Venus transit in Cancer: ವೈದಿಕ ಜ್ಯೋತಿಷ್ಯ‌ ಶಾಸ್ತ್ರದ ಪ್ರಕಾರ, ಕಳೆದ ವಾರವಷ್ಟೇ ರಾಶಿ ಪರಿವರ್ತನೆ ಹೊಂದಿ ಕರ್ಕಾಟಕ ರಾಶಿ ಪ್ರವೇಶಿಸಿರುವ ಶುಕ್ರನು ಮುಂದಿನ 32 ದಿನಗಳವರೆಗೆ ಎಂದರೆ ಜುಲೈ 7, 2023 ರವರೆಗೆ ಇದೇ ರಾಶಿ ಚಕ್ರದಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಂಪತ್ತು-ಐಷಾರಾಮಿ, ವೈಭವ, ಪ್ರೀತಿ-ಸೌಂದರ್ಯಗಳ ಅಂಶವೆಂದು ಪರಿಗಣಿಸಲಾಗಿದೆ. ಕರ್ಕ ರಾಶಿಯಲ್ಲಿರುವ ಶುಕ್ರನು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತಾನಾದರೂ, ಈ ಸಮಯದಲ್ಲಿ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯುತ್ತವೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈ 7 ರವರೆಗೆ ಕರ್ಕಾಟಕ ರಾಶಿಯಲ್ಲಿ ಸಂಚರಿಸಲಿರುವ  ಶುಕ್ರನು ಕೆಲವು ರಾಶಿಯ ಜನರ ಮೇಲೆ ಅಪಾರ ಆಶೀರ್ವಾದವನ್ನು ಸುರಿಸಲಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಯವರು ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವನ್ನೂ, ಉದ್ಯೋಗದಲ್ಲಿ ಅಪಾರ ಪ್ರಗತಿಯನ್ನು ಪಡೆಯಲಿದ್ದಾರೆ ಎನ್ನಲಾಗಿದೆ.  


ಇದನ್ನೂ ಓದಿ- Shiv Chalisa: ಸೋಮವಾರ ಶಿವ ಚಾಲೀಸಾ ಪಠಿಸಿದ್ರೆ ಭೋಲೇನಾಥ್ ನಿಮ್ಮ ಎಲ್ಲಾ ಆಸೆ ಪೂರೈಸುತ್ತಾನೆ!


ಕರ್ಕ ರಾಶಿಯಲ್ಲಿ ಶುಕ್ರನ ಗೋಚಾರ: ಮುಂದಿನ 32 ದಿನಗಳವರೆಗೆ ಈ ರಾಶಿಯವರಿಗೆ ಬಂಗಾರದ ಸಮಯ:
ಮೇಷ ರಾಶಿ:

ಶುಕ್ರ ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಹಣಕಾಸಿನ ಮೂಲಗಳನ್ನು ಹೆಚ್ಚಿಸಲಿದ್ದು, ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಕಾಮಗಾರಿಗಳು ವೇಗವನ್ನು ಪಡೆಯಲಿವೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಇದರಿಂದಾಗಿ, ವ್ಯಾಪಾರವನ್ನು ವಿಸ್ತರಿಸಲು ಚಿಂತಿಸುತ್ತಿರುವವರಿಗೆ ಅನುಕೂಲವಾಗಲಿದೆ. ಇನ್ನೂ ಉದ್ಯೋಗಸ್ಥರಿಗೂ ಸಮಯ ಉತ್ತಮವಾಗಿದ್ದು ಪ್ರಮೋಷನ್ ದೊರೆಯುವ ಸಾಧ್ಯತೆ ಇದೆ.  


ಮಿಥುನ   ರಾಶಿ: 
ಕರ್ಕಾಟಕ ರಾಶಿಯಲ್ಲಿ ಶುಕ್ರ ಸಂಕ್ರಮವು ಮಿಥುನ ರಾಶಿಯವರಿಗೆ ಮಂಗಳಕರ ಸಮಯ ಎಂದು ಸಾಬೀತುಪಡಿಸಲಿದೆ. ಮುಂದಿನ 32 ದಿನಗಳವರೆಗೆ ಈ ರಾಶಿಯವರಿಗೆ ವ್ಯಾಪಾರ ವ್ಯವಹಾರದಲ್ಲಿ ಸಂಪತ್ತಿನ ಹೊಳೆಯೇ ಹರಿಯಲಿದ್ದು ಸುಖ-ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ. ಪ್ರೇಮ ಜೀವನವೂ ಆನಂದಮಯವಾಗಿರಲಿದ್ದು ನಿಮ್ಮ ಬಹುದಿನದ ಕನಸುಗಳು ನನಸಾಗುವ ಅತ್ಯುತ್ತಮ ಸಮಯ ಇದಾಗಿರಲಿದೆ. ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಇದನ್ನು ನಿಮ್ಮ ವೃತ್ತಿ, ವೈಯಕ್ತಿಕ ಜೀವನದ ದೃಷ್ಟಿಯಿಂದ ಬಂಗಾರದ ಸಮಯ ಎಂತಲೇ ಹೇಳಬಹುದು. 


ಇದನ್ನೂ ಓದಿ- Vastu Tips: ಮನೆಯ ಮುಖ್ಯ ಬಾಗಿಲಿನಲ್ಲಿ ಈ ಕೆಲಸ ಮಾಡಿದ್ರೆ ಲಕ್ಷ್ಮಿದೇವಿ ಓಡಿ ಬರುತ್ತಾಳೆ!


ಮೀನ ರಾಶಿ: 
ಕರ್ಕ ರಾಶಿಯಲ್ಲಿ ಶುಕ್ರನ ಪ್ರವೇಶದೊಂದಿಗೆ ಈ ರಾಶಿಯವರಿಗೆ ಶುಭ ದಿನಗಳು ಆರಂಭವಾಗಿವೆ. ಮುಂದಿನ 07 ಜುಲೈ 2023ರವೆರೆಗೆ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಇದರಿಂದಾಗಿ, ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭದ ಸಾಧ್ಯತೆ ಇದ್ದು, ಇದ್ದಕ್ಕಿದ್ದಂತೆ ನೀವು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು. ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗಲಿದೆ. ಈ ವೇಳೆ ಹೂಡಿಕೆಯಿಂದ ಉತ್ತಮ ಲಾಭವಾಗಲಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ