Krishna Janmashtami 2024: ಅವತಾರಗಳ ಸರಣಿಯ ಭಾಗವಾಗಿ ದ್ವಾಪರ ಯುಗದಲ್ಲಿ ದೇವಕಿ ವಸುದೇವರ ಮಗುವಾಗಿ ಎಂಟನೇ ಅವತಾರವಾಗಿ ವಿಷ್ಣುವು ಕೃಷ್ಣನಾಗಿ ಜನಿಸುತ್ತಾನೆ. ಬಾಲ್ಯದಲ್ಲಿ ತುಂಟ ಕೃಷ್ಣನಾಗಿ, ಬೆಣ್ಣೆ ಕಳ್ಳನಾಗಿ, ಅಸುರಸಂಹಾರಿಯಾಗಿ, ಧರ್ಮ ರಕ್ಷಕನಾಗಿ, ಗೀತಾ ಗುರುವಾಗಿ, ಆದಿ ಗುರುವಾಗಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೀಗೆ ಕೃಷ್ಣ ಏನೇ ಮಾಡಿದ್ದರು ಎಷ್ಟೇ ಅವತಾರಗಳನ್ನು ತಾಳಿದ್ದರೂ ಅದು ಲೋಕ ಕಲ್ಯಾಣಕ್ಕಾಗಿಯೇ. 


COMMERCIAL BREAK
SCROLL TO CONTINUE READING

ಕೃಷ್ಣಾಷ್ಟಮಿಯ ದಿನದಂದು ಮುಂಜಾನೆ ಎದ್ದು ಸ್ನಾನ ಮಾಡಿ ಮತ್ತು ಶುಚಿಯೊಂದಿಗೆ ಪೂಜಾ ಮಂದಿರವನ್ನು ಸ್ವಚ್ಛಗೊಳಿಸಿ. ಮಾವಿನ ಎಲೆಗಳು ಮತ್ತು ಹೂವಿನ ಮಾಲೆಗಳಿಂದ ಮನೆ ಬಾಗಿಲನ್ನು ಅಲಂಕರಿಸಿ. ಪುಟ್ಟ ಕೃಷ್ಣನ ಸರ್ವಾಂಗವನ್ನು ಸುಂದರವಾಗಿ ಅಲಂಕರಿಸಿ, ಪುಟ್ಟ ಕೃಷ್ಣನನ್ನು ಮನೆಗೆ ಆಹ್ವಾನಿಸಿ. ಸಾಧ್ಯವಾದರೆ, 12 ಗಂಟೆಯ ಸಮಯದಲ್ಲಿ ಪೂಜೆಯನ್ನು ಪ್ರಾರಂಭಿಸುವುದು ಉತ್ತಮ.


ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಯಂದು ಮಡಿಕೆಯನ್ನು ಹೊಡೆಯುವುದು ಏಕೆ ಗೊತ್ತಾ? ಇದರ ಹಿಂದಿದೆ ಬಹುಕಾಲದ ರಹಸ್ಯ!



ಉಪವಾಸ ಮತ್ತು ಜಾಗರಣೆ
ಕೆಲವು ಪ್ರದೇಶಗಳಲ್ಲಿ ಕೃಷ್ಣಾಷ್ಟಮಿಯಂದು ಉಪವಾಸ ಮತ್ತು ಜಾಗರಣೆ ಮಾಡುವ ಪದ್ಧತಿ ಇದೆ. ಆದರೆ ಇದು ಕಡ್ಡಾಯವಲ್ಲ. ನಿಮಗೆ ಇಷ್ಟವಿದ್ದರೆ ನೀವು ಉಪವಾಸ ಹಾಗೂ ಜಾಗರಣೆ ಮಾಡಬಹುದು ಎಲ್ಲವೂ ನಿಮ್ಮ ಅನಕೂಲಕ್ಕೆ ಬಿಟ್ಟಿದ್ದು.


ಪೂಜಾ ವಿಧಾನ
ಬಾಲ ಕೃಷ್ಣನ ವಿಗ್ರಹದ ಮುಂದೆ ಐದು ಬತ್ತಿಗಳಿಂದ ದೀಪವನ್ನು ಬೆಳಗಿಸಿ ಮತ್ತು ಓಂ ಶ್ರೀಕೃಷ್ಣ ಪರಬ್ರಹ್ಮಣೇ ನಮಃ ಎಂಬ ಮಂತ್ರವನ್ನು 108 ಬಾರಿ ಪಠಿಸಿ.


ಮಹತ್ವದ ಪೂಜೆ
ಕೃಷ್ಣ ಮಧ್ಯರಾತ್ರಿಯಲ್ಲಿ ಜನಿಸಿದ ಕಾರಣ, ಭಕ್ತರು ಹೆಚ್ಚಾಗಿ ಕನ್ನಯ್ಯನನ್ನು 12 ಮಧ್ಯರಾತ್ರಿಯ ನಂತರ ಮಾತ್ರ ಪೂಜಿಸುತ್ತಾರೆ. ಈ ವೇಳೆ ಪೂಜೆ ಮಾಡುವುದು ಉತ್ತಮ. 


56 ವಿಧದ ನೈವೇದ್ಯಗಳು
ಉತ್ತರ ಭಾರತದಲ್ಲಿ ಕೃಷ್ಣಾಷ್ಟಮಿಯನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕನ್ನಯ್ಯನಿಗೆ ಪ್ರೀತಿಯಿಂದ 56 ಬಗೆಯ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಹಾಗಂತೆ ಎಲ್ಲರೂ ಈ ರೀತಿ 56 ಬಗೆಯ ನೈವೇದ್ಯ ಇಡಬೇಹು ಎಂದೇನಿಲ್ಲ. ಇದು ಎಲ್ಲರಿಂದಲೂ ಸಾಧ್ಯವಿಲ್ಲದ ಕಾರಣ ಕನ್ನಯ್ಯನಿಗೆ ಇಷ್ಟವಾದ ಬೆಣ್ಣೆ ಮೊಸರು ಇಂತಹವುಗಳನ್ನು ಕೂಡ ನೈವೇದ್ಯವಾಗಿ ಇಡಬಹುದು.


ಜನ್ಮಾಷ್ಟಮಿಯ ದಿನದಂದು ವಿಶೇಷವಾಗಿ ಉಪವಾಸ ಮತ್ತು ಆ ರಾತ್ರಿ ಶ್ರೀಕೃಷ್ಣನ ಲೀಲೆಗಳು ಮತ್ತು ಕಥೆಗಳನ್ನು ಹಾಡುತ್ತಾ,  ಮರುದಿನ ಭೋಜನವನ್ನು ಮಾಡುತ್ತಾ ಜಾಗರಣೆ ಮಾಡಿ.  ದೇವಸ್ಥಾನದಲ್ಲಿ ಅಷ್ಟೋತ್ತರ ಪೂಜೆ, ಕೃಷ್ಣ ಸಹಸ್ರನಾಮ ಪೂಜೆ ಮಾಡುವವರಿಗೆ ಐಶ್ವರ್ಯ, ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ಪಂಡಿತರು. ಸ್ಕಂದ ಪುರಾಣದ ಪ್ರಕಾರ, ಈ ದಿನದಂದು ನೀವು ಶ್ರೀಕೃಷ್ಣನನ್ನು ಪೂಜಿಸಿದರೆ, ನಿಮ್ಮ ಎಲ್ಲಾ ಪಾಪಗಳು ನಿವಾರಣೆಯಾಗುತ್ತದೆ ಮತ್ತು ನಿಮಗೆ ಮೋಕ್ಷ ಸಿಗುತ್ತದೆ.
 


ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.