Shani Margi 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಪುತ್ರ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿಯು ನಮ್ಮ ಕರ್ಮಗಳಿಗೆ ತಕ್ಕಂತೆ ಫಲ ನೀಡುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿಯೇ, ಶನಿ ಗ್ರಹದಲ್ಲಿನ ಸಣ್ಣ ಬದಲಾವಣೆಯನ್ನೂ ಸಹ ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿದ್ದರೆ ಅವರ ಪ್ರತಿ ಕೆಲಸದಲ್ಲೂ ಯಶಸ್ಸು ಕೈ ಹಿಡಿಯಲಿದೆ. ಅದೇ ಸಮಯದಲ್ಲಿ ಶನಿಯ ವಕ್ರ ದೃಷ್ಟಿಯು ಅವರ ಜೀವನವನ್ನೇ ನಾಶಪಡಿಸುತ್ತದೆ ಎಂದು ಹೇಳಲಾಗುತ್ತದೆ. ಅಂತೆಯೇ ಜ್ಯೋತಿಷ್ಯದಲ್ಲಿ, ಶನಿಯ ಹಿಮ್ಮುಖ ಚಲನೆಯನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಅಕ್ಟೋಬರ್ 23 ರಿಂದ ಶನಿಗ್ರಹದ ನೇರ ನಡೆ ಆರಂಭವಾಗಿದೆ. ಶನಿಯ ನೇರ ಸಂಚಾರವು, ನಾಲ್ಕು ರಾಶಿಯವರಿಗೆ ತುಂಬಾ ಅಶುಭಕರ ಎಂದು ಸಾಬೀತುಪಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ಜನವರಿ 17, 2023 ರವರೆಗೆ ಬಹಳ ಹುಷಾರಾಗಿರಬೇಕು ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಶನಿಯ ನೇರ ಸಂಚಾರದಿಂದ ಈ 4 ರಾಶಿಯವರಿಗೆ ಸಂಕಷ್ಟ:
ಮಿಥುನ ರಾಶಿ:
ಮಾರ್ಗಿ ಶನಿಯು ಮಿಥುನ ರಾಶಿಯವರಿಗೆ ಪ್ರತಿಕೂಲವಾದ ಸಮಯವನ್ನು ನೀಡಬಹುದು. ಈ ಸಮಯದಲ್ಲಿ ಈ ರಾಶಿಯವರು ಆರೋಗ್ಯದ ಬಗ್ಗೆ ಗಮನ ಕೊಡುವುದು ಒಳ್ಳೆಯದು. ಸೋಮಾರಿತನವನ್ನು ತಪ್ಪಿಸಿ. ಸೋದರ ಸಂಬಂಧಗಳು ಹದಗೆಡಬಹುದು. 


ವೃಶ್ಚಿಕ ರಾಶಿ: ಶನಿಯ ನೇರ ಸಂಚಾರದಿಂದ ವೃಶ್ಚಿಕ ರಾಶಿಯವರ ಜೀವನದಲ್ಲಿ ಕಷ್ಟಗಳು ಹೆಚ್ಚಾಗಬಹುದು. ಈ ರಾಶಿಯವರು ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಬೇಕು. ಸಹೋದ್ಯೋಗಿಗಳೊಂದಿಗೆ ವಾದ ಮಾಡಬೇಡಿ. ನಿಮ್ಮ ಮಾತನ್ನು ನಿಯಂತ್ರಿಸಿ. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು, ನೀವು ತುಂಬಾ ಶ್ರಮಿಸಬೇಕು.


ಇದನ್ನೂ ಓದಿ- Shukra Gochar: ನವೆಂಬರ್ 11ರಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ


ಧನು ರಾಶಿ: ಮಾರ್ಗಿ ಶನಿಯು ಧನು ರಾಶಿಯವರ ಖರ್ಚುಗಳನ್ನು ಹೆಚ್ಚಿಸಬಹುದು. ಸಾಲ ಹೆಚ್ಚಾಗಬಹುದು. ಆದ್ದರಿಂದ ಯಾವುದೇ ಕೆಲಸಕ್ಕಾಗಿ ಹಣ ವ್ಯರ್ಥ ಮಾಡುವ ಮೊದಲು ಬಜೆಟ್ ತಯಾರಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 


ಮಕರ ರಾಶಿ: ಶನಿಯು ಮಕರ ರಾಶಿಯಲ್ಲಿದ್ದು  ಈ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಸ್ವ ರಾಶಿಯಲ್ಲಿ ಶನಿಯ ನೇರ ನಡೆಯ ಪರಿಣಾಮವಾಗಿ ಮಕರ ರಾಶಿಯವರಿಗೆ ಒತ್ತಡ ಹೆಚ್ಚಲಿದೆ. ವ್ಯವಹಾರದಲ್ಲಿ ಸಮಸ್ಯೆಗಳಿರಬಹುದು. ಖರ್ಚು ಹೆಚ್ಚಾಗಲಿದೆ. ಕಿರಿಯ ಸಹೋದರರ ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ಅಗತ್ಯ. 


ಇದನ್ನೂ ಓದಿ- Vastu Tips: ಮನೆಯ ಈ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಡುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ


ಶನಿಯ ಕೆಟ್ಟ ಪರಿಣಾಮವನ್ನು ತಪ್ಪಿಸಲು ಪರಿಹಾರಗಳು:
- ಪ್ರತಿ ಶನಿವಾರ ಸಾಸಿವೆ ಎಣ್ಣೆಯನ್ನು ದಾನ ಮಾಡಿ. 
- ಪ್ರತಿ ಶನಿವಾರದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. 
- ಶನಿಯ ಮಂತ್ರಗಳನ್ನು ಪಠಿಸಿ. 
- ಶನಿ ಚಾಲೀಸಾ ಓದಿ. 
- ಅಗತ್ಯವಿರುವವರಿಗೆ ಸಹಾಯ ಮಾಡಿ. ವಿಶೇಷವಾಗಿ ಅಸಹಾಯಕ, ದುಡಿಯುವ ಕಾರ್ಮಿಕರೊಂದಿಗೆ ಗೌರವದಿಂದ ಮಾತನಾಡಿ. 
- ಸ್ವಚ್ಛತಾ ಸಿಬ್ಬಂದಿಯೊಂದಿಗೆ ಗೌರವಯುತವಾಗಿ ಮಾತನಾಡಿ. 
- ಬಡವರಿಗೆ ಆಹಾರವನ್ನು ಒದಗಿಸಿ. 
- ನಾಯಿಗೆ ಆಹಾರವನ್ನು ನೀಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.