ನವದೆಹಲಿ: ಶ್ರಾವಣ ಮಾಸವು ಶಿವನ ಭಕ್ತರಿಗೆ ಬಹಳ ವಿಶೇಷವಾಗಿದೆ. ಈ ತಿಂಗಳ ಸೋಮವಾರವು ವಿಭಿನ್ನ ಮಹತ್ವವನ್ನು ಹೊಂದಿದೆ. ಆದರೆ ಶ್ರಾವಣದ ಪ್ರತಿ ದಿನವೂ ಮಂಗಳಕರ ಮತ್ತು ಪ್ರಯೋಜನಕಾರಿ. ಭಗವಾನ್ ಭೋಲೇನಾಥನು ಶ್ರಾವಣ ಮಾಸದಲ್ಲಿ ಭಕ್ತರಿಗೆ ವಿಶೇಷ ಅನುಗ್ರಹ ನೀಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ತಿಂಗಳಲ್ಲಿ ಜನರು ತಮ್ಮ ವಿವಿಧ ಇಷ್ಟಾರ್ಥಗಳು ಈಡೇರಿಸಿಕೊಳ್ಳಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು.


COMMERCIAL BREAK
SCROLL TO CONTINUE READING

ಸಂಪತ್ತು ಮತ್ತು ಸಮೃದ್ಧಿಗೆ ಶ್ರಾವಣ ಮಾಸ  


ಶ್ರಾವಣ ತಿಂಗಳು ಭಗವಾನ್ ಶಿವನಿಗೆ ತುಂಬಾ ಪ್ರಿಯವಾಗಿದೆ ಮತ್ತು ಈ ತಿಂಗಳು ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಈ ತಿಂಗಳು ಸಣ್ಣ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ನೀವು ಸುಲಭವಾಗಿ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಬಹುದು. ಆದ್ದರಿಂದ ಇಂದು ನಾವು ನಿಮಗೆ ಶ್ರಾವಣ ಶುಕ್ರವಾರದ ವಿಶೇಷ ಪರಿಹಾರದ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದರ ಮೂಲಕ ನೀವು ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತರಾಗಬಹುದು.


ಇದನ್ನೂ ಓದಿ: ಈ 5 ವಸ್ತುಗಳನ್ನು ತಪ್ಪಿಯೂ ಉಡುಗೊರೆಯಾಗಿ ನೀಡಬೇಡಿ


ಶ್ರಾವಣ ಶುಕ್ರವಾರ ಈ ವಿಶೇಷ ಕೆಲಸ ಮಾಡಿ


ಶ್ರಾವಣ ಮಾಸದ ಶುಕ್ರವಾರದಂದು ನೀವು ವಿಶೇಷ ಕೆಲಸಗಳನ್ನು ಮಾಡಿದ್ರೆ ನಿಮ್ಮ ಅದೃಷ್ಟ ಬದಲಾಗುತ್ತದೆ. ಈ ಕೆಲಸ ಮಾಡುವುದರಿಂದ ನಿಮ್ಮ ಹಣದ ಬಿಕ್ಕಟ್ಟು ಮತ್ತು ಯಾವುದೇ ರೀತಿಯ ಸಾಲದ ಸಮಸ್ಯೆ ಇರುವುದಿಲ್ಲ. ಶುಕ್ರವಾರ ಬೆಳಿಗ್ಗೆ ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಿ. ಇದರ ನಂತರ ಅಲ್ಲಿ ಕುಳಿತು ಶಿವನ ಪಂಚಾಕ್ಷರ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ. ಶಿವನ ಪಂಚಾಕ್ಷರ ಮಂತ್ರವಾದ ‘ಓಂ ನಮಃ ಶಿವಾಯ’ವನ್ನು ಜಪಿಸುವುದರಿಂದ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತವೆ.


ಇದನ್ನೂ ಓದಿ: ಆಗಸ್ಟ್ ನಲ್ಲಿ ಈ ನಾಲ್ಕು ರಾಶಿಯವರ ಮೇಲೆ ಆಗಲಿದೆ ಹಣದ ಸುರಿ ಮಳೆ


ಈ ಮಂತ್ರವನ್ನು ಪಠಿಸಿದ ನಂತರ ತಾಯಿ ಲಕ್ಷ್ಮಿಯ ಮಂತ್ರವನ್ನು ಜಪಿಸಿ. ಇದರ ನಂತರ ಸಂಜೆ ಶಿವನಿಗೆ ಆರತಿ ಮಾಡಿ. ಬಳಿಕ ತಾಯಿ ಲಕ್ಷ್ಮಿದೇವಿಗೆ ಆರತಿ ಮಾಡಿ. ಇದರ ನಂತರ ಸಂಪತ್ತನ್ನು ಪಡೆಯಲು ಶಿವ ಮತ್ತು ತಾಯಿ ಲಕ್ಷ್ಮಿಯನ್ನು ಭಕ್ತಿಯಿಂದ ಪ್ರಾರ್ಥಿಸಬೇಕು.


ಪ್ರತಿದಿನ ಶಿವಲಿಂಗಕ್ಕೆ ಕೆಂಪು ಹೂ ಅರ್ಪಿಸಿ 


ನೀವು ಯಾವುದೇ ರೀತಿಯ ಸಾಲದಿಂದ ತೊಂದರೆಗೀಡಾಗಿದ್ದರೆ, ಶ್ರಾವಣ ಮಾಸದಲ್ಲಿ ಪ್ರತಿದಿನ ಶಿವಲಿಂಗಕ್ಕೆ ಕೆಂಪು ಹೂವುಗಳನ್ನು ಅರ್ಪಿಸಬೇಕು. ನಂತರ ‘ ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸುತ್ತಾ ನೀರನ್ನು ಅರ್ಪಿಸಿ. ನಂತರ ಶಿವಲಿಂಗಕ್ಕೆ ಪ್ರದಕ್ಷಿಣೆ ಹಾಕಿ. ಇದರ ನಂತರ ಲಕ್ಷ್ಮಿದೇವಿಗೆ ಕೆಂಪು ಗುಲಾಬಿ ಮತ್ತು ಸಿಹಿ ಭಕ್ಷ್ಯಗಳನ್ನು ಅರ್ಪಿಸಬೇಕು. ಬಳಿಕ ಋಣಭಾರ ಪರಿಹಾರಕ್ಕಾಗಿ ಪ್ರಾರ್ಥಿಸಿ. ಈ ಕೆಲಸ ಮಾಡುವುದರಿಂದ ನೀವು ಎಲ್ಲಾ ರೀತಿಯ ಸಾಲದಿಂದ ಮುಕ್ತರಾಗುತ್ತೀರಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.