ಆಗಸ್ಟ್ ನಲ್ಲಿ ಈ ನಾಲ್ಕು ರಾಶಿಯವರ ಮೇಲೆ ಆಗಲಿದೆ ಹಣದ ಸುರಿ ಮಳೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹವು ಆಗಸ್ಟ್‌ನಲ್ಲಿ ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಶುಕ್ರ ಗ್ರಹವು ಕರ್ಕ ರಾಶಿಗೆ ಸಾಗಲಿದೆ. ಆಗಸ್ಟ್‌ನಲ್ಲಿ ಸೂರ್ಯ ಮತ್ತು ಮಂಗಳ ಕೂಡ ರಾಶಿಯನ್ನು ಬದಲಾಯಿಸಲಿದೆ. 

Written by - Ranjitha R K | Last Updated : Jul 27, 2022, 10:52 AM IST
  • ಅನೇಕ ದೊಡ್ಡ ಗ್ರಹಗಳು ಆಗಸ್ಟ್‌ನಲ್ಲಿ ರಾಶಿ ಪರಿವರ್ತನೆ ಮಾಡಲಿವೆ
  • ಗ್ರಹಗಳ ರಾಶಿ ಬದಲಾವಣೆಯಿನದ ಈ ರಾಶಿಯವರಿಗೆ ಲಾಭ
  • ಈ ರಾಶಿಯವರಿಗೆ ಆಗಸ್ಟ್ ತಿಂಗಳು ಮಂಗಳಕರವಾಗಿರುತ್ತದೆ.
 ಆಗಸ್ಟ್ ನಲ್ಲಿ ಈ ನಾಲ್ಕು ರಾಶಿಯವರ ಮೇಲೆ ಆಗಲಿದೆ ಹಣದ ಸುರಿ ಮಳೆ  title=
planet transit effect (file photo)

ಬೆಂಗಳೂರು : ಪ್ರತಿ ತಿಂಗಳಿನಂತೆಯೇ  ಆಗಸ್ಟ್ ನಲ್ಲಿ ಕೂಡಾ ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಯನ್ನು ಬದಲಿಸಲಿವೆ. ಇನ್ನು ಕೆಲವು ಗ್ರಹಗಳಿ ಹಿಮ್ಮುಖ ಚಲನೆ ಆರಂಭಿಸಲಿವೆ.  ಈ ಗ್ರಹಗಳ ಸಂಕ್ರಮಣ ಮತ್ತು ಹಿಮ್ಮುಖ ಚಲನೆ  ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತವೆ.  ಕೆಲವು ರಾಶಿಯವರಿಗೆ  ಈ ಗ್ರಹಗಳ ಸಂಕ್ರಮಣದಿಂದ ವಿಶೇಷ ಲಾಭವಾಗಲಿದೆ. ಇನ್ನು ಕೆಲವು ರಾಶಿಗಳು ಅತಿಯಾದ ತೊಂದರೆಯನ್ನು ಕೂಡಾ ಎದುರಿಸಲಿದೆ. ಹಾಗಿದ್ದರೆ ಆಗಸ್ಟ್ ತಿಂಗಳು ಯಾವ ರಾಶಿಯವರಿಗೆ  ಶುಭ ಯಾರಿಗೆ ಅಶುಭ ನೋಡೋಣ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹವು ಆಗಸ್ಟ್‌ನಲ್ಲಿ ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಶುಕ್ರ ಗ್ರಹವು ಕರ್ಕ ರಾಶಿಗೆ ಸಾಗಲಿದೆ. ಆಗಸ್ಟ್‌ನಲ್ಲಿ ಸೂರ್ಯ ಮತ್ತು ಮಂಗಳ ಕೂಡ ರಾಶಿಯನ್ನು ಬದಲಾಯಿಸಲಿದೆ. ಈ ದೊಡ್ಡ ಗ್ರಹಗಳ ರಾಶಿ ಪರಿವರ್ತನೆಯು ನಿರ್ದಿಷ್ಟವಾಗಿ ಈ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಈ ರಾಶಿಯವರ ಅದೃಷ್ಟವು ತೆರೆದುಕೊಳ್ಳಲಿದೆ.  

ಇದನ್ನೂ ಓದಿ : ಮನಿ ಪ್ಲಾಂಟ್ ನೆಡುವಾಗ ಈ ವಸ್ತುವನ್ನು ಜೊತೆಯಲ್ಲಿಟ್ಟರೆ ಹಣಕಾಸಿನ ಸಮಸ್ಯೆ ಕ್ಷಣದಲ್ಲಿ ಪರಿಹಾರ

ಈ ರಾಶಿಯವರಿಗೆ ಆಗಸ್ಟ್ ಶುಭ :  
ಸಿಂಹ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಈ ಸಮಯದಲ್ಲಿ, ಈ ರಾಶಿಯವರಿಗೆ ವಿಶೇಷ ಆರ್ಥಿಕ ಲಾಭವಾಗಲಿದೆ. ಇವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಈ ರಾಶಿಯ ಜನರಿಗೆ ಕುಟುಂಬ ಸಂತೋಷ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಶುಭ ಫಲಿತಾಂಶಗಳನ್ನು ಪಡೆಯಬಹುದು. 

ಮೇಷ ರಾಶಿ : ಈ ರಾಶಿಯವರಿಗೆ ಮುಂಬರುವ ಆಗಸ್ಟ್ ತಿಂಗಳು ಆರ್ಥಿಕವಾಗಿ ಉತ್ತಮವಾಗಿರಲಿದೆ. ಈ ಸಮಯದಲ್ಲಿ, ಈ ರಾಶಿಯವರು ಅನೇಕ ಮೂಲಗಳಿಂದ ಹಣವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಪ್ರೇಮ ಸಂಬಂಧ ಸುಧಾರಿಸುತ್ತದೆ. ಈ ಸಮಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. 

ಇದನ್ನೂ ಓದಿ : ಈ 5 ವಸ್ತುಗಳನ್ನು ತಪ್ಪಿಯೂ ಉಡುಗೊರೆಯಾಗಿ ನೀಡಬೇಡಿ

ವೃಶ್ಚಿಕ ರಾಶಿ :  ಮುಂಬರುವ ತಿಂಗಳು  ವೃಶ್ಚಿಕ ರಾಶಿಯವರಿಗೆ ಸಂತೋಷದ ದಿನಗಳನ್ನು ಹೊತ್ತು ತರಲಿದೆ. ಈ ಸಮಯದಲ್ಲಿ, ಪ್ರೀತಿಯ ಸಂಬಂಧಗಳು ಬಲಗೊಳ್ಳುತ್ತವೆ. ಈ ಸಮಯವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಈ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕೌಟುಂಬಿಕ ಮತ್ತು ವೈವಾಹಿಕ ಜೀವನದ ಸಮಸ್ಯೆಗಳು ನಿವಾರಣೆಯಾಗಲಿದೆ.  

ಮಿಥುನ ರಾಶಿ : ಈ ರಾಶಿಯ ಜನರಿಗೆ ಆಗಸ್ಟ್ ನಲ್ಲಿ ಅನೇಕ ಮೂಲಗಳಿಂದ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.ಈ ಸಮಯದಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲವು ಸಿಗುತ್ತದೆ. ಅಲ್ಲದೆ, ಸಿಕ್ಕಿ ಹಾಕಿಕೊಂಡಿರುವ ಹಣ ಕೂಡಾ ವಾಪಸ್ ಪಡೆಯಬಹುದು. ಗೌರವ ಹೆಚ್ಚಾಗುವ ಸಾಧ್ಯತೆ ಇದೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ,  ZEE NEWS ಇದನ್ನೂ ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News