುಕ್ತಿ- ಜುಲೈನಿಂದ ಖುಲಾಯಿಸಲಿದೆ ಈ 2 ರಾಶಿಯವರ ಅದೃಷ್ಟ


ಮುಂದಿನ ತಿಂಗಳು ಶನಿ ಸಂಚಾರದಿಂದ ಈ ರಾಶಿಯವರಿಗೆ ಎದುರಾಗಲಿದೆ ಸಂಕಷ್ಟ:
ಈ ರಾಶಿಯವರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸುವಿರಿ:
ಮೇಷ ರಾಶಿ:
ಈ ರಾಶಿಯವರಿಗೆ 20 ದಿನಗಳ ನಂತರ ಕೆಲಸದಲ್ಲಿ ಅಡೆತಡೆಗಳು ಕಾಣಿಸಿಕೊಳ್ಳುತ್ತವೆ. ಅವರು ಗಳಿಸಿದ್ದಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಕುಟುಂಬದಲ್ಲಿ ಅಶಾಂತಿಯ ವಾತಾವರಣವಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಷ್ಟ ಉಂಟಾಗಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸುವಿರಿ. ಕುಟುಂಬದಲ್ಲಿ ಕೆಲವು ಅಹಿತಕರ ಘಟನೆಗಳು ಕೇಳಿಬರುತ್ತವೆ. ಈ ಸಂದರ್ಭಗಳಲ್ಲಿ, ಶನಿದೇವನನ್ನು ಮೆಚ್ಚಿಸಲು, ಪ್ರತಿ ಮಂಗಳವಾರ ಮತ್ತು ಶನಿವಾರದಂದು ದೇವಸ್ಥಾನಕ್ಕೆ ಹೋಗಬೇಕು. ಅಲ್ಲಿ ನೀವು ಹನುಮಾನ್ ಚಾಲೀಸಾ ಮತ್ತು ಶನಿ ಚಾಲೀಸಾವನ್ನು ಪಠಿಸುವುದರ ಮೂಲಕ ಮತ್ತು ಅವುಗಳನ್ನು ಪ್ರಾಮಾಣಿಕ ಹೃದಯದಿಂದ ಸ್ಮರಿಸುವ ಮೂಲಕ ಈ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. 


ಈ ರಾಶಿಯ ಜನರಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು :
ಸಿಂಹ ರಾಶಿ:
ಮುಂದಿನ 6 ತಿಂಗಳು ಕೂಡ ಈ ರಾಶಿಯವರಿಗೆ ತ್ರಾಸದಾಯಕವಾಗಿರುತ್ತದೆ. ವ್ಯಾಪಾರದಲ್ಲಿ ನಷ್ಟವನ್ನು ಎದುರಿಸಬೇಕಾಗುತ್ತದೆ. ನೀವು ಯಾವುದೇ ನ್ಯಾಯಾಲಯ-ಕೋರ್ಟ್ ವ್ಯವಹಾರದಲ್ಲಿ ಸಿಕ್ಕಿಬೀಳಬಹುದು. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು. ಕುಟುಂಬದಲ್ಲಿ ಗೊಂದಲದ ವಾತಾವರಣ ಉಂಟಾಗಬಹುದು. ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನೀವು ಕುಟುಂಬದಲ್ಲಿ ಕೆಲವು ಹಠಾತ್ ಅನಾರೋಗ್ಯವನ್ನು ಎದುರಿಸಬೇಕಾಗಬಹುದು. ಈ ಸಮಸ್ಯೆಗಳನ್ನು ಹೋಗಲಾಡಿಸಲು, ನೀವು ಪ್ರತಿ ಶನಿವಾರದಂದು ಹಸುವಿಗೆ ಹಸಿರು ಮೇವು ಹಾಕಿ ಮತ್ತು ಮನೆಯಲ್ಲಿ ಶನಿ ಮಂತ್ರಗಳನ್ನು ಪಠಿಸುವುದರಿಂದ ಪರಿಹಾರ ಪಡೆಯಬಹುದು.


ಇದನ್ನೂ ಓದಿ- ಈ ಸಂಕೇತಗಳು ನಿಮಗೂ ಸಿಕ್ಕರೆ ಶನಿ ಮಹಾತ್ಮನ ಕೃಪೆ ನಿಮ್ಮ ಮೇಲಿದೆ ಎಂದರ್ಥ


ಈ ರಾಶಿಯವರಿಗೆ ಅನಾರೋಗ್ಯ ಕಾಡಬಹುದು:-
ಧನು ರಾಶಿ: ಈ ರಾಶಿಯ ಜನರು 20 ದಿನಗಳ ನಂತರ ಶನಿದೇವನ ದುಷ್ಟ ದೃಷ್ಟಿಗೆ ಬಲಿಯಾಗಬೇಕಾಗಬಹುದು. ಇದರಿಂದಾಗಿ ಕೆಲವು ದೀರ್ಘಕಾಲದ ಕಾಯಿಲೆಗಳು ಹೊರಹೊಮ್ಮಬಹುದು. ಕೊಟ್ಟ ಹಣ ಕೈ ತಪ್ಪಬಹುದು. ಇದ್ದಕ್ಕಿದ್ದಂತೆ ಹೊಸ ರೋಗವು ನಿಮ್ಮನ್ನು ಸುತ್ತುವರಿಯಬಹುದು. ಕಷ್ಟಪಟ್ಟಷ್ಟೂ ಫಲ ಸಿಗುತ್ತದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಶನಿದೇವನ ಈ ಅಸಮಾಧಾನವನ್ನು ಶಮನಗೊಳಿಸಲು, ನೀವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ಪ್ರತಿ ಶನಿವಾರದಂದು ಅರಳಿ ಮರವನ್ನು ಪೂಜಿಸಬೇಕು. ಅಲ್ಲದೆ, ಪ್ರತಿ ಶನಿವಾರ ಸಾಸಿವೆ ಎಣ್ಣೆಯನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.