Weekly Horoscope From May 22 To 28 May 2023 in kannada: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರದ ನಿಮ್ಮ ಭವಿಷ್ಯ ಹೇಗಿದೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಯಾರಿಗೆ ಶುಭ? ಯಾರಿಗೆ ಅಶುಭ? ಮುಂದಿನ ಏಳು ದಿನಗಳ ಯಾವ ರಾಶಿಯವರಿಗೆ ಒಳ್ಳೆಯ ಸಮಯ ಎಂದು ತಿಳಿಯೋಣ...
ಮೇಷ ರಾಶಿ:
ಮೇಷ ರಾಶಿಯವರಿಗೆ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಈ ವಾರ ತುಂಬಾ ಮಂಗಳಕರವಾಗಿದೆ. ಈ ವಾರ ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ಪ್ರಯತ್ನಿಸಿದರೆ ಯಶಸ್ಸು. ಮನೆಯಲ್ಲಿ ಮಂಗಳಕರ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಲಾಭ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಯಾವುದೇ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವಾಗ ಹಿರಿಯರ ಮಾರ್ಗದರ್ಶನ ಪಡೆಯಿರಿ.
ವೃಷಭ ರಾಶಿ:
ವೃಷಭ ರಾಶಿಯವರಿಗೆ ಈ ವಾರ ಸವಾಲಿನ ವಾರ ಎಂತಲೇ ಹೇಳಬಹುದು. ಹಣಕಾಸಿನ ಏರುಪೇರು ನಿಮ್ಮನ್ನು ಬಾಧಿಸಲಿದೆ. ಖರ್ಚುಗಳನ್ನು ಕಂಟ್ರೋಲ್ ಮಾಡಿ. ಅನಿರೀಕ್ಷಿತ ಆಘಾತಕಾರಿ ಸುದ್ದಿಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು. ಹಾಗಾಗಿ ಎಚ್ಚರಿಕೆಯಿಂದಿರಿ. ಆದಾಗ್ಯೂ, ನಿಮ್ಮ ಪ್ರಯತ್ನವನ್ನು ಮುಂದುವರೆಸಿದರೆ ಉತ್ತಮ ಫಲ ದೊರೆಯಲಿದೆ. ನೀವು ನಿಮ್ಮ ಉದ್ಯೋಗ ಹಾಗೂ ವೈಯಕ್ತಿಕ ಜೀವನವನ್ನು ಒಂದು ಮಾಡಬೇಡಿ. ಇದರಿಂದ ತೊಂದರೆಗಳೆ ಹೆಚ್ಚು.
ಮಿಥುನ ರಾಶಿ:
ಮಿಥುನ ರಾಶಿಯವರಿಗೆ ನಿಮ್ಮ ಸ್ವಯಂಕೃತ ಅಪರಾಧಗಳೇ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಈ ವಾರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ಇರುತ್ತದೆ. ಈ ವಾರ ಮಿಥುನ ರಾಶಿಯವರಿಗೆ ಮಿಶ್ರ ಫಲ. ಪ್ರಯತ್ನ ನಿಮ್ಮದು, ಫಲಾಫಲ ದೇವರಿಗೆ ಬಿಡಿ. ವೈಯಕ್ತಿಯ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಿ. ವಿತ್ತೀಯ ಸ್ಥಿತಿಯೂ ಕೂಡ ಅಷ್ಟು ಉತ್ತಮವಾಗಿರುವುದಿಲ್ಲ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯಯವರಿಗೆ ಸುಖ-ಶಾಂತಿ, ನೆಮ್ಮದಿಗೆ ಕೊರತೆ ಇರುವುದಿಲ್ಲ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಬಹುದು. ಆದರೆ, ನೀರಿರುವ ಜಾಗಕ್ಕೆ ಹೋದಾಗ ಹೆಚ್ಚು ಎಚ್ಚರಿಯಿಂದಿರಿ. ಪ್ರವಾಸದ ವೇಳೆ ನಿಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಆ ಬಗ್ಗೆಯೂ ಗಮನ ಹರಿಸಿ. ನಿಮ್ಮ ಪೂರ್ವ ಪುಣ್ಯದಿಂದ ಲಾಭವಾಗಲಿದೆ. ದೀರ್ಘಕಾಲದ ನಿಮ್ಮ ಶತ್ರುಗಳೇ ನಿಮ್ಮ ಮಿತ್ರರಾಗಬಹುದು.
ಇದನ್ನೂ ಓದಿ- Surya Gochar 2023: ಸೂರ್ಯ ಸಂಯೋಗದಿಂದ ಈ ರಾಶಿಯವರ ಜೇಬು ತುಂಬಾ ದುಡ್ಡು; ಬದುಕಾಗುವುದು ಬಂಗಾರ-ಕಷ್ಟವೆಲ್ಲಾ ಮಾಯ!
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಶನಿಯ ನೇರ ಪ್ರಭಾವ ಹಾಗೂ ದ್ವಾದಶದಲ್ಲಿ ಕುಜ ಮತ್ತು ಶುಕ್ರ ಇರುವುದರಿಂದ ನಿಮ್ಮ ಜೀವನದಲ್ಲಿ ಸಂತೋಷದ ಸಮಯ ಎಂತಲೂ ಹೇಳಬಹುದು. ಈ ಸಮಯದಲ್ಲಿ ನೀವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವುದರಿಂದ ಯಶಸ್ಸು ಪ್ರಾಪ್ತಿಯಾಗಲಿದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಎಂಟನೇ ಮನೆಯಲ್ಲಿ ಗುರು ಮತ್ತು ರಾಹು ಇರುವುದರಿಂದ ಸ್ವಲ್ಪ ಹುಷಾರಾಗಿರಿ. ಈ ಸಮಯದಲ್ಲಿ ನಿಮಗೆ ಕಾಲು ನೋವು, ಮಂಡಿ ನೋವು ಕಾಣಿಸಿಕೊಳ್ಳುವುದರಿಂದ ಎಚ್ಚರಿಕೆಯಿಂದ ಇರಿ. ಸ್ವಲ್ಪ ತಾಳ್ಮೆಯಿಂದ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳು ಸುಗಮಗೊಳ್ಳಲಿವೆ. ಒಳ್ಳೆಯ ಔತಣಕೂಟಗಳಿಗೆ ಆಹ್ವಾನ ದೊರೆಯಬಹುದು.
ತುಲಾ ರಾಶಿ:
ತುಲಾ ರಾಶಿಯವರಿಗೆ ಐದನೇ ಮನೆಯಲ್ಲಿ ಚಂದ್ರ ಇರುವುದರಿಂದ ಮನಸ್ಸಿನ ಮೇಲೆ ಮಂದಗತಿ ಆವರಿಸುತ್ತದೆ. ಮನೋವೇಗ ಕಡಿಮೆ ಆಗುವುದರಿಂದ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳುವಲ್ಲಿ ಸಮಸ್ಯೆ ಇರಬಹುದು. ಸಪ್ತಮದಲ್ಲಿ ರಾಹು, ಲಗ್ನದಲ್ಲೇ ಕೇತು ಇರುವುದರಿಂದ ಕೆಟ್ಟ ಆಲೋಚನೆಗಳು ಬರಬಹುದು. ಆದರೆ, ಸಂಬಂಧಗಳನ್ನು ಹಾಳು ಮಾಡಿಕೊಳ್ಳಬೇಡಿ. ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಿ. ವ್ಯಾಪಾರಸ್ಥರಿಗೆ ಸಮಯ ಅನುಕೂಲಕರವಾಗಿದೆ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರಿಗೆ ನಾಲ್ಕನೇ ಮನೆಯಲ್ಲಿ ಶನಿ ಇರುವುದರಿಂದ ಸುಖ ಕಡಿಮೆ ಆಗಲಿದೆ. ರವಿಯ ನೇರ ದೃಷ್ಟಿಯಿಂದ ನಿಮ್ಮ ಜೀವನದಲ್ಲಿ ಸ್ವಲ್ಪ ವಿಶ್ರಾಂತಿ ದೊರೆಯುವ ಸಾಧ್ಯತೆ ಇದೆ. ಅತಿಯಾದ ಹಠ ನಿಮ್ಮನ್ನು ಕಾಡಬಹುದು. ಇದು ನಿಮ್ಮ ದೈಹಿಕ ಆರೋಗ್ಯವನ್ನು ಕೆಡಿಸಬಹುದು. ಇದನ್ನು ತಪ್ಪಿಸಲು ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಗಮನ ಹರಿಸಿ.
ಇದನ್ನೂ ಓದಿ- ಮಹಾ ರಾಜಯೋಗದ ಮೂಲಕ ಈ ರಾಶಿಯವರ ಜೀವನದಲ್ಲಿ ಹಣದ ಹರಿವು ! 2025 ರವರೆಗೆ ಕೈ ಹಿಡಿಯುವುದು ಅದೃಷ್ಟ
ಧನು ರಾಶಿ:
ಧನು ರಾಶಿಯವರಿಗೆ ಮೂರನೇ ಮನೆಯಲ್ಲಿ ಶನಿ ಇರುವುದರಿಂದ ಕಷ್ಟದ ದಿನಗಳು ಅಂತ್ಯಕ್ಕೆ ಬಂದಿದೆ. ಆದರೆ, ಯಾರನ್ನೂ ಕೂಡ ಸುಖಾಸುಮ್ಮನೆ ನಂಬಬೇಡಿ. ಯಾವುದೇ ಹೊಸ ಬ್ಯುಸಿನೆಸ್ ಮಾಡುವ ಆಲೋಚನೆ ಇದ್ದರೆ ಇದಕ್ಕಾಗಿ ಹಿರಿಯರ ಮತ್ತು ತಜ್ಞರ ಸಲಹೆ ಪಡೆಯುವುದು ತುಂಬಾ ಅಗತ್ಯ. ಅನಾವಶ್ಯಕವಾಗಿ ಬೇರೆಯವರ ವಿಚಾರಕ್ಕೆ ತಲೆ ಹಾಕಬೇಡಿ.
ಮಕರ ರಾಶಿ:
ಮಕರ ರಾಶಿಯವರಿಗೆ ಈ ವಾರ ಅಸಹಜ ಭಾವನೆಗಳು ಮೂಡುವ ಸಮಯ. ಆದರೆ, ಇದರಿಂದ ಸಮಸ್ಯೆಗಳು ಕೂಡ ಇದೆ. ಸೋಂಕು ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಗುಂಪಿನಲ್ಲಿರಲು ಪ್ರಯತ್ನಿಸಿ. ನಿಮ್ಮ ದುರಾಭ್ಯಾಸಗಳಿಂದ ಹೊರಗುಳಿಯಿರಿ ಇಲ್ಲವೇ, ನಿಮ್ಮ ಜೊತೆಗೆ ನಿಮ್ಮ ಕುಟುಂಬದವರಿಗೂ ಕೂಡ ಮಾನಹಾನಿಯಾಗುವ ಸಾಧ್ಯತೆ ಇದೆ.
ಕುಂಭ ರಾಶಿ:
ಕುಂಭ ರಾಶಿಯವರಿಗೆ ಶನಿಯ ಪ್ರಭಾವದಿಂದ ನಿಮ್ಮ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ನಿದ್ರಾಹೀನತೆ ಕಾಡಬಹುದು. ಇದಕ್ಕಾಗಿ ಸೂಕ್ತವಾದ ವೈದ್ಯರ ಸಲಹೆ ಪಡೆಯಿರಿ. ಜೀವನದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ತುಂಬಾ ಹುಷಾರಾಗಿರಿ, ಏಕೆಂದರೆ ಈಗ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಭವಿಷ್ಯದಲ್ಲಿ ಬಹಳ ಮಹತ್ವದ ಪರಿಣಾಮ ಬೀರಲಿದೆ. ತುಂಬಾ ಜಿಪುಣತನ ಒಳ್ಳೆಯದಲ್ಲ.
ಮೀನ ರಾಶಿ:
ಮೀನ ರಾಶಿಯವರಿಗೆ ನೀವು ನಿರೀಕ್ಷಿಸಿದಷ್ಟು ಹಣ, ಅಧಿಕಾರ ಸಿಗದೇ ಇರಬಹುದು. ದಂಪತಿಗಳಿಗೆ ಸಂತಾನ ಪ್ರಾಪ್ತಿ ಯೋಗವಿದೆ. ಆದಾಗ್ಯೂ, ನಿಮ್ಮ ಆರೋಗ್ಯದ ಬಗ್ಗೆ ನೀವು ಕೊಂಚ ಗಮನ ಹಾರಿಸಬೇಕು. ಯಾವುದೇ ವಿಚಾರದಲ್ಲಿ ನೀವು ಕೆಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ