Remedies For Rahu-Ketu Dosha: ವೈದಿಕ ಜ್ಯೋತಿಷ್ಯದ ಪ್ರಕಾರ, ನೆರಳು, ಪಾಪ ಗ್ರಹಗಳು ಎಂದು ಕರೆಯಲ್ಪಡುವ ರಾಹು-ಕೇತುಗಳು ಸದಾ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಈ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಾಗಲು ಸುಮಾರು ಒಂದೂವರೆ ವರ್ಷಗಳು ಬೇಕಾಗುತ್ತದೆ. ಈ ವರ್ಷ 30 ಅಕ್ಟೋಬರ್ 2023 ರಂದು ಈ ಎರಡೂ ಪಾಪ ಗ್ರಹಗಳು ಮೀನ ರಾಶಿಯನ್ನು ಪ್ರವೇಶಿಸಲಿವೆ. ಇದು ಕೆಲವು ರಾಶಿಯವರ ಜಾತಕದಲ್ಲಿ ರಾಹು-ಕೇತುಗಳ ದೋಷಕ್ಕೂ ಕಾರಣವಾಗಲಿದ್ದು, ಈ ಸಮಯದಲ್ಲಿ ಅವರು ನಾನಾ ರೀತಿಯ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿಯ ಜಾತಕದಲ್ಲಿ ರಾಹು-ಕೇತು ದೋಷವಿದ್ದರೆ ಅವರ ಜೀವನವೂ ಸಹ ಸಂಕಷ್ಟಗಳ ಸುರುಳಿಯಲ್ಲಿ ಸಿಲುಕುತ್ತದೆ. ಈ ಸಮಯದಲ್ಲಿ ಹಣಕಾಸಿನ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಅದರಲ್ಲೂ ಚೈತ್ರ ನವರಾತ್ರಿಯಲ್ಲಿ ಈ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ರಾಹು-ಕೇತುಗಳ ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. ಈ ವರ್ಷ ಚೈತ್ರ ನವರಾತ್ರಿ ಯಾವಾಗ ಆರಂಭವಾಗಲಿದೆ? ಈ ಸಮಯದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಯೋಣ...


2023ರಲ್ಲಿ ಚೈತ್ರ ನವರಾತ್ರಿ ಯಾವಾಗ?
ಈ ವರ್ಷ 2023ರಲ್ಲಿ ಮಾರ್ಚ್ 22ರಿಂದ  ಮಾರ್ಚ್ 30ರವರೆಗೆ ಚೈತ್ರ ನವರಾತ್ರಿ ಇರಲಿದೆ. 


ಇದನ್ನೂ ಓದಿ- Guru Gochar 2023: ತಿಂಗಳ ಬಳಿಕ ರೂಪುಗೊಳ್ಳಲಿದೆ ವಿನಾಶಕಾರಿ ಗುರು-ಚಾಂಡಾಲ ಯೋಗ


ಚೈತ್ರ ನವರಾತ್ರಿಯಲ್ಲಿ ರಾಹು-ಕೇತು ದೋಷದಿಂದ ಮುಕ್ತಿ ಪಡೆಯಲು ಈ ಕೆಲಸ ಮಾಡಿ:
* ಜಾತಕದಲ್ಲಿ ರಾಹು ದೋಷವಿರುವವರು ಚೈತ್ರ ನವರಾತ್ರಿಯಲ್ಲಿ ಬ್ರಹ್ಮಚಾರಿಣಿ ಮಾತೆ ಭಕ್ತಿಯಿಂದ ಪೂಜಿಸಿ. 
* ಜಾತಕದಲ್ಲಿ ಕೇತು ದೋಷ ಇರುವವರು ಚೈತ್ರ ನವರಾತ್ರಿಯಲ್ಲಿ ತಾಯಿ ದುರ್ಗಾ ಮಾತೆಯ  ಚಂದ್ರಘಂಟ ರೂಪವನ್ನು ಪೂಜಿಸಿ. 


ಶ್ರೀಗಂಧದ ಪುಡಿ ಪರಿಹಾರ: 
ಚೈತ್ರ ನವರಾತ್ರಿಯಲ್ಲಿ ಸ್ನಾನ ಮಾಡುವಾಗ ಸ್ನಾನದ ನೀರಿನಲ್ಲಿ ಶ್ರೀಗಂಧದ ಪುಡಿಯನ್ನು ಹಾಕಿ ಸ್ನಾನ ಮಾಡಿ. ಸತತ ಮೂರು ತಿಂಗಳುಗಳ ಕಾಲ ಈ ಪರಿಹಾರ ಕೈಗೊಳ್ಳುವುದರಿಂದ ಜಾತಕದಲ್ಲಿನ ರಾಹು ದೋಷವನ್ನು ನಿವಾರಿಸಬಹುದು. 


ಇದನ್ನೂ ಓದಿ- Ram Navami 2023: ರಾಮನವಮಿಯಲ್ಲಿ 5 ಅಪರೂಪದ ಕಾಕತಾಳೀಯ; ಭಕ್ತರಿಗೆ ಸಿಗಲಿದೆ ಸಂಪತ್ತಿನ ರಾಶಿ


ಶಿವ ಮತ್ತು ಹನುಮಂತನನ್ನು ಪೂಜಿಸಿ:
ರಾಹು-ಕೇತು ದೋಷದಿಂದ ಮುಕ್ತಿಯನ್ನು ಪಡೆಯಲು ನವರಾತ್ರಿಯಲ್ಲಿ ದುರ್ಗಾ ಮಾತೆಯ ಜೊತೆಗೆ ಭಗವಾನ್ ಶಿವ ಮತ್ತು ಹನುಮಂತನನ್ನು ಪೂಜಿಸಿ. ನವ ದಿನವೂ ಶಿವ ಸಹಸ್ರನಾಮ ಮತ್ತು ಹನುಮಾನ್ ಸಹಸ್ರನಾಮವನ್ನು ಪಠಿಸಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.