Surya Guru Yuti Effects: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಜ ಸೂರ್ಯ ದೇವನು ಏಪ್ರಿಲ್ 14ರಂದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಬಳಿಕ ಏಪ್ರಿಲ್ 22ರಂದು ದೇವಗುರು ಬೃಹಸ್ಪತಿಯೂ ಸಹ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ ಸುಮಾರು 12 ವರ್ಷಗಳ ಬಳಿಕ ಒಂದೇ ರಾಶಿಯಲ್ಲಿ ಸೂರ್ಯ-ಗುರು ಯುತಿ ಉಂಟಾಗಲಿದೆ. ಒಂದೇ ರಾಶಿಯಲ್ಲಿ ಸೂರ್ಯ-ಗುರು ಸಂಯೋಜನೆಯಿಂದ ದ್ವಾದಶ ರಾಶಿಗಳ ಮೇಲೆ ಶುಭ-ಆಶುಭ ಪರಿಣಾಮಗಳು ಕಂಡು ಬರುತ್ತದೆ. ಆದಾಗ್ಯೂ, 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ವಿಶೇಷ ಗ್ರಹಗಳ ಮೈತ್ರಿಯಿಂದಾಗಿ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಸುಮಾರು 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸೂರ್ಯ ಮತ್ತು ಗುರು ಗ್ರಹಗಳ ಸಂಯೋಜನೆಯಿಂದ ಕೆಲವು ರಾಶಿಚಕ್ರದ ಚಿಹ್ನೆಗಳು ತುಂಬಾ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತವೆ.  ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ... 


ಮೇಷ ರಾಶಿ: 
ಮೇಷ ರಾಶಿಯಲ್ಲಿಯೇ ಸೂರ್ಯ-ಗುರು ಯುತಿ ರೂಪುಗೊಳ್ಳುವುದರಿಂದ ಈ ರಾಶಿಯವರ ಮೇಲೆ ಗರಿಷ್ಠ ಪರಿಣಾಮ ಕಂಡುಬರಲಿದೆ.  ಈ ಸಮಯದಲ್ಲಿ ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ವ್ಯಾಪಾರದಲ್ಲಿಯೂ ನೀವು ಅದರ ಸಂಪೂರ್ಣ ಲಾಭವನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ ಈ ಮೈತ್ರಿಯ ಪ್ರಭಾವದಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಸದೃಢವಾಗುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವೂ ಸುಧಾರಿಸುತ್ತದೆ. ನೀವು ಸೃಜನಾತ್ಮಕ ಕೆಲಸಗಳಲ್ಲಿ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ.


ಇದನ್ನೂ ಓದಿ- ವರ್ಷದ ಮೊದಲ ಸೂರ್ಯ ಗ್ರಹಣದ ಪರಿಣಾಮ: ಈ ರಾಶಿಯವರು ತುಂಬಾ ಎಚ್ಚರಿಕೆಯಿಂದಿರಿ


ಮಿಥುನ ರಾಶಿ:
ಸೂರ್ಯ-ಗುರುಗಳ ಸಂಯೋಗದಿಂದ  ಮಿಥುನ ರಾಶಿಯವರಿಗೆ ವಿಶೇಷ ಲಾಭ ದೊರೆಯುತ್ತದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಈ ಮೈತ್ರಿಯ ಪ್ರಭಾವದಿಂದ, ನೀವು ಅನೇಕ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ, ವೃತ್ತಿಜೀವನದಲ್ಲಿ ಉತ್ತುಂಗಕ್ಕೇರುವ ಸಾಧ್ಯತೆ ಇದೆ. ಮಿಥುನ ರಾಶಿಯ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ. ಮಿಥುನ ರಾಶಿಯ ಜನರು ಅಪಾರ ಸಂಪತ್ತನ್ನು ಪಡೆಯಬಹುದು.  


ಇದನ್ನೂ ಓದಿ- ಇಂದಿನಿಂದ ಬದಲಾಗುವುದು ಈ ಐದು ರಾಶಿಯವರ ಅದೃಷ್ಟ! ಆಗುವುದು ಧನವೃಷ್ಠಿ 


ತುಲಾ ರಾಶಿ: 
ಏಪ್ರಿಲ್ನಲ್ಲಿ ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ಸೂರ್ಯ-ಗುರುಗಳ ಸಂಯೋಜನೆಯು ತುಲಾ ರಾಶಿಯವರಿಗೆ ಬಂಗಾರದಂತ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ತುಲಾ ರಾಶಿಯವರ ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು ಕೈ ತುಂಬಾ ಹಣ ಗಳಿಸುವಿರಿ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ ನಿಮ್ಮ ನೆಚ್ಚಿನ ಉದ್ಯೋಗ ಸಿಗಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ಬಂಪರ್ ಲಾಭವಾಗಲಿದ್ದು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.