Makara sankranti 2023 : ಮಕರ ಸಂಕ್ರಾಂತಿ ದಿನ ರೂಪುಗೊಳ್ಳುತ್ತಿದೆ ಅದ್ಭುತ ಯೋಗ! ಈ ಬಾರಿ ಪೊಂಗಲ್ ಮಾಡಲೇಬೇಕಂತೆ.!
Makara sankranti 2023 : ಈ ವರ್ಷದ ಮಕರ ಸಂಕ್ರಾಂತಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿದೆ. ಈ ಬಾರಿ ಶನಿ ಮತ್ತು ಸೂರ್ಯ ಮಕರ ರಾಶಿಯಲ್ಲಿ ಭೇಟಿಯಾಗುತ್ತಿದ್ದಾರೆ.
Makara sankranti 2023 : ಜನವರಿ 14 2023 ರಂದು , ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬ ಜ್ಯೋತಿಷ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಈ ದಿನದಂದು ಗ್ರಹಗಳ ರಾಜನಾದ ಸೂರ್ಯನು ತನ್ನ ಪುತ್ರ ಶನಿಯ ರಾಶಿಯನ್ನು ಪ್ರವೇಶಿಸುತ್ತಾನೆ. ಮಕರ ರಾಶಿಯ ಅಧಿಪತಿ ಶನಿ. ಸೂರ್ಯ ಈ ದಿನ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಹಾಗಾಗಿ ಈ ಸಂಕ್ರಾಂತಿಯನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನ ಸ್ನಾನ, ದಾನ, ಸತ್ಕಾರ್ಯಗಳಿಗೆ ಹೆಚ್ಚಿನ ಮಹತ್ವವಿದೆ. ಈ ವರ್ಷದ ಮಕರ ಸಂಕ್ರಾಂತಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿದೆ. ಈ ಬಾರಿ ಶನಿ ಮತ್ತು ಸೂರ್ಯ ಮಕರ ರಾಶಿಯಲ್ಲಿ ಭೇಟಿಯಾಗುತ್ತಿದ್ದಾರೆ.
ಮಕರ ಸಂಕ್ರಾಂತಿಯಂದು ಮಾಡುವ ಪೊಂಗಲ್ ಮತ್ತು ಶನಿಯ ನಡುವಿನ ಸಂಬಂಧ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ಸಂಕ್ರಾಂತಿಯ ದಿನದಂದು ತಯಾರಿಸುವ ಪೊಂಗಲ್ ಗೂ ಗ್ರಹಗಳಿಗೂ ಸಂಬಂಧವಿದೆ. ಪೊಂಗಲ್ ತಯಾರಿಸಲು ಬಯಸುವ ಪದಾರ್ಥಗಳು ಯಾವುದಾದರೊಂದು ಗ್ರಹವನ್ನು ಪ್ರತಿನಿಧಿಸುತ್ತವೆ. ಉದಾಹರಣೆಗೆ, ಅಕ್ಕಿ ಚಂದ್ರನಿಗೆ ಸಂಬಂಧಿಸಿದ್ದಾಗಿದೆ. ಬೇಳೆ ಶನಿಗೆ ಸಂಬಂಧಿಸಿದ್ದರೆ, ಅರಿಶಿನವು ಗುರುವಿಗೆ ಸಂಬಂಧಿಸಿದೆ. ಇನ್ನು ತುಪ್ಪವು ಸೂರ್ಯನಿಗೆ ಸಂಬಂಧಿಸಿದ್ದಾಗಿದೆ. ಈ ರೀತಿಯಾಗಿ, ಮಕರ ಸಂಕ್ರಾಂತಿಯ ದಿನದಂದು ಪೊಂಗಲ್ ತಿಂದರೆ ಎಲ್ಲಾ ಗ್ರಹಗಳು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತವೆ. ಇದರ ಹೊರತಾಗಿ, ಪೊಂಗಲ್ ನಲ್ಲಿ ಬಳಸುವ ವಸ್ತುಗಳನ್ನು ದಾನ ಮಾಡುವುದರಿಂದಲೂ ಪ್ರಯೋಜನವಾಗಲಿದೆ. ಇದರಿಂದ ಸಂತೋಷ, ಸಮೃದ್ಧಿ, ನೆಲೆಯಾಗಿ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಈ ವರ್ಷ, ಮಕರ ರಾಶಿಯಲ್ಲಿ ಶನಿ-ಸೂರ್ಯನ ಸಂಯೋಗದಂದು, ಪೊಂಗಲ್ ತಿಂದು ಅದನ್ನು ದಾನ ಮಾಡುವುದರಿಂದ ಶನಿದೇವನ ಪ್ರಚಂಡ ಅನುಗ್ರಹ ದೊರೆಯುತ್ತದೆ.
ಇದನ್ನೂ ಓದಿ : Vastu Tips : ನಿಮ್ಮ ಮನೆಯ ಕನ್ನಡಿಯಲ್ಲಿ ಅಡಗಿದೆ ನೀವು ಶ್ರೀಮಂತರಾಗುವ ರಹಸ್ಯ, ಅದೃಷ್ಟಕ್ಕೆ ಈ ಕೆಲಸ
ಮಕರ ಸಂಕ್ರಾಂತಿಯಂದು ಪೊಂಗಲ್ ತಿನ್ನುವ ಪರಿಪಾಠ ಆರಂಭವಾದದ್ದು ಹೇಗೆ ? :
ಅಂದಹಾಗೆ, ಮಕರ ಸಂಕ್ರಾಂತಿಯಂದು ಪೊಂಗಲ್ ತಿನ್ನುವ ಪರಿಪಾಠದ ಹಿಂದೆ ಅನೇಕ ಕಾರಣಗಳಿವೆ, ಕತೆಗಳಿವೆ. ಆ ನಂಬಿಕೆಗಳ ಪ್ರಕಾರ, ಅಲಾವುದ್ದೀನ್ ಖಿಲ್ಜಿಯೊಂದಿಗಿನ ಯುದ್ಧದ ಸಮಯದಲ್ಲಿ ನಾಥ ಯೋಗಿ ತುಂಬಾ ದುರ್ಬಲಗೊಂಡು ಹಸಿವಿನಿಂದ ಅವನ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ನಂತರ ಗೋರಖನಾಥರು ಬೇಳೆ, ಅಕ್ಕಿ ಒಟ್ಟಿಗೆ ಬೇಯಿಸಿ ಎಲ್ಲರಿಗೂ ಪೊಂಗಲ್ ತಿನ್ನಿಸಿದರು. ನಾಥ ಯೋಗಿಗಳು ಇದರಿಂದ ತ್ವರಿತ ಶಕ್ತಿಯನ್ನು ಪಡೆದದ್ದು ಮಾತ್ರವಲ್ಲ ಅವರ ಆರೋಗ್ಯವೂ ಸುಧಾರಿಸಿತು ಎನ್ನಲಾಗಿದೆ. ಅಂದಿನಿಂದ, ಅವರ ಗೌರವಾರ್ಥವಾಗಿ ಮಕರ ಸಂಕ್ರಾಂತಿಯಂದು ಪೊಂಗಲ್ ಮಾಡುವ ಸಂಪ್ರದಾಯ ಪ್ರಾರಂಭವಾಯಿತಂತೆ.
ಇದನ್ನೂ ಓದಿ : Astro Tips: ಲಾಲ್ ಕಿತಾಬ್‌ನ ಈ ಸಲಹೆ ಪಾಲಿಸಿದ್ರೆ ನಿಮ್ಮ ಬಡತನ ದೂರವಾಗಿ ಸಿರಿವಂತಿಕೆ ಹೆಚ್ಚುತ್ತದೆ!
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.