Wednesday Remedies: ಹಿಂದೂ ಧರ್ಮದಲ್ಲಿ ಯಾವುದೇ ಕೆಲಸ-ಕಾರ್ಯಗಳಲ್ಲಿ ವಿಘ್ನ ವಿನಾಶಕ ಗಣೇಶನಿಗೆ ಪ್ರಥಮ ಪೂಜೆಯನ್ನು ಅರ್ಪಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧವಾರದಂದು ಗಣೇಶನಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸುವುದರ ಜೊತೆಗೆ ವೃತ್ತಿ ರಂಗದಲ್ಲಿ ವ್ಯವಹಾರದಲ್ಲಿ ಎದುರಾಗಿರುವ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧವಾರದಂದು ಗಣೇಶನ ಆಶೀರ್ವಾದ ಪಡೆಯಲು ತುಂಬಾ ಪ್ರಾಶಸ್ತ್ಯ ದಿನ. ಬುಧವಾರದಂದು ವಿಘ್ನ ವಿನಾಶಕನನ್ನು ಭಕ್ತಿಯಿಂದ ನಿಯಮಾನುಸಾರ ಪೂಜಿಸುವುದರಿಂದ, ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಜಾತಕದಲ್ಲಿ ಬುಧನ ಸ್ಥಾನ ಬಲಗೊಳ್ಳುತ್ತದೆ ಎಂದು ನಂಬಲಾಗಿದೆ. 


ಇದನ್ನೂ ಓದಿ- Akshaya Tritiya: 125 ವರ್ಷಗಳ ನಂತರ ಅಕ್ಷಯ ತೃತೀಯದಂದು ಪಂಚಗ್ರಹಿ ಯೋಗ ನಿರ್ಮಾಣ, ಈ ರಾಶಿಯವರಿಗೆ ಬಂಪರ್


ಬುಧ ಗ್ರಹ ಬಲ, ವೃತ್ತಿ-ವ್ಯವಹಾರದಲ್ಲಿ ಪ್ರಗತಿಗಾಗಿ ಇಂದೇ ಈ ಕೆಲಸ ಮಾಡಿ :- 
ಗಣೇಶನ ಪೂಜೆ:

ಬುಧವಾರದಂದು ಗಣೇಶನ ಪೂಜೆಗೆ ವಿಶೇಷ ಮಹತ್ವವಿದ್ದು, ಬುಧವಾರದಂದು ಗಣೇಶನ ಪೂಜೆಯಲ್ಲಿ ಋಣಹರ್ತ ಗಣೇಶ ಸ್ತೋತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಂಕಷ್ಟಗಳೆಲ್ಲಾ ದೂರವಾಗಿ ಸುಖ-ಸಂತೋಷ, ನೆಮ್ಮದಿನ ಜೀವನ ನಿಮ್ಮದಾಗುತ್ತದೆ ಎಂದು ಹೇಳಲಾಗುತ್ತದೆ. 


ದರ್ಬೆಯನ್ನು ಅರ್ಪಿಸಿ:
ಗಣೇಶನಿಗೆ ದರ್ಬೆಯೆಂದರೆ ಬಲು ಪ್ರಿಯ. ಹಾಗಾಗಿ, ಗಣೇಶನ ಪೂಜೆಯಲ್ಲಿ ದರ್ಬೆಯನ್ನು ತಪ್ಪದೇ ಅರ್ಪಿಸಿ. ಬುಧವಾರದಂದು ಗಣೇಶನ ಪೂಜೆಯಲ್ಲಿ 21 ದರ್ಬೆಯ 21  ಗಂಟುಗಳನ್ನು ಅರ್ಪಿಸುವುದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆಯಿದೆ. ವೃತ್ತಿ-ವ್ಯವಹಾರದಲ್ಲಿಯೂ ಪ್ರಗತಿ ಕಂಡು ಬರುತ್ತದೆ. 


ಇದನ್ನೂ ಓದಿ- Akshaya Tritiya 2023: ತಾಯಿ ಮಹಾಲಕ್ಷ್ಮೀ ಆಶೀರ್ವಾದಕ್ಕಾಗಿ ಅಕ್ಷಯ ತೃತೀಯದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ


ಹಸುವಿಗೆ ಪೂಜೆ ಮಾಡಿ ಆಹಾರ ಅರ್ಪಿಸಿ: 
ಹಿಂದೂ ಧರ್ಮದಲ್ಲಿ ಹಸುವಿನಲ್ಲಿ 33 ಕೋಟಿ ದೇವ ದೇವತೆಗಳು ನೆಲಸಿದ್ದಾರೆ ಎಂಬ ನಂಬಿಕೆ ಇದ್ದು, ಬುಧವಾರದಂದು ಹಸುವಿಗೆ ಪೂಜೆ ಮಾಡಿ ಹಸಿರು ಆಹಾರಗಳನ್ನು ತಿನ್ನಿಸುವುದರಿಂದ ಗ್ರಹ ದೋಷಗಳಿಂದ ಮುಕ್ತಿ ದೊರೆಯುತ್ತದೆ. ಮಾತ್ರವಲ್ಲ, ಈ ಪರಿಹಾರವು ವ್ಯಕ್ತಿಯನ್ನು ಜೀವನದ ನಾನಾ ರೀತಿಯ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.