Gautama buddha: ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದವ ನಮ್ಮ ಗೌತಮ ಬುದ್ದನಲ್ಲವೇ? ಬುದ್ದನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ...! ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ, ಈತ ಜನಿಸುವ ಮೊದಲೇ ಜ್ಯೋತಿಷ್ಯರು ಶುದ್ಧೋದನನಿಗೆ ಜನಿಸುವ ಮಗುವು ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿ, ಮಹಾಪುರುಷನಾಗಿ ಅಜರಾಮರನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ. ಇದನ್ನು ತಿಳಿದುಕೊಂಡ ಶುದ್ಧೋಧನನು ತನ್ನ ಮಗ ಸಿದ್ದಾರ್ಥ ಚಕ್ರವರ್ತಿ ಆಗಬೇಕೆಂದು ಬಯಸುತ್ತಾನೆ.


COMMERCIAL BREAK
SCROLL TO CONTINUE READING

ಯಾವ ದುಃಖ ನೋವುಗಳು ಈತನನ್ನು ಭಾಧಿಸದಿರಲಿ ಹಾಗೂ ಜಗತ್ತಿನ ಎಲ್ಲಾ ಕಷ್ಟ ಕಾರ್ಪಣ್ಯಗಳಿಂದ ಈತ ದೂರ ಇರಲಿ ಎಂದು ಪ್ರಯತ್ನಿಸುತ್ತಾನೆ ಹಾಗೂ ತನ್ನ ಮಗ ಇದಾವುದರ ವಿಚಾರಕ್ಕೆ ಸಿಲುಕಬಾರದೆಂದು ಯಾವುದೇ ಧಾರ್ಮಿಕ ಭೋಧನೆಯನ್ನು ಆತನಿಗೆ ಮಾಡುವುದಿಲ್ಲ.


ಅಲ್ಲದೇ ಆತ ಯಾವುದೇ ಹೊರಗಿನ ಪ್ರಪಂಚಕ್ಕೆ ಮೋಹಿತನಾಗಬಾರದೆಂಬ ಭಯದಿಂದ ಶುದ್ಧೋದನನು ತನ್ನ ಮಗನಿಗಾಗಿ ಎಲ್ಲಾ ರೀತಿಯ ಸಕಲ ಸೌಕರ್ಯಗಳನ್ನು ಒಳಗೊಂಡ ವೈಭವದಿಂದ ಕೂಡಿದ ಮೂರು ಅರಮನೆಗಳನ್ನು ಕಟ್ಟಿಸಿ, ಗೌತಮ ಬುದ್ಧನು ಹೊರಗಿನ ಜಗತ್ತಿನ ಅರಿವಿಲ್ಲದೆಯೇ ಅರಮನೆಯಲ್ಲಿ ಬಂಧನಕ್ಕೆ ಒಳಗಾದಂತೆ ಬದುಕುವುದನ್ನು ಕಲಿಸುತ್ತಾನೆ.


ಇದನ್ನೂ ಓದಿ- ಭವಿಷ್ಯರೇಖೆಗೆ ಭವಿಷ್ಯ ಬರೆದ ಪಾಣಿನಿ


ಸಿದ್ದ ಬುದ್ಧನಾದ ಪ್ರಸಂಗ :
ಆದರೆ ಬುದ್ದನು ಯಾವುದೇ ಧಾರ್ಮಿಕವಾದ ಭೋಧನೆಗಳನ್ನು ಪಡೆದುಕೊಳ್ಳದಿದ್ದರೂ ಕೂಡ ಒಂದು ದಿನ ಜಗತ್ತೇ ಮೆಚ್ಚುವಂತಹ ಮಹಾಪುರುಷನಾಗುವ ಎಲ್ಲಾ ಲಕ್ಷಣಗಳನ್ನು ಹೊಂದುವ ಒಂದು ದಿನ ತನ್ನ 29 ನೇ ವಯಸ್ಸಿನಲ್ಲಿ ಬರುತ್ತದೆ. ವಾಯುವಿಹಾರಕ್ಕಾಗಿ ಅರಮನೆಯಿಂದ ಹೊರಗಡೆ ಬಂದಾಗ ಅಲ್ಲಿ ನಾಲ್ಕು ವಿಚಾರಗಳನ್ನು ನೋಡಿ ಜೀವನದಲ್ಲಿ ತನಗರಿವಿಲ್ಲದೆಯೆ ಮೊದಲ ಬಾರಿಗೆ ಜಿಗುಪ್ಪೆಗೊಳ್ಳುತ್ತಾನೆ. ಓರ್ವ ಮುದುಕ, ರೋಗಿ, ಶವಯಾತ್ರೆ ಹಾಗೂ ಅಲೆದಾಡುವ ಓರ್ವ ತಪಸ್ವಿಯನ್ನು ಕಂಡು ದಿವ್ಯದರ್ಶನವಾಗುತ್ತದೆ. ಈ ನಾಲ್ಕು ವಿಚಾರಗಳನ್ನು ಕಂಡ ಕೂಡಲೇ ಗೌತಮನು ಕುತೂಹಲಕ್ಕೆ ಒಳಗಾಗುತ್ತಾನೆ. ನಂತರ ಅರಮನೆಗೆ ಹಿಂತಿರುಗಿ ನಿಜ ಜೀವನದ ಬಗೆಗೆ ತಿಳಿದುಕೊಳ್ಳಲು ಗುರುಗಳ ಹುಡುಕಾಟ ಮಾಡಲು ಬಹಳಷ್ಟು ಕಷ್ಟಪಡುತ್ತಾನೆ. ಆದರೆ ಯಾರೂ ಕೂಡ ಗೌತಮನಿಗೆ ಜೀವನದ ಬಗೆಗೆ ಸತ್ಯ ವಿಚಾರಗಳನ್ನು ತಿಳಿಸದೇ ಇದ್ದುದರಿಂದ ಬೇಸರಗೊಂಡ ಬುದ್ಧ ಸಂಸಾರ ಹಾಗೂ ಅರಮನೆಯನ್ನು ತ್ಯಾಗ ಮಾಡಿ ಜೀವನದ ಬಗೆಗೆ ತನಗಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಒಂಟಿಯಾಗಿ ತೆರಳುತ್ತಾನೆ.


ಆಧ್ಯಾತ್ಮಕ್ಕಾಗಿ ಸರ್ವಪರಿತ್ಯಾಗ :
ಆ ನಾಲ್ಕು ವಿಚಾರಗಳನ್ನು ಕಂಡ ನಂತರ ಬುಧನಿಗೆ ಜೀವನದ ಸತ್ಯತೆಯನ್ನು ತಿಳಿದುಕೊಳ್ಳುವ ಕುತೂಹಲ ಆತನ ಮನಸ್ಸನ್ನು ಬೆಂಬಿಡದೆ ಕಾಡಲಾರಂಭಿಸುತ್ತದೆ. ಹೀಗಾಗಿ ಜೀವನದ ಬಗೆಗೆ ಸಾಕ್ಷಾತ್ಕಾರ ಮಾಡಲು ತಾನು ಸನ್ಯಾಸಿಯಾಗುವ ವಿಚಾರವನ್ನು ತನ್ನ ತಂದೆ ಶುದ್ಧೋದನ ಹಾಗೂ ಮಡದಿ ಯಶೋಧರೆಗೆ ತಿಳಿಸಿ ಮನ ಒಲಿಸಲು ಪ್ರಯತ್ನಿಸುತ್ತಾನೆ. ಯೋಗಿಯಾಗಬೇಕು. ಜ್ಞಾನಿಯಾಗಬೇಕೆಂಬ ತುಡಿತ ಇದ್ದುದರಿಂದಲೇ ಗೌತಮ ಬುದ್ಧನು ವೈಭೋಗದ ಜೀವನದಿಂದ ಮುಕ್ತಿ ಪಡೆಯಲು ಹಾತೊರೆಯುತ್ತಾನೆ.


ಇದನ್ನೂ ಓದಿ- ಮಕ್ಕಳಿಗಾಗಿ ‘ಆಸ್ತಿ’ ಮಾಡುವುದು ಬೇಡ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ..!


ಸತ್ಯ ಶೋಧಕ್ಕಾಗಿ ಪ್ರಪಂಚ ಪರ್ಯಟನೆ :
ಜೀವನದ ಸತ್ಯತೆಯನ್ನು ತಿಳಿಯುವುದಕ್ಕಾಗಿ ಬುದ್ಧನು ತನ್ನ ಎಂಭತ್ತು ವರ್ಷದವರೆಗೆ ಪ್ರಪಂಚ ಪರ್ಯಟನೆ ಮಾಡಿದ. ಪರ್ಯಟನೆಯ ಜೊತೆ-ಜೊತೆಗೆ ಸತ್ಯ ದರ್ಶನದ ಬಗೆಗೆ ಜನರಿಗೆ ಭೋಧನೆಗಳನ್ನು ಮಾಡುತ್ತಾ, ಬಡವ ಹಾಗೂ ದುರ್ಬಲರ ಸೇವೆಯನ್ನು ಮಾಡುತ್ತಾ ವಿಮೋಚನೆಗಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು ಹಾಗೂ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಹಾಗಾಗಿ ನಾವು ಪರರಿಗೆ ಹಾಗೂ ಮಾನವೀಯತೆಗೆ ಬೆಲೆ ಕೊಡಬೇಕು ಎಂಬುವುದು ಗೌತಮ ಬುದ್ಧನು ಭೋಧಿಸಿದ ಮುಖ್ಯ ತತ್ವಗಳು, ಬುದ್ಧನು ಇಹಲೋಕವನ್ನು ತ್ಯಜಿಸುವಾಗ ಎಂಭತ್ತು ವರುಷಗಳಾಗಿದ್ದರೂ ಕೂಡ ಯಾವುದೇ ದಣಿವಿಲ್ಲದೇ ಸತ್ಯ ದರ್ಶನಕ್ಕಾಗಿ ನಿರಂತರವಾದ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಕೊನೆಗೆ ತನ್ನ ಅನುಯಾಯಿಗಳಿಗೆ ಜಗತ್ತಿನಲ್ಲಿ ಯಾವುದೂ ಶಾಶ್ವತ ಅಲ್ಲ. ಹಾಗಾಗಿ ನಿಮ್ಮ ವಿಮೋಚನೆಗಾಗಿ ಮಾತ ಕೆಲಸ ಮಾಡಿ ಎಂಬ ಕೊನೆಯ ನುಡಿಗಳನ್ನು ನೀಡಿ ಲೋಕದಲ್ಲಿ ಅಜರಾಮರನಾಗುತ್ತಾನೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ