Ram Navami 2023: ರಾಮನವಮಿಯಲ್ಲಿ 5 ಅಪರೂಪದ ಕಾಕತಾಳೀಯ; ಭಕ್ತರಿಗೆ ಸಿಗಲಿದೆ ಸಂಪತ್ತಿನ ರಾಶಿ

ರಾಮ ನವಮಿ 2023 ದಿನಾಂಕ: ಈ ಬಾರಿ ಭಗವಾನ್ ಶ್ರೀರಾಮನ ಜನ್ಮದಿನವನ್ನು ಅಂದರೆ ರಾಮನವಮಿಯನ್ನು ಮಾರ್ಚ್ 30ರಂದು ಆಚರಿಸಲಾಗುತ್ತಿದೆ. ಈ ದಿನ 5 ವಿಶೇಷ ಅಪರೂಪದ ಕಾಕತಾಳೀಯ ನಡೆಯುತ್ತಿದ್ದು, ಇದರಿಂದ ಭಕ್ತರಿಗೆ ಭಾಗ್ಯ ದೊರೆಯಲಿದೆ.

Written by - Puttaraj K Alur | Last Updated : Mar 11, 2023, 08:04 AM IST
  • ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಭಗವಾನ್ ರಾಮನ ಜನ್ಮದಿನ ಆಚರಿಸಲಾಗುತ್ತದೆ
  • ಈ ಬಾರಿ ರಾಮ ನವಮಿಯನ್ನು ಮಾರ್ಚ್ 30ರಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ
  • ರಾಮ ನವಮಿಯಂದು 5 ಮಂಗಳಕರ ಯೋಗ ಸೃಷ್ಟಿಯಾಗುವುದರಿಂದ ಭಕ್ತರಿಗೆ ಭರ್ಜರಿ ಲಾಭ
Ram Navami 2023: ರಾಮನವಮಿಯಲ್ಲಿ 5 ಅಪರೂಪದ ಕಾಕತಾಳೀಯ; ಭಕ್ತರಿಗೆ ಸಿಗಲಿದೆ ಸಂಪತ್ತಿನ ರಾಶಿ  title=
ರಾಮನವಮಿ 2023

ನವದೆಹಲಿ: ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಭಗವಾನ್ ರಾಮನ ಜನ್ಮದಿನವನ್ನು ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯ 9ನೇ ಮತ್ತು ಕೊನೆಯ ದಿನ. ಈ ದಿನ ರಾಮನನ್ನು ಧಾರ್ಮಿಕ ವಿಧಿಗಳೊಂದಿಗೆ ಪೂಜಿಸಲಾಗುತ್ತದೆ. ಈ ದಿನ ಭಗವಾನ್ ಶ್ರೀರಾಮನ ಮಗುವಿನ ರೂಪದ ಭವ್ಯವಾದ ಅಲಂಕಾರ ಮಾಡಲಾಗುತ್ತದೆ. ಈ ಬಾರಿ ರಾಮ ನವಮಿಯನ್ನು ಮಾರ್ಚ್ 30ರಂದು ಆಚರಿಸಲಾಗುತ್ತದೆ. ಈ ವರ್ಷದ ರಾಮ ನವಮಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನದಂದು 5 ಅಪರೂಪದ ಕಾಕತಾಳೀಯಗಳು ನಡೆಯುತ್ತಿದ್ದು, ಇದರಿಂದ ಭಕ್ತರ ಜೀವನದಲ್ಲಿ ಸಮೃದ್ಧಿ ಇರುತ್ತದೆ.

ರಾಮ ನವಮಿ 2023 ಶುಭ ಸಮಯ

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಬಾರಿಯ ರಾಮ ನವಮಿಯು ಮಾರ್ಚ್ 29ರಂದು ರಾತ್ರಿ 9.07ರಿಂದ ಪ್ರಾರಂಭವಾಗಿ ಮಾರ್ಚ್ 30ರಂದು ರಾತ್ರಿ 11.30ಕ್ಕೆ ಕೊನೆಗೊಳ್ಳುತ್ತದೆ. ಮಾರ್ಚ್ 30ರಂದು ಬೆಳಗ್ಗೆ 11:17ರಿಂದ ಮಧ್ಯಾಹ್ನ 1:46ರವರೆಗೆ ರಾಮನ ಆರಾಧನೆಗೆ ಶುಭ ಸಮಯವಿದೆ.

ಇದನ್ನೂ ಓದಿ: Shani Nakshatra Gochar 2023: ಶತಭಿಷಾ ನಕ್ಷತ್ರದಲ್ಲಿ ಶನಿಯ ಭ್ರಮಣೆ, ಈ ರಾಶಿಗಳ ಜನರು ಎಚ್ಚರಿಕೆಯಿಂದಿರಬೇಕು.. ಇಲ್ದಿದ್ರೆ!

ರಾಮ ನವಮಿ 2023 ಶುಭ ಯೋಗ

ಧಾರ್ಮಿಕ ವಿದ್ವಾಂಸರ ಪ್ರಕಾರ, ಈ ಬಾರಿ ರಾಮ ನವಮಿಯಂದು 5 ಅತ್ಯಂತ ಅಪರೂಪದ ಸಂಯೋಜನೆಗಳಾದ ಅಮೃತ ಸಿದ್ಧಿ ಯೋಗ, ಗುರು ಪುಷ್ಯ ಯೋಗ, ಶುಭ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗಗಳು ರೂಪುಗೊಳ್ಳುತ್ತಿವೆ. ರಾಮ ನವಮಿಯಂದು ಈ 5 ಮಂಗಳಕರ ಯೋಗಗಳು ಸೃಷ್ಟಿಯಾಗುವುದರಿಂದ ಭಕ್ತರ ಜೀವನದಲ್ಲಿ ಸಾಕಷ್ಟು ಶುಭ ಮಾಹಿತಿಗಳು ಬರಲಿವೆ. ಅವರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಯಶಸ್ಸಿನ ಪತಾಕೆಯನ್ನು ಹಾರಿಸುತ್ತಾರೆ. ವಿಶೇಷವೆಂದರೆ ಈ ಬಾರಿಯ ರಾಮನವಮಿ ಗುರುವಾರ ನಡೆಯಲಿದೆ. ಭಗವಾನ್ ಶ್ರೀರಾಮನು ಭಗವಾನ್ ವಿಷ್ಣುವಿನ 7ನೇ ಅವತಾರವಾಗಿದ್ದು, ಗುರುವಾರ ವಿಷ್ಣುವಿಗೆ ಬಹಳ ಪ್ರಿಯವಾಗಿದೆ. ಹೀಗಾಗಿಯೇ ಈ ಬಾರಿಯ ರಾಮನವಮಿ ಇನ್ನಷ್ಟು ವಿಶೇಷವಾಗಿದೆ.

ರಾಮ ನವಮಿಯಂದು ಈ ಕೆಲಸ ಮಾಡಬೇಕು

ರಾಮನವಮಿಯ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ನಿತ್ಯಕರ್ಮಗಳ ನಂತರ ಸ್ನಾನ ಮಾಡಬೇಕು. ಇದಾದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ, ಶುಭ ಮುಹೂರ್ತದಲ್ಲಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಶ್ರೀರಾಮನಿಗೆ ಕೇಸರಿ ಹಾಲಿನಿಂದ ಅಭಿಷೇಕ ಮಾಡಬೇಕು. ನಂತರ ಅಲ್ಲಿ ಧ್ಯಾನ ಮಾಡುವ ಮೂಲಕ 108 ಬಾರಿ 'ಓಂ ಶ್ರೀ ಹ್ರೀ ಕ್ಲೀಂ ರಾಮಚಂದ್ರಾಯ ಶ್ರೀ ನಮಃ' ಎಂದು ಮಂತ್ರ ಜಪಿಸಬೇಕು. ರಾಮಾಯಣದ ಪಠಣವನ್ನೂ ಕೇಳಬೇಕು. ಮನೆಗೆ ಬಂದ ನಂತರ ಗಂಗಾಜಲವನ್ನು 1 ಬಟ್ಟಲಿನಲ್ಲಿ ತೆಗೆದುಕೊಂಡು ಮನೆಯ ಮೂಲೆ ಮೂಲೆಯಲ್ಲಿ ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

ಇದನ್ನೂ ಓದಿ: Surya Gochar 2023 : ಸೂರ್ಯ ಗೋಚರದಿಂದ ಈ 5 ರಾಶಿಯವರಿಗೆ ಭಾರಿ ಆರ್ಥಿಕ ಲಾಭದ ಜೊತೆಗೆ, ಶ್ರೀಮಂತಿಕೆ ಭಾಗ್ಯ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News