ಸೂರ್ಯ ಗ್ರಹಣದ ದಿನದಿಂದಲೇ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು!ಒಲಿದು ಬರುವುದು ಹೊಸ ಮನೆ ಖರೀದಿ ಭಾಗ್ಯ
Surya Grahan 2024 Effects:ಸೂರ್ಯ ಗ್ರಹಣದ ದಿನದಿಂದಲೇ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದೆ. ಹೊಸ ಮನೆ ವಾಹನ ಖರೀದಿಯ ಭಾಗ್ಯವೂ ಒಲಿದು ಬರಲಿದೆ.
Surya Grahan 2024 Effects : 2024ರ ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 2, 2024 ರಂದು ಬುಧವಾರ ಸಂಭವಿಸುತ್ತದೆ.ಪಿತೃ ಪಕ್ಷದ ಅಮಾವಾಸ್ಯೆಯಂದು ಈ ಸೂರ್ಯಗ್ರಹಣ ಸಂಭವಿಸಲಿದೆ.ಇದನ್ನು ಸರ್ವ ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಎಂದು ಕರೆಯುತ್ತಾರೆ.ಈ ಸೂರ್ಯಗ್ರಹಣವು ಅಕ್ಟೋಬರ್ 2 ರಂದು ರಾತ್ರಿ 09:13 ಕ್ಕೆ ಪ್ರಾರಂಭವಾಗಿ ಮುಂಜಾನೆ 3:17ಕ್ಕೆ ಕೊನೆಯಾಗುತ್ತದೆ.ಇದು ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ.6 ಗಂಟೆ 04 ನಿಮಿಷಗಳವರೆಗೆ ಈ ಗ್ರಹಣ ಗೋಚರಿಸಲಿದೆ.ಸೂರ್ಯಗ್ರಹಣವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ನಾಲ್ಕು ರಾಶಿಯವರ ಮೇಲೆ ಸೂರ್ಯಗ್ರಹಣ ಅತಿ ಹೆಚ್ಚು ಶುಭ ಪರಿಣಾಮಗಳನ್ನೇ ನೀಡಲಿದೆ.
ಈ ರಾಶಿಯವರ ಮೇಲೆ ಸೂರ್ಯಗ್ರಹಣದ ಧನಾತ್ಮಕ ಪರಿಣಾಮ :
ಮೇಷ ರಾಶಿ :ಈ ಸೂರ್ಯಗ್ರಹಣವು ನಿಮ್ಮ ಅದೃಷ್ಟದ ಬಾಗಿಲು ತೆರೆಸುತ್ತದೆ.ನೀವು ಹಾಕಿಕೊಳ್ಳುವ ಹೊಸ ಯೋಜನೆ ದಿದ್ದ ಮಟ್ಟದ ಲಾಭವನ್ನು ತಂದುಕೊಡಲಿದೆ. ಹೊಸ ವಾಹನ ಅಥವಾ ಮನೆ ಖರೀದಿಸಬಹುದು.ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.ಆರ್ಥಿಕ ಲಾಭವಿರುತ್ತದೆ.
ಮಿಥುನ ರಾಶಿ :ವರ್ಷದ ಕೊನೆಯ ಸೂರ್ಯಗ್ರಹಣವು ನಿಮ್ಮ ಕಷ್ಟಗಳಿಗೆ ಪರಿಹಾರವಾಗಿರಲಿದೆ.ನಿಮ್ಮ ಜೀವನದ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುವುದು.ಆರ್ಥಿಕ ಪ್ರಗತಿ ಸಾಧಿಸುವುದು ಕೂಡಾ ಸಾಧ್ಯವಾಗುವುದು. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.ಹೊಸ ಆಸ್ತಿ ಖರೀದಿಸುವ ಅವಕಾಶವಿದೆ.
ಸಿಂಹ ರಾಶಿ :ಈ ಸೂರ್ಯಗ್ರಹಣವು ಸಿಂಹ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ವ್ಯಾಪಾರ ಮಾಡುವವರು ಉತ್ತಮ ಯಶಸ್ಸನ್ನು ಸಾಧಿಸುವುದು ಸಾಧ್ಯವಾಗುತ್ತದೆ. ಅದರಲ್ಲೂ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಅತಿ ಹೆಚ್ಚು ಲಾಭವಾಗಲಿದೆ.
ಇದನ್ನೂ ಓದಿ :ಈ ರಾಶಿಯವರ ಜಾತಕದಲ್ಲಿ ಅದ್ಭುತ ರಾಜಯೋಗ !ಹರಿದು ಬರುವುದು ಧನ ಸಂಪತ್ತು! ಹಿಂದೆಂದೂ ಕಾಣದ ಕೀರ್ತಿ ಯಶಸ್ಸು ಪ್ರಾಪ್ತಿ!
ಕನ್ಯಾರಾಶಿ :ಕನ್ಯಾರಾಶಿಯಲ್ಲಿ ಸೂರ್ಯಗ್ರಹಣ ಹಿಡಿಯುತ್ತಿದೆ. ಆದರೂ ಈ ರಾಶಿಯವರಿಗೆ ಇದು ಅನುಕೂಲಕರವಾಗಿಯೇ ಇರಲಿದೆ.ಬೇರೆ ರೀತಿಯಲ್ಲಿ ಇದನ್ನು ಹೇಳುವುದಾದರೆ, ಈ ಸಮಯವು ನಿಮಗೆ ವರವಾಗಿ ಪರಿಣಮಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.