Shukra Gochar: ನವೆಂಬರ್ 11ರಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ, ಶುಕ್ರ ಕರುಣಿಸಲಿದ್ದಾನೆ ಅಪಾರ ಸಂತೋಷ

Shukra Gochar 2022: ನವೆಂಬರ್ 11ರಂದು ಸುಖ-ಸಂಪತ್ತು, ಐಶಾರಾಮಿ ಜೀವನ ಕಾರಕನಾದ ಶುಕ್ರನು ರಾಶಿ ಚಕ್ರವನ್ನು ಬದಲಾಯಿಸುತ್ತಿದ್ದಾನೆ. ಶುಕ್ರನ ಈ ರಾಶಿ ಬದಲಾವಣೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ ಕೆಲವು ರಾಶಿಯವರಿಗೆ ಈ ಸಮಯವನ್ನು ಸುವರ್ಣ ಸಮಯ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Nov 3, 2022, 07:05 AM IST
  • ನವೆಂಬರ್ 11ರಂದು ಸುಖ-ಸಂಪತ್ತು, ಐಶಾರಾಮಿ ಜೀವನ ಕಾರಕನಾದ ಶುಕ್ರನು ರಾಶಿ ಚಕ್ರವನ್ನು ಬದಲಾಯಿಸುತ್ತಿದ್ದಾನೆ.
  • ಶುಕ್ರನ ಈ ರಾಶಿ ಬದಲಾವಣೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
  • ಆದರೂ ಕೆಲವು ರಾಶಿಯವರಿಗೆ ಈ ಸಮಯವನ್ನು ಸುವರ್ಣ ಸಮಯ ಎಂದು ಹೇಳಲಾಗುತ್ತಿದೆ.
Shukra Gochar: ನವೆಂಬರ್ 11ರಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ, ಶುಕ್ರ ಕರುಣಿಸಲಿದ್ದಾನೆ ಅಪಾರ ಸಂತೋಷ  title=
Shukra gochar 2022

Shukra Rashi Parivartan: ಪ್ರತಿ ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತವೆ. ಗ್ರಹಗಳ ಸಣ್ಣ ಬದಲಾವಣೆಯೂ ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟುಮಾಡುತ್ತವೆ.  ನವೆಂಬರ್ 11ರಂದು ಸುಖ-ಸಂಪತ್ತು, ಐಶಾರಾಮಿ ಜೀವನ ಕಾರಕನಾದ ಶುಕ್ರನು ರಾಶಿ ಚಕ್ರವನ್ನು ಬದಲಾಯಿಸುತ್ತಿದ್ದಾನೆ. ಶುಕ್ರನ ಈ ರಾಶಿ ಬದಲಾವಣೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ ಕೆಲವು ರಾಶಿಯವರಿಗೆ ಈ ಸಮಯವನ್ನು ಸುವರ್ಣ ಸಮಯ ಎಂದು ಹೇಳಲಾಗುತ್ತಿದೆ. 

ಶುಕ್ರನು ಪ್ರಸ್ತುತ ತುಲಾ ರಾಶಿಯಲ್ಲಿದ್ದಾರೆ. ನವೆಂಬರ್ 11ರಂದು ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾರೆ. ಶುಕ್ರನ ಈ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರು ಅಪಾರ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ....

ಶುಕ್ರ ರಾಶಿ ಪರಿವರ್ತನೆ: ಐದು ರಾಶಿಯವರಿಗೆ ತುಂಬಾ ಶುಭ :-
ಸಿಂಹ ರಾಶಿ: 

ಶುಕ್ರನ ರಾಶಿ ಬದಲಾವಣೆಯು ಸಿಂಹ ರಾಶಿಯ ಜನರಿಗೆ ಬಲವಾದ ಪ್ರಯೋಜನಗಳನ್ನು ನೀಡುತ್ತದೆ. ನವೆಂಬರ್ 11ರ ನಂತರ ಸಿಂಹ ರಾಶಿಯವರಿಗೆ ಹಲವು ರೀತಿಯ ಸೌಕರ್ಯಗಳು ದೊರೆಯಲಿವೆ. ಈ ಸಮಯದಲ್ಲಿ ನೀವು ಯಾವುದೇ ಹೊಸ ಕೆಲಸವನ್ನು ಆರಂಭಿಸಿದರೆ ಅದರಿಂದ ಅಪಾರ ಲಾಭವನ್ನು ಗಳಿಸುವಿರಿ. ಉದ್ಯೋಗ ಮಾಡುವವರಿಗೆ ಈ ಅವಧಿಯಲ್ಲಿ ಬಡ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.

ಇದನ್ನೂ ಓದಿ- Money Tips: ನಿಮ್ಮ ಪರ್ಸ್‌ನಲ್ಲಿ ಈ ಸಣ್ಣ ವಸ್ತು ಇದ್ದರೆ ಎಂದಿಗೂ ಹಣದ ಕೊರತೆ ಎದುರಾಗಲ್ಲ!

ತುಲಾ ರಾಶಿ: 
ತುಲಾ ರಾಶಿಯವರಿಗೆ ಶುಕ್ರನ ಈ ರಾಶಿ ಬದಲಾವಣೆಯಿಂದ ಒಳ್ಳೆಯ ಸುದ್ದಿ ಸಿಗಲಿದೆ. ಈ ರಾಶಿಯವರು ಈ ಸಮಯದಲ್ಲಿ ಎಲ್ಲಿಂದಲಾದರೂ ಹಠಾತ್ ಹಣದ ಲಾಭವನ್ನು ಪಡೆಯುತ್ತಾರೆ, ಅದು ಅವರ ಆರ್ಥಿಕ ಸ್ಥಿತಿಯನ್ನು ಬಲಗೊಳಿಸುತ್ತದೆ. ಇದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ನೀವು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಇದು ಅತ್ಯುತ್ತಮ ಸಮಯ.

ಧನು ರಾಶಿ:
ಶುಕ್ರನ ರಾಶಿಯ ಬದಲಾವಣೆಯು ಧನು ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಈ ಸಮಯದಲ್ಲಿ ವಿವಾಹಿತರು ತುಂಬಾ ಸಂತೋಷವಾಗಿರುತ್ತಾರೆ, ಅವರ ನಡುವಿನ ಸಂಬಂಧವು ಬಲವಾಗಿರುತ್ತದೆ. 

ಮಕರ ರಾಶಿ:
ನವೆಂಬರ್ 11 ರಿಂದ, ಮಕರ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಈ ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದು. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಆರ್ಥಿಕ ಲಾಭ ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿಯ ಅವಕಾಶವೂ ದೊರೆಯುತ್ತದೆ. ನೀವು ವಾಹನ ಅಥವಾ ಮನೆಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ನಿಮ್ಮ ಕನಸು ಈಗ ನನಸಾಗಿಸಬಹುದು.

ಇದನ್ನೂ ಓದಿ- Vastu Tips: ಮನೆಯ ಈ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಡುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ

ಕುಂಭ ರಾಶಿ: 
ಕುಂಭ ರಾಶಿಯವರಿಗೆ ಶುಕ್ರ ಸಂಕ್ರಮವು ಬಹಳ ಫಲಕಾರಿಯಾಗಲಿದೆ. ಕಛೇರಿಯಲ್ಲಿ ನೀಡಿದ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ, ಇದರಿಂದಾಗಿ ಮೇಲಧಿಕಾರಿಗಳು ಸಂತೋಷಪಡುತ್ತಾರೆ ಮತ್ತು ಪ್ರಶಂಸೆಯನ್ನೂ ನೀಡುತ್ತಾರೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ವೃತ್ತಿಯ ದೃಷ್ಟಿಯಿಂದ, ಕುಂಭ ರಾಶಿಯವರಿಗೆ ಈ ಸಮಯವು ತುಂಬಾ ಮಂಗಳಕರವಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತ ಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News