ಇಂದಿನಿಂದ ಬದಲಾಗುವುದು ಈ ಐದು ರಾಶಿಯವರ ಅದೃಷ್ಟ! ಆಗುವುದು ಧನವೃಷ್ಠಿ

ಮೇಷ ರಾಶಿಯಲ್ಲಿ ಬುಧ ಗ್ರಹದ ಪ್ರವೇಶವು ಅನೇಕ ಪ್ರಮುಖ ಬದಲಾವಣೆಗಳನ್ನು ತರಲಿದೆ. ಇದು 5 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. 

ಬೆಂಗಳೂರು : ಇಂದು ಮಧ್ಯಾಹ್ನ 2.44ಕ್ಕೆ ಬುಧ ಗ್ರಹ ಸಂಕ್ರಮಿಸಿ ಮೇಷ ರಾಶಿಗೆ ಪ್ರವೇಶಿಸುತ್ತಿದೆ. ಬುಧ ಗ್ರಹದ ರಾಶಿ ಬದಲಾವಣೆಯು ಮೇಷ ರಾಶಿಯಲ್ಲಿ ಬುಧ ಮತ್ತು ರಾಹು ಯುತಿ ಏರ್ಪಡುತ್ತದೆ.   ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ. ಈ ರೀತಿಯಾಗಿ, ಮೇಷ ರಾಶಿಯಲ್ಲಿ ಬುಧ ಗ್ರಹದ ಪ್ರವೇಶವು ಅನೇಕ ಪ್ರಮುಖ ಬದಲಾವಣೆಗಳನ್ನು ತರಲಿದೆ. ಇದು 5 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಬುಧ ಸಂಕ್ರಮಣ ಬಹಳ ಶುಭವಾಗಿರಲಿದೆ. ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆದಾಯ ಹೆಚ್ಚಲಿದೆ. ಬಹಳ ದಿನಗಳಿಂದ ಮನದಲ್ಲಿ ಅಡಗಿರುವ ಆಸೆ ಈಡೇರಬಹುದು. ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವುದು ಈ ಸಮಯದಲ್ಲಿ ಸಾಧ್ಯವಾಗುತ್ತದೆ. 

2 /5

ಕರ್ಕಾಟಕ ರಾಶಿ : ಬುಧಗ್ರಹದ ಬದಲಾವಣೆಯಿಂದ ರೂಪುಗೊಂಡ ರಾಹು-ಬುಧ ಸಂಯೋಗವು ಕರ್ಕಾಟಕ ರಾಶಿಯವರಿಗೆ ಬಹಳಷ್ಟು ಲಾಭ ನೀಡುತ್ತದೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಸಂಬಂಧಗಳು ಉತ್ತಮವಾಗಿರುತ್ತವೆ.   

3 /5

ಸಿಂಹ ರಾಶಿ : ಬುಧ ಗ್ರಹದ ರಾಶಿ ಪರಿವರ್ತನೆಯು ಸಿಂಹ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ನೀಡಲಿದೆ. ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಮನಸ್ಸಿನ ಇಚ್ಛೆ ಈಡೇರುವುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಪ್ರವಾಸಕ್ಕೆ ಹೋಗಬಹುದು. ವೃತ್ತಿಯಲ್ಲಿ ಉನ್ನತಿ ಕಂಡುಬರಲಿದೆ. 

4 /5

ಧನು ರಾಶಿ : ಬುಧ ಸಂಕ್ರಮಣವು ಧನು ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭವನ್ನು ನೀಡುತ್ತದೆ. ವಿದ್ಯಾರ್ಥಿಗಳು ವಿಶೇಷ ಯಶಸ್ಸನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಒದಗಿ ಬರಲಿವೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ.  ಮದುವೆಯಾಗಲು ಬಯಸುವವರಿಗೆ ಇದು ಒಳ್ಳೆಯ ಸಮಯ. 

5 /5

ಕುಂಭ ರಾಶಿ :  ಮಾಧ್ಯಮ ಉದ್ಯಮಕ್ಕೆ ಸಂಬಂಧಿಸಿದ ಜನರು ಹೊಸ ಅವಕಾಶಗಳನ್ನು ಪಡೆಯಬಹುದು. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಬಡ್ತಿ ಸಿಗಬಹುದು. ಆದಾಯ ಹೆಚ್ಚಾಗಲಿದೆ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)