Grocery Items Should Never Run Out: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಅಡುಗೆಮನೆಯಲ್ಲಿ ಕೆಲವು ವಸ್ತುಗಳು ಯಾವತ್ತೂ ಖಾಲಿಯಾಗಬಾರದು.ಅಂದರೆ ಈ ವಸ್ತುಗಳು ಮುಗಿಯುವ ಮುನ್ನವೇ ಅದನ್ನು ಖರೀದಿಸಿ ತರಬೇಕು.ಅಡುಗೆ ಮನೆಯಲ್ಲಿ ಕೆಲವೊಂದು ವಸ್ತುಗಳು ಖಾಲಿಯಾಗುವುದೇ ಅಪಶಕುನ ಎಂದು ಹೇಳಲಾಗುತ್ತದೆ.ಈ ಪದಾರ್ಥಗಳು ಖಾಲಿಯಾದರೆ ದಾರಿದ್ರ್ಯ ಎದುರಾಗುತ್ತದೆ ಎದ್ನು ಹೇಳಲಾಗುತ್ತದೆ.ಮಾತ್ರವಲ್ಲ   ವಾಸ್ತು ದೋಷ ಕೂಡಾ ಕಾಡುತ್ತದೆಯಂತೆ.  


COMMERCIAL BREAK
SCROLL TO CONTINUE READING

ಈ ಪದಾರ್ಥಗಳು ಅಡುಗೆ ಮನೆಯಲ್ಲಿ ಖಾಲಿಯಾಗಲೇ ಬಾರದು : 
ಉಪ್ಪು :

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಅಡುಗೆ ಮನೆಯಲ್ಲಿ ಉಪ್ಪಿನ ಕೊರತೆ ಇರಬಾರದು.ಉಪ್ಪು ಖಾಲಿಯಾದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆಯಂತೆ. ಉಪ್ಪಿಲ್ಲದ ಆಹಾರದಲ್ಲಿ ಹೇಗೆ ರುಚಿ ಇರುವುದಿಲ್ಲವೋ ಅದೇ ರೀತಿ ಉಪ್ಪಿಲ್ಲದೆ ಜೀವನದಲ್ಲೂ ರುಚಿ ಇರುವುದಿಲ್ಲ ಎನ್ನಲಾಗುತ್ತದೆ.


ಇದನ್ನೂ ಓದಿ : Weekly Horoscope: ನಾಲ್ಕು ರಾಶಿಯವರಿಗೆ ಈ ವಾರ ಮಿಶ್ರ ಫಲ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ!


ಅರಶಿನ :
ಅರಶಿನವು ಆಹಾರಕ್ಕೆ ಸುಂದರ ಬಣ್ಣವನ್ನು ನೀಡುತ್ತದೆ.ಅಲ್ಲದೆ ನಮ್ಮ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ.ಅರಶಿನವು ಗುರು ಗ್ರಹದೊಂದಿಗೆ ಸಂಬಂಧ ಹೊಂದಿದೆ.ಆದ್ದರಿಂದ,ಅಡುಗೆಮನೆಯಲ್ಲಿ ಎಂದಿಗೂ ಅರಶಿನ ಖಾಲಿಯಾಗಲೇಬಾರದು. ಖಾಲಿಯಾಗುವುದಕ್ಕೆ ಮುನ್ನವೇ ಅರಶಿನವನ್ನು ಖರೀದಿಸಿ ಬಿಡಬೇಕು.ಇಲ್ಲದಿದ್ದರೆ ಗುರುದೋಷ ಎದುರಿಸಬೇಕಾಗಬಹುದು. ಅಲ್ಲದೆ,ಶುಭ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗಬಹುದು.


ಗೋಧಿ ಹಿಟ್ಟು : 
ಅಡುಗೆಮನೆಯಲ್ಲಿ ಹಿಟ್ಟು ಖಾಲಿಯಾಗಲೇಬಾರದು.ಒಂದು ವೇಳೆ ಮನೆಯಲ್ಲಿ ಗೋಧಿ ಹಿಟ್ಟು ಖಾಲಿಯಾದರೆ ಕುಟುಂಬದ ಸದಸ್ಯರ ಘನತೆ ಗೌರವಕ್ಕೆ ಧಕ್ಕೆಯಾಗಬಹುದು.


ಇದನ್ನೂ ಓದಿ: Shani Sadesati: ಮುಂದಿನ ವರ್ಷ ಈ ರಾಶಿಯವರಿಗೆ ಶನಿ ಸಾಡೇಸಾತಿ ಆರಂಭ, ಜೀವನದಲ್ಲಿ ಸಾಕಷ್ಟು ಏರಿಳಿತ


ಅಕ್ಕಿ : 
ಅಕ್ಕಿ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ.ಅಡುಗೆಮನೆಯಲ್ಲಿ ಯಾವಾಗಲೂ ಅಕ್ಕಿ ಖಾಲಿಯಾಗಲು ಬಿಡಲೇಬಾರದು.ಅಕ್ಕಿ ಖಾಲಿಯಾದರೆ ಶುಕ್ರ ದೋಷ ಎದುರಾಗುತ್ತದೆ.ಇದರಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.


ಸಾಸಿವೆ ಎಣ್ಣೆ :
ಸಾಸಿವೆ ಎಣ್ಣೆಯು ಶನಿ ದೇವನೊಂದಿಗೆ ಸಂಬಂಧ ಹೊಂದಿದೆ.ಆದ್ದರಿಂದ, ಅಡುಗೆಮನೆಯಿಂದ ಸಾಸಿವೆ ಎಣ್ಣೆ ಖಾಲಿಯಗಾಬಾರದು.ಸಾಸಿವೆ ಎಣ್ಣೆ ಮುಗಿದರೆ ಶನಿ ದೋಷ ಕಾಡುತ್ತದೆಯಂತೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.