Second and Last Solar Eclipse of The Year 2023: ಖಗೋಳ ವಿದ್ಯಮಾನಗಳಾದ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಬಹಳ ಮಹತ್ವವಿದೆ. ವೈದಿಕ ಜ್ಯೋಯಿತಿಷ್ಯದಲ್ಲಿ ಸೂರ್ಯ, ಚಂದ್ರ ಗ್ರಹಣಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ, ಗ್ರಹಣ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ಅಮಂಗಳಕರ ಎಂದು ನಂಬಲಾಗಿದೆ. 


COMMERCIAL BREAK
SCROLL TO CONTINUE READING

2023ರಲ್ಲಿ ಎರಡು ಸೂರ್ಯಗ್ರಹಣಗಳು ಸಂಭವಿಸಲಿವೆ. ಅದರಲ್ಲಿ, ಇತ್ತೀಚೆಗಷ್ಟೇ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಿತ್ತು. ಇನ್ನು ಕೆಲವೇ ದಿನಗಳಲ್ಲಿ ಈ ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 14 ಅಕ್ಟೋಬರ್ 2023 ರಂದು ವರ್ಷದ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ. ಈ ದಿನ ಭಾರತೀಯ ಕಾಲಮಾನ  ರಾತ್ರಿ 8:34 ರಿಂದ ಮಧ್ಯರಾತ್ರಿ 2:25 ರವರೆಗೆ ಗ್ರಹಣ ಗೋಚರವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ ಸಮಯದಲ್ಲಿ ಈ ಗ್ರಹಣ ಸಂಭವಿಸುವುದರಿಂದ ಭಾರತದಲ್ಲಿ ಇದರ ಗೋಚರತೆ ಇರುವುದಿಲ್ಲ. ಆದಾಗ್ಯೂ, ಇದರ ಪ್ರಭಾವ ಮಾತ್ರ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. 


ಇದನ್ನೂ ಓದಿ- Weekly Horoscope: ಮೇ 22 ರಿಂದ ಮೇ 28ರವರೆಗೆ ದ್ವಾದಶ ರಾಶಿಗಳ ಫಲಾಫಲ ಹೇಗಿದೆ


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವರ್ಷದ ಎರಡನೇ ಮತ್ತು ಕೊನೆಯ ಸೂರ್ಯ ಗ್ರಹಣವು ಐದು ರಾಶಿಯವರ ಜೀವನದಲ್ಲಿ ಅಪಾಯಕಾರಿ ಸಮಯ ಎಂದು ಸಾಬೀತು ಪಡಿಸಲಿದೆ. ಈ ಸಮಯದಲ್ಲಿ ಈ ಐದು ರಾಶಿ ಚಕ್ರದವರನ್ನು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ವರ್ಷದ ಕೊನೆಯ ಸೂರ್ಯ ಗ್ರಹಣದ ವೇಳೆ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ... 


ಮೇಷ ರಾಶಿ: 
ವರ್ಷದ ಎರಡನೇ ಮತ್ತು ಕೊನೆಯ ಸೂರ್ಯ ಗ್ರಹಣವು  ಮೇಷ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ಮೇಷ ರಾಶಿಯವರು ಪ್ರತಿ ಹೆಜ್ಜೆಯನ್ನು ಬಹಳ ಜಾಗರೂಕರಾಗಿ ಇಡಬೇಕು. ಇಲ್ಲದಿದ್ದರೆ ಜೀವನದಲ್ಲಿ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ. ನಿಮ್ಮವರೇ ನಿಮಗೆ ಮೋಸ ಮಾಡಬಹುದಾದ್ದರಿಂದ ತುಂಬಾ ಎಚ್ಚರಿಕೆಯಿಂದ ಇರಿ. 


ವೃಷಭ ರಾಶಿ: 
2023ರ ಎರಡನೇ ಸೂರ್ಯ ಗ್ರಹಣವು ವೃಷಭ ರಾಶಿಯವರಿಗೂ ಸಹ ಅಷ್ಟು ಉತ್ತಮವಾಗಿಲ್ಲ. ಹಾಗಾಗಿ, ಈ ಸಮಯದಲ್ಲಿ ವೃಷಭ ರಾಶಿಯವರು ಹಣಕಾಸಿನ ವಿಷಯದಲ್ಲಿ ಭಾರೀ ನಷ್ಟವನ್ನು ಅನುಭವಿಸಬಹುದು. ಮಾತ್ರವಲ್ಲ, ಮಾನ ಹಾನಿ, ಗೌರವ ಹಾನಿ ಸಂಭವವಿರುವುದರಿಂದ ತುಂಬಾ ಜಾಗರೂಕರಾಗಿರಿ. 


ಸಿಂಹ ರಾಶಿ: 
ಈ ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯ ಗ್ರಹಣವು ಸಿಂಹ ರಾಶಿಯವರಿಗೂ ಸಹ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಆದಾಗ್ಯೂ, ನಿಮ್ಮ ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕದಿದ್ದರೆ ಭಾರೀ ನಷ್ಟವನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಿ.


ಇದನ್ನೂ ಓದಿ- ಅದ್ಭುತ ರಾಜಯೋಗಗಳ ನಿರ್ಮಾಣ: ಇಂದಿನಿಂದ ಇವರ ಬಾಳೇ ಬಂಗಾರ


ಕನ್ಯಾ ರಾಶಿ: 
ವರ್ಷದ ಎರಡನೇ ಸೂರ್ಯ ಗ್ರಹಣವು ಕನ್ಯಾ ರಾಶಿಯ ಜನರಿಗೆ ನಾನಾ ರೀತಿಯ ಸಂಕಷ್ಟವನ್ನು ತಂದೊಡ್ಡಬಹುದು. ಇದನ್ನು ತಪ್ಪಿಸಲು ಅನಗತ್ಯ ವಾದ-ವಿವಾದಗಳನ್ನು ತಪ್ಪಿಸಿ. ನಿಮ್ಮ ಕೋಪಕ್ಕೆ ಕಡಿವಾಣ ಹಾಕಿ, ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು. 


ತುಲಾ ರಾಶಿ:
ವರ್ಷದ ಕೊನೆಯ ಸೂರ್ಯ ಗ್ರಹಣ ತುಲಾ ರಾಶಿಯವರಿಗೂ ಕೂಡ ಅಷ್ಟು ಉತ್ತಮವಾಗಿರುವುದಿಲ್ಲ. ಇದರ ಪರಿಣಾಮವಾಗಿ ತುಲಾ ರಾಶಿಯವರಿಗೆ ಅನಗತ್ಯ ಒತ್ತಡ ಹೆಚ್ಚಾಗಬಹುದು. ಇದರಿಂದ ಮಾನಸಿಕ ಶಾಂತಿ ಹಾಳಾಗುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ತಾಳ್ಮೆಯನ್ನು ಕಾಪಾಡಿಕೊಳ್ಳಿ. ಯೋಗ, ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಪರಿಹಾರ ದೊರೆಯಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.