Sun Saturn Transit 2023: ಗ್ರಹಗಳ ರಾಜ ಸೂರ್ಯ. ಸೂರ್ಯ ಪುತ್ರ ಶನಿ. ತಂದೆ-ಮಗ ಸೂರ್ಯ ಮತ್ತು ಶನಿ ಎರಡೂ ಗ್ರಹಗಳನ್ನು ಶತ್ರು ಗ್ರಹಗಳು ಎಂದು ಹೇಳಲಾಗುತ್ತದೆ. ಸೂರ್ಯ ದೇವನು ಗೌರವ, ಯಶಸ್ಸು, ಆರೋಗ್ಯ ಮತ್ತು ಸಮೃದ್ಧಿಯ ಸಂಕೇತವಾದರೆ, ಶನಿ ದೇವನು ಕರ್ಮಗಳಿಗೆ ತಕ್ಕಂತ ಫಲವನ್ನು ನೀಡುವ ಕರ್ಮಫಲದಾತ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಎರಡೂ ಪ್ರಮುಖ ಗ್ರಹಗಳ ಸಂಯೋಜನೆಯು ದ್ವಾದಶ ರಾಶಿಗಳ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡುತ್ತದೆ. ಹೊಸ ವರ್ಷದಲ್ಲಿ ಅಂದರೆ 2023ರಲ್ಲಿ ಸೂರ್ಯ-ಶನಿ ಎರಡೂ ಗ್ರಹಗಳು ಕುಂಭ ರಾಶಿಯಲ್ಲಿ ಸಂಯೋಜಿಸಲಿದ್ದಾರೆ. ಈ ಸಂದರ್ಭದಲ್ಲಿ ಮೂರು ದಶಕಗಳ ಬಳಿಕ ಅದ್ಭುತ ಕಾಕತಾಳೀಯ ಸಂಭವಿಸಲಿದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಶನಿಯು 30 ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ವಿಶೇಷವೆಂದರೆ, ಈ ರಾಶಿಯಲ್ಲಿ ತನ್ನ ಪಿತೃ ಸೂರ್ಯನೊಟ್ಟಿಗೆ ಸಂಯೋಜನೆ ಹೊಂದಲಿದ್ದಾನೆ. ನ್ಯಾಯದ ದೇವರಾದ ಶನಿಯು ಜನವರಿ 17, 2023 ರಂದು ತನ್ನದೇ ಆದ ರಾಶಿಚಕ್ರ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಮತ್ತೊಂದೆಡೆ, ಸೂರ್ಯ ದೇವನೂ ಸಹ 13 ಫೆಬ್ರವರಿ 2023ರಂದು ಇದೇ ರಾಶಿಗೆ ಪ್ರವೇಶಿಸಲಿದ್ದು 14 ಮಾರ್ಚ್  2023 ರವರೆಗೆ ಅದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. 


ಇದನ್ನೂ ಓದಿ- Shani Gochar: 2023ರಿಂದ 2025ರವರೆಗೆ ಈ ರಾಶಿಯವರ ಮೇಲಿರಲಿದೆ ಶನಿಯ ಕೃಪಾಕಟಾಕ್ಷ


ಸುಮಾರು ಒಂದು ತಿಂಗಳ ಕಾಲ ಒಂದೇ ರಾಶಿಯಲ್ಲಿ ತಂದೆ-ಮಗನ ಸಂಯೋಗವು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮ ಬೀರಲಿದ್ದಾರೆ. ಈ ಸಮಯವು ಕೆಲವು ರಾಶಿಯವರಿಗೆ ಮಂಗಳಕರವಾಗಿದ್ದರೆ, ಕೆಲವರು ಈ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಕುಂಭ ರಾಶಿಯಲ್ಲಿ ಸೂರ್ಯ-ಶನಿಯ ಸಂಯೋಗ ಯಾರಿಗೆ ಅದೃಷ್ಟ, ಯಾರಿಗೆ ಅಶುಭ ಎಂದು ತಿಳಿಯಿರಿ...


ಇದನ್ನೂ ಓದಿ- ಬುಧ-ಶುಕ್ರ ಸಂಕ್ರಮಣದಿಂದ ಲಕ್ಷ್ಮೀನಾರಾಯಣ ಯೋಗ, ಬೆಳಗಲಿದೆ ಈ ರಾಶಿಯವರ ಅದೃಷ್ಟ


ಸೂರ್ಯ-ಶನಿಯ ಸಂಯೋಗ ಈ ರಾಶಿಯವರಿಗೆ ಭಾರೀ ಅದೃಷ್ಟ:
ಮೂರು ದಶಕಗಳ ಬಳಿಕ ತನ್ನದೇ ರಾಶಿಯಲ್ಲಿ ಶನಿ ದೇವನ ಪ್ರವೇಶವು ದ್ವಾದಶ ರಾಶಿಗಳಲ್ಲಿ ಆರು ರಾಶಿಯವರಿಗೆ ಬಹಳ ಶುಭ ಫಲಗಳನ್ನು ಕರುಣಿಸಲಿದೆ. ಈ ಸಮಯದಲ್ಲಿ ಕರ್ಮಫಲದಾತನು ವೃಷಭ, ಮಿಥುನ, ಕನ್ಯಾ, ಧನು, ಮಕರ ಮತ್ತು ಕುಂಭ ರಾಶಿಯ ಜನರಿಗೆ ಸನ್ಮಂಗಳವನ್ನು ಉಂಟು ಮಾಡಲಿದ್ದಾನೆ. ಈ ಸಮಯದಲ್ಲಿ ಈ ಆರು ರಾಶಿಯ ಜನರು ಶನಿಯ ಕೃಪೆಯಿಂದ ಕೆಲಸದಲ್ಲಿ ಯಶಸ್ಸು, ಸುಖ-ಸಂಪತ್ತನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ, ಸೂರ್ಯ ದೇವನ ಆಶೀರ್ವಾದದಿಂದ ಸಮಾಜದಲ್ಲಿ ಕೀರ್ತಿ, ಗೌರವ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತದೆ. ಉಳಿದ ರಾಶಿಯವರು ಸ್ವಲ್ಪ ಎಚ್ಚರಿಕೆಯಿನ ಇರುವುದು ಅಗತ್ಯ ಎನ್ನಲಾಗಿದೆ.


ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.