ಅಂಗೈಯಲ್ಲಿ ವಿದ್ಯೆರೇಖೆಯೇ ಇಲ್ಲದವ ಮಹಾಸಂಸ್ಕೃತಜ್ಞಾನಿಯಾದನೆಂದರೆ, ಅದು ಭವಿಷ್ಯ ಹೇಳುವ ಜ್ಯೋತಿಷ್ಯಶಾಸ್ತ್ರವನ್ನೇ ಬೆರಗುಮಾಡಿದ ಆ ಘಟನೆ ಇಂದಿಗೂ ಸೋಮಾರಿಗಳನ್ನು ಬಡಿದೆಚ್ಚರಿಸುವ, ಭವಿಷ್ಯದ
ಮೇಲೆ ಭರವಸೆ ಹೊತ್ತುಕೂರುವ ಅದೆಷ್ಟೋ ಜನರಿಗೆ ಪಾಣಿನಿಯ ಬಾಲ್ಯದ ಪ್ರಸಂಗವೊಂದು ಬದುಕಿನ ಸ್ಪೂರ್ತಿಯದಾರಿ ದೀಪವೇ ಸರಿ..! ಗುರುಕುಲದಲ್ಲಿದ್ದ ಶಿಖಾಮಣಿ ಬಾಲಕನೊಬ್ಬಅಧ್ಯಯನ ಮಾಡುತ್ತಿದ್ದ. ಒಮ್ಮೆಪಾಠ ಒಪ್ಪಿಸುವಲ್ಲಿ ತಪ್ಪು ಮಾಡಿದ್ದಕ್ಕೆ ಗುರುಗಳು, ಬೆತ್ತ ಪ್ರಹಾರಕ್ಕಾಗಿ ಕೈಚಾಚಲು ಹೇಳಿದರು. ಬಾಲಕ ಹಾಗೆಯೇ ಮಾಡಿದ. ಅವನ ಕೈ ನೋಡಿದ ತಕ್ಷಣ, ಗುರುಗಳು ತಮ್ಮ ಕೈಯನ್ನು ಹಿಂದಕ್ಕೆಳೆದುಕೊಂಡರು. ಯಾಕೆಂದರೆ, ಬಾಲಕನ ಕೈಯಲ್ಲಿ ವಿದ್ಯಾರೇಖೆಯೇ ಇರಲಿಲ್ಲ! ಆಗ ಗುರುಗಳು `ನಿನ್ನ ಕೈಯಲ್ಲಿ ವಿದ್ಯಾರೇಖೆಯೇ ಇಲ್ಲ. ನಿನ್ನನ್ನು ದಂಡಿಸಿಯೂ ಪ್ರಯೋಜನವಿಲ್ಲ. ಮನೆಗೆ ಹೋಗು” ಎಂದುಬಿಟ್ಟರು. ಬಾಲಕ ಅತ್ಯಂತ ದುಃಖತಪ್ತನಾಗಿ ಮನೆಗೆ ಬರುತ್ತಿರುವಾಗ, ಕೆಲವು ಹೆಂಗಳೆಯರು ಬಾವಿಕಟ್ಟೆಯಲ್ಲಿ ನೀರುಸೇದುತ್ತಿರುವುದನ್ನು ನೋಡಿದ. ಹೆಂಗಸರು ನೀರು ಸೇದಿ, ಕೊಡ ಇಡುವ ಜಾಗದಲ್ಲಿ ಹೊಂಡ ಸೃಷ್ಟಿಯಾಗಿತ್ತು, ಅದನ್ನುಕಂಡ ಬಾಲಕ ಬಾವಿ ಕಟ್ಟೆಕಟ್ಟುವಾಗಲೇ ಹೀಗೆ ಕೊರೆದುಕಟ್ಟಿದ್ದಾರೆಯೇ?' ಎಂದುಕೇಳಿದ, ಅವರು "ಇಲ್ಲ, ಕಟ್ಟುವಾಗ ಸರಿಯಾಗಿಯೇ ಕಟ್ಟಿದ್ದರು. ದಿನವೂ ಕೊಡವನ್ನುಇಟ್ಟುಇಟ್ಟು ಹೀಗಾಗಿದೆ" ಎಂದರು.
ಆಗ ಬಾಲಕನಿಗೆ ಒಂದು ಯೋಚನೆ ಬಂತು. ಕಡುಕಠಿಣಕಲ್ಲೇ ಹೀಗೆ ಬದಲಾಗಿರಬೇಕಾದರೆ, ನಾನು ಪ್ರಯತ್ನಪಟ್ಟರೆ ವಿದ್ಯೆ ಒಲಿಯುವುದಿಲ್ಲವೇ ಅನಿಸಿತು. ಆದರೆ, ತನಗೆ ವಿದ್ಯಾರೇಖೆಯೇ ಇಲ್ಲವೆಂದು ಗುರುಗಳು ಹೇಳಿದ ಮಾತು ನೆನಪಾದಾಗ, ಹರಿತವಾದಕಲ್ಲಿನಿಂದ ವಿದ್ಯಾರೇಖೆ ಇರಬೇಕಾದಲ್ಲಿ ರೇಖೆಯನ್ನು ಕೊರೆದುಕೊಂಡು ಗುರುಕುಲಕ್ಕೆ ಮರಳಿ ಬಂದ. ಗುರುಗಳು ಸಿಟ್ಟಿನಿಂದ ``ನಿನಗೆ ವಿದ್ಯಾರೇಖೆಯೇ ಇಲ್ಲ. ಇಲ್ಲಿಗೆ ಬರಬೇಡ ಎಂದಿದ್ದೆನಲ್ಲ" ಎಂದರು. ಆತ, ``ಗುರುಗಳೇ, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದಿದ್ದೇನೆ" ಎಂದನು. ಗುರುಗಳು ಅಚ್ಚರಿಯಿಂದ, ``ಏನು, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದೆಯಾ?" ಎಂದು ಬಾಲಕನ ಕೈ ನೋಡುತ್ತಾರೆ. ವಿದ್ಯಾರೇಖೆ ಇರುವಲ್ಲಿ ಕೈ ಸಿಗಿದಿರುವುದನ್ನು ಕಂಡು ಅವರ ಕಣ್ತುಂಬಿ ಬರುತ್ತದೆ. ಆಗ ಅವರು ಪ್ರೀತಿಯಿಂದ, ``ಮಗು, ಸಹಜವಾಗಿ ಇರಬೇಕಾದ ವಿದ್ಯಾರೇಖೆ ಇಲ್ಲವಾದ್ದರಿಂದ ಶಿವನನ್ನು ಮೊರೆ ಹೋಗು"ಎಂದು ಹುಡುಗನನ್ನು ತಪಸ್ಸಿಗೆ ಹಚ್ಚುತ್ತಾರೆ. ಬಾಲಕನ ಕಠೋರತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗುತ್ತಾನೆ. ಆದರೆ, ಒಂದಕ್ಷರವನ್ನೂ ಮಾತನಾಡದೆ ತನ್ನ ಡಮರುಗವನ್ನು 14 ಸಾರಿ ಬಾರಿಸುತ್ತಾನೆ. ಆಗ 14 ನಾದಗಳು ಹೊರಹೊಮ್ಮಿದವು. ಅದನ್ನು ಆಧರಿಸಿ, ಸಂಸ್ಕೃತ ವ್ಯಾಕರಣ ಶಾಸ್ತ್ರ ರಚನೆ ಮಾಡಿದ ಆ ಬಾಲಕನೇ ಪಾಣಿನಿಮಹರ್ಷಿಯಾಗುತ್ತಾನೆ ಎಂಬ ಪಾಣಿನಿಯ ಪ್ರಸಂಗ ನಮ್ಮೆಲ್ಲರಿಗೂ ಆತ್ಮವಿಶ್ವಾಸವನ್ನು ಬಡಿದೆಚ್ಚರಿಸುತ್ತದೆ ಅಲ್ಲವಾ..!
ಪಾಣಿನಿ ಸುಪ್ರಸಿದ್ಧ ಸಂಸ್ಕೃತ ವ್ಯಾಕರಣ ಬರೆದಾತ. ತಾಯಿದಾಕ್ಷಾಅಥವಾ ದಾಕ್ಷೀ. ತಂದೆ ಶಲಂಕ, ಗಾಂಧಾರದೇಶದ ಶಲಾತುರಗ್ರಾಮದವ. ಪಾಣಿನಿಯನ್ನು ಅವನ ತಾಯಿಯ ಹೆಸರಿನ ಮೇಲೆ ದಾಕ್ಷಾಅಥವಾ ದಾಕ್ಷೀಪುತ್ರನೆಂದೂ ತಂದೆಯ ಹೆಸರಿನ ಮೇಲೆ ಶಲಂಕನೆಂದೂ ಗ್ರಾಮದ ಹೆಸರಿನ ಮೇಲೆ ಶಾಲಾತುರೀಯ ಎಂದೂ ಕರೆಯುತ್ತಿದ್ದರಂತೆ. ಶಾಲಾತುರೀಯ ಎಂಬ ರೂಪವನ್ನು ಪಾಣಿನಿಯೆ ತನ್ನ ಗ್ರಂಥದಲ್ಲಿ ವಿವರಿಸಿದ್ದಾನೆ. ಈತನಿಗೆ ಅಹಿಕ ಎಂಬ ಇನ್ನೊಂದು ಹೆಸರೂ ಇತ್ತು ಎಂದು ತಿಳಿದುಬರುತ್ತದೆ. ಪಾಟಲೀಪುತ್ರದಲ್ಲಿದ್ದ ವರ್ಷ ಎಂಬ ಆಚಾರ್ಯರಲ್ಲಿ ಪಾಣಿನಿ ಶಿಷ್ಯನಾಗಿದ್ದುದಾಗಿ ಕಥಾಸರಿತ್ಸಾಗರದಲ್ಲಿ ಹೇಳಲ್ಪಟ್ಟಿದೆ. ಪಾಣಿನಿ ಸಿಂಹದ ಬಾಯಿಗೆ ತುತ್ತಾಗಿ ಸತ್ತನೆಂದು ಕಥೆಯೊಂದರಿಂದ ತಿಳಿದು ಬರುತ್ತದೆ.
ಪಾಣಿನಿಯಕಾಲದಲ್ಲಿ ಸಂಸ್ಕೃತ ಆಡುಭಾಷೆಯಾಗಿತ್ತು. ಅಲ್ಲದೆ ಗ್ರಾಂಥಿಕ ಸಂಸ್ಕೃತ ಭಾಷೆಗೂ ವ್ಯಾವಹಾರಿಕ ಸಂಸ್ಕೃತ ಭಾಷೆಗೂ ಅಷ್ಟಾಗಿ ವ್ಯತ್ಯಾಸವಿರಲಿಲ್ಲ. ಈ ಭಾಷೆಗೆ ಲೌಕಿಕ ಭಾಷೆ ಎನ್ನುವುದು. ಇದು ವೇದಗಳ ವೈದಿಕ ಭಾಷೆಗಿಂತ ತುಂಬ ಭಿನ್ನವಾಗಿತ್ತು. ಈ ವೈದಿಕ ಮತ್ತು ಲೌಕಿಕ ಭಾಷೆಗಳೆರಡಕ್ಕೂ ಅನ್ವಯಿಸುವಂತೆ ಒಂದೇ ವ್ಯಾಕರಣವನ್ನು ಶಬ್ದಾನುಶಾಸನ ಎನ್ನುವ ಹೆಸರಿನಲ್ಲಿ ರಚಿಸಿದ ಕೀರ್ತಿಸಲ್ಲುವುದು ಪಾಣಿನಿಯೊಬ್ಬನಿಗೆ ಮಾತ್ರ. ಅಲ್ಲದೆ ಈವರೆಗೆ ಉಪಲಬ್ಧವಾಗಿರುವ ಶಬ್ದಾನುಶಾಸನಗಳಲ್ಲಿ ಸಮಗ್ರವಾಗಿರುವುದು ಪಾಣಿನಿಯ ಅಷ್ಟಾಧ್ಯಾಯಿಯೊಂದೇ. ಇದರಲ್ಲಿನ ಸಾಂಕೇತಿಕ ಪರಿಶುದ್ಧತೆ ಮತ್ತು ಸೂತ್ರ ನಿರ್ಮಾಣ ಚಾತುರ್ಯ ಬೇರೆಲ್ಲೂ ಕಾಣಸಿಗುವುದಿಲ್ಲ.
ಪಾಣಿನಿಯ ವ್ಯಾಕರಣ ಸೂತ್ರಾತ್ಮಕವಾಗಿದೆ. ಅದರಲ್ಲಿಒಟ್ಟು ೩,೯೮೧ ಸೂತ್ರಗಳಿವೆ. ಈ ಎಲ್ಲಾ ಸೂತ್ರಗಳೂ ಒಂದೊಂದರಲ್ಲಿಯೂ ನಾಲ್ಕು-ನಾಲ್ಕು ಪಾದಗಳುಳ್ಳ ಎಂಟು ಅಧ್ಯಾಯಗಳಾಗಿ ವಿಭಾಗಿಸಲ್ಪಟ್ಟಿವೆ. ಆದ್ದರಿಂದ ಈ ವ್ಯಾಕರಣಗ್ರಂಥಕ್ಕೆಅಷ್ಟಾಧ್ಯಾಯಿ ಎಂಬ ಹೆಸರೇ ಬಳಕೆಯಲ್ಲಿದೆ. ಅಷ್ಟಕ, ಪಾಣಿನೀಯ ವೃತ್ತಿ ಸೂತ್ರ, ಅಕಾಲಿಕ ವ್ಯಾಕರಣ, ಶಾಲಾತುರೀಯತಂತ್ರ ಎಂಬುದು ಈ ಅಷ್ಟಾಧ್ಯಾಯಿಯ ಇತರ ಹೆಸರುಗಳು. ಸಂಸ್ಕೃತ ಸಾಹಿತ್ಯ ಇತಿಹಾಸದಲ್ಲಿ ಕ್ರಿಸ್ತ ಪೂರ್ವದಲ್ಲಿ ಯಾಜ್ಞವಲ್ಕ್ಯ ಬೌಧಾಯನ, ಕಾಟ್ಯಾಯನ, ಆಪಸ್ತಂಬ, ಪಿಂಗಲ, ಪಾಣಿನಿ ಹೀಗೆ ಸಾಹಿತ್ಯಕಾರರು, ಸಂಸ್ಕೃತಿಕಾರರು, ಭಾಷ್ಯಕಾರರು, ವಯ್ಯಾಕರಣಿಗಳ ದಂಡು ನಮಗೆ ಸಿಗುತ್ತದೆ. ಅವುಗಳಲ್ಲಿ ಪಾಣಿನಿಯೇ ಅತ್ಯಂತ ಗಂಭೀರವಾದ ಮಾರ್ಗವನ್ನು ಕರುಣಿಸಿದ ಅಂದರೆ ಅದು ಅತಿಶಯವಲ್ಲ. ಅಸ್ತವ್ಯಸ್ತವಾದ ಪದಬಳಕೆಯ ಕ್ರಮಕ್ಕೆ ಹದಿನಾಲ್ಕು ಸೂತ್ರಗಳನ್ನು ಹಾಕಿ ಒಂದು ವ್ಯವಸ್ಥಿತ
ಪದ್ಧತಿಯನ್ನು ತೋರಿಸಿಕೊಟ್ಟದ್ದು ಪಾಣಿನಿಯ ದೊಡ್ದ ಕೊಡುಗೆ. ಅದನ್ನು ಅಳವಡಿಸಿಕೊಂಡು ಸಂಸ್ಕೃತ ಭಾಷಾ ಲೋಕ ಅಂದಿನಿಂದ ಇಂದಿನವರೆಗೆ ತನ್ನದೇ ಆದ ದೊಡ್ದ ಕೊಡುಗೆಯನ್ನು ನೀಡುತ್ತಾ ಬಂದಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.