Akshaya Tritiya Remedies: ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ 22 ಏಪ್ರಿಲ್ 2023 ಶನಿವಾರದಂದು ಅಕ್ಷಯ ತೃತೀಯ ಇರಲಿದೆ. ಹಿಂದೂ ಸಂಪ್ರದಾಯಗಳ ಪ್ರಕಾರ, ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗಿದೆ. 


COMMERCIAL BREAK
SCROLL TO CONTINUE READING

ಅಕ್ಷಯ ತೃತೀಯ ದಿನದಂದು ಭಗವಾನ್ ವಿಷ್ಣು, ತಾಯಿ ಮಹಾಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ಇದರೊಂದಿಗೆ ಈ ದಿನ ಕೈಗೊಳ್ಳುವ ಯಾವುದೇ ಶುಭ ಕೆಲಸಗಳು ಕೂಡ ಉತ್ತಮ ಫಲ ನೀಡುತ್ತವೆ. ಮನೆಯಲ್ಲಿ ಏಳ್ಗೆ, ಅಭಿವೃದ್ಧಿಯಾಗಲಿದೆ. ಅಂತಹ ಮನೆಯಲ್ಲಿ ಎಂದಿಗೂ ಕೂಡ ಹಣದ ಕೊರತೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. 


ಮನೆಯಲ್ಲಿ ಲಕ್ಷ್ಮಿ ಆಗಮನಕ್ಕಾಗಿ ಅಕ್ಷಯ ತೃತೀಯದಂದು ತಪ್ಪದೇ ಈ ಕ್ರಮಗಳನ್ನು ಕೈಗೊಳ್ಳಿ: 
ಲಕ್ಷ್ಮಿ ದೇವಿಯನ್ನು ಪೂಜಿಸಿ: 

ಅಕ್ಷಯ ತೃತೀಯ ದಿನದಂದು ತಪ್ಪದೇ ತಾಯಿ ಲಕ್ಷ್ಮಿ ದೇವಿಯನ್ನು ಪೂಜಿಸಿ. ಈ ದಿನ ಮಾತೆ ಲಕ್ಷ್ಮಿಯನ್ನು ಪೂಜಿಸುವುದರಿಂದ ಅಂತಹ ಮನೆಯಲ್ಲಿ ಸಂತೋಷ, ಸಮೃದ್ಧಿ ತುಂಬಿ ತುಳುಕುತ್ತದೆ ಎಂದು ನಂಬಲಾಗಿದೆ. ಲಕ್ಷ್ಮೀದೇವಿಯನ್ನು ಪೂಜಿಸುವಾಗ ತಪ್ಪದೇ ಮಾತೆಗೆ ಗುಲಾಬಿ ಹೂವುಗಳನ್ನು ಅರ್ಪಿಸಿ.


ಇದನ್ನೂ ಓದಿ- ಈ ಬಾರಿ ಅಕ್ಷಯ ತೃತೀಯಕ್ಕಿದೆ ವಿಶೇಷ ಪ್ರಾಮುಖ್ಯತೆ! ಈ ಮುಹೂರ್ತದಲ್ಲಿಯೇ ಖರೀದಿಸಿ ಚಿನ್ನ


ಸ್ಫಟಿಕ ಮಾಲೆ:
ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ದೇವಿಗೆ ಸ್ಫಟಿಕ ಮಾಲೆಯನ್ನು ಆಂತಹ ಮನೆಯಲ್ಲಿ ಸಂಪತ್ತು, ಸಮೃದ್ಧಿ ಎಂದಿಗೂ ಕಡಿಮೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.  


ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಪಡೆಯಲು ಹೀಗೆ ಮಾಡಿ: 
ಯಾವುದೇ ರೀತಿಯ ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಪಡೆಯಲು ಅಕ್ಷಯ ತೃತೀಯ ದಿನದಂದು ತಾಯಿ ಲಕ್ಷ್ಮಿಯನ್ನು ಅರಿಶಿನ ಕುಂಕುಮದಿಂದ ಪೂಜಿಸಿ. 


ಇದನ್ನೂ ಓದಿ- Daan On Akshaya Tritiya: ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿದರೆ ಸದಾ ಇರುತ್ತೆ ಲಕ್ಷ್ಮೀ ಕೃಪೆ


ಚಿನ್ನ ಅಥವಾ ಬೆಳ್ಳಿ ಖರೀದಿ: 
ಅಕ್ಷಯ ತೃತೀಯ ದಿನದಂದು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಖರೀದಿಸಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣದ ಹರಿವು ಸದಾ ಇರುತ್ತದೆ. ಮನೆ ಸಂಪತ್ತಿನಿಂದ ತುಂಬಿರುತ್ತದೆ ಎಂದು ನಂಬಲಾಗಿದೆ. 


ದಾನ ಮಾಡಿ: 
ಅಕ್ಷಯ ತೃತೀಯ ದಿನದಂದು ನೀವು ನಿಮ್ಮ ಕೈಲಾದಷ್ಟು ಏನನ್ನಾದರೂ ಯಾರಿಗಾದರೂ ದಾನ ಮಾಡಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.