ಇನ್ನೆರಡು ದಿನಗಳಲ್ಲಿ ವರ್ಷದ ಮೊದಲ ಸೂರ್ಯಗ್ರಹಣ: ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

First Solar Eclipse of 2023 Effect: ಇನ್ನು ಕೆಲವೇ ಘಂಟೆಗಳಲ್ಲಿ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಖಗೋಳದ ದೃಷ್ಟಿಯಿಂದ ಮಾತ್ರವಲ್ಲ, ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದಲೂ ಕೂಡ ಗ್ರಹನಗಳಿಗೆ ತುಂಬಾ ಮಹತ್ವವಿದೆ. ಈ ಬಾರಿಯ ಸೂರ್ಯ ಗ್ರಹಣ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಬಾಗಿಲನ್ನು ತೆರೆಯಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Apr 17, 2023, 05:11 PM IST
  • ವರ್ಷದ ಮೊದಲ ಸೂರ್ಯ ಗ್ರಹಣದಂದು ಮಂಗಳಕರ ಯೋಗಗಳ ನಿರ್ಮಾಣ
  • ಕೆಲವು ರಾಶಿಯವರಿಗೆ ಈ ಸೂರ್ಯಗ್ರಹಣ ತುಂಬಾ ಫಲಪ್ರದ
  • ಯಾವ ರಾಶಿಯವರಿಗೆ ಸೂರ್ಯ ಗ್ರಹಣ ಶುಭ ಫಲಗಳನ್ನು ನೀಡಲಿದೆ ತಿಳಿಯೋಣ
ಇನ್ನೆರಡು ದಿನಗಳಲ್ಲಿ ವರ್ಷದ ಮೊದಲ ಸೂರ್ಯಗ್ರಹಣ: ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು  title=

Surya Grahana Effect: ಹಿಂದೂ ಕ್ಯಾಲೆಂಡರ್ ಪ್ರಕಾರ, ಇನ್ನೆರಡು ದಿನಗಳ ಬಳಿಕ ಅಂದರೆ 20 ಏಪ್ರಿಲ್ 2023ರ ಗುರುವಾರದಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, 2023ರ ಮೊದಲ ಸೂರ್ಯ ಗ್ರಹಣದಂದು ಐದು ಶುಭ ಯೋಗಗಳು ನಿರ್ಮಾಣವಾಗುತ್ತಿದ್ದು, ಇದು ಕೆಲವು ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. 

ವಾಸ್ತವವಾಗಿ, 2023ರ ಮೊದಲ ಸೂರ್ಯ ಗ್ರಹಣದ ದಿನ ಸರ್ವಾರ್ಥ ಸಿದ್ಧಿ ಮತ್ತು ಪ್ರೀತಿಯಂತಹ ಮಂಗಳಕರ ಯೋಗವು ರೂಪುಗೊಳ್ಳಲಿವೆ. ಇದಲ್ಲದೆ, ಈ ದಿನ ಮೇಷ ರಾಶಿಯಲ್ಲಿ ಬುಧ-ರಾಹು ಗ್ರಹಗಳು ಸಂಧಿಸಲಿದ್ದು ಗ್ರಹಗಳ ವಿಶೇಷ ಸ್ಥಾನಮಾನದ ಫಲವಾಗಿ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ... 

ಇದನ್ನೂ ಓದಿ- Surya Grahan 2023: ಸೂರ್ಯ ಗ್ರಹಣದಂದು 5 ಶುಭ ಯೋಗ ನಿರ್ಮಾಣ, ಈ ರಾಶಿಯವರಿಗೆ ಭಾರೀ ಲಾಭ

2023ರ ಮೊದಲ ಸೂರ್ಯಗ್ರಹಣ ಪರಿಣಾಮ: ಚಿನ್ನದಂತೆ ಹೊಳೆಯಲಿದೆ ಈ ರಾಶಿಯವರ ಭಾಗ್ಯ : 
ಮಿಥುನ ರಾಶಿ: 

ಈ ಬಾರಿಯ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ಸಾಕಷ್ಟು ಅವಕಾಶಗಳನ್ನು ತರಲಿದೆ. ಮಾತ್ರವಲ್ಲ, ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಆತ್ಮವಿಶ್ವಾಸದೊಂದಿಗೆ ಕೆಲಸ ಮಾಡಿದರೆ ಯಶಸ್ಸು ಪ್ರತಿ ಹಂತದಲ್ಲೂ ನಿಮ್ಮದಾಗಲಿದೆ. ಈ ಸಮಯದಲ್ಲಿ ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. 

ಕರ್ಕಾಟಕ ರಾಶಿ:  
ವರ್ಷದ ಮೊದಲ ಸೂರ್ಯ ಗ್ರಹಣವು ಕರ್ಕಾಟಕ ರಾಶಿಯವರಿಗೂ ಕೂಡ ತುಂಬಾ ಶುಭ ಫಲಗಳನ್ನು ನೀಡಲಿದೆ. ಸೂರ್ಯ ಗ್ರಹಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಶುಭ ಯೋಗಗಳ ಪರಿಣಾಮವಾಗಿ ವ್ಯಾಪಾರ-ವ್ಯವಹಾರಗಳು ವೃದ್ಧಿಯಾಗಲಿದ್ದು  ಆರ್ಥಿಕ ಸ್ಥಿತಿಯೂ ಬಲಗೊಳ್ಳಲಿದೆ. 

ಇದನ್ನೂ ಓದಿ- Surya Grahan 2023: ಸೂರ್ಯಗ್ರಹಣದ ದಿನಾಂಕ, ಸಮಯ & ಪರಿಣಾಮಗಳ ಬಗ್ಗೆ ತಿಳಿಯಿರಿ

ಧನು ರಾಶಿ: 
2023ರ ಮೊದಲ ಸೂರ್ಯಗ್ರಹಣ ಪರಿಣಾಮವಾಗಿ ಧನು ರಾಶಿಯವರ ಬಾಳು ಬಂಗಾರದಂತೆ ಹೊಳೆಯಲಿದೆ ಎಂತಲೇ ಹೇಳಬಹುದು. ಈ ಸಮಯದಲ್ಲಿ ಧನು ರಾಶಿಯವರು ಸಾಕಷ್ಟು ಹಣಕಾಸಿನ ಲಾಭವನ್ನು ಗಳಿಸುವರು. ಮಾತ್ರವಲ್ಲಿ ಸಮಾಜದಲ್ಲಿ ಅಪಾರ ಕೀರ್ತಿ-ಯಶಸ್ಸನ್ನು ಸಹ ಪಡೆಯುವರು. ಹಣಕಾಸಿನ ಹರಿವು ಉತ್ತಮವಾಗಿರಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News