Weekly Horoscope: ನಾಲ್ಕು ರಾಶಿಯವರಿಗೆ ಈ ವಾರ ಮಿಶ್ರ ಫಲ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ!

Weekly Horoscope May 20th to May 26th: ಮೇ 20ರಿಂದ ಮೇ 26ರವರೆಗೆ  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : May 20, 2024, 08:39 AM IST
  • ವೃಷಭ ರಾಶಿಯವರು ಈ ವಾರದ ಆರಂಭದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ದೊಡ್ಡ ಬದಲಾವಣೆಗಳನ್ನು ಕಾಣಬಹುದು.
  • ತುಲಾ ರಾಶಿಯ ಜನರಿಗೆ ಇದು ಮಿಶ್ರ ಫಲಗಳಿಂದ ಕೂಡಿದ ವಾರ.
  • ಧನು ರಾಶಿಯವರಿಗೆ ಈ ವಾರ ಹಿತ ಶತ್ರುಗಳ ಬಾಧೆ ಹೆಚ್ಚಾಗಬಹುದು.
Weekly Horoscope: ನಾಲ್ಕು ರಾಶಿಯವರಿಗೆ ಈ ವಾರ ಮಿಶ್ರ ಫಲ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ!  title=

Varabhavishya in Kannada From May 20th to May 26th: ಗ್ರಹ, ನಕ್ಷತ್ರಗಳ ಚಲನೆಯನ್ನು ಆಧರಿಸಿ ಈ ವಾರ ಮೇ 20ರಿಂದ ಮೇ 26ರವರೆಗೆ ಕೆಲವು ರಾಶಿಯವರಿಗೆ ಮಹತ್ವದ್ದಾಗಿದೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಮೇಷ ರಾಶಿಯವರಿಗೆ ವಾರದ ಮೊದಲಾರ್ಧದಲ್ಲಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ಕೆಲಸ-ಕಾರ್ಯಗಳಲ್ಲಿ ಹಿತೈಷಿಗಳ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಮನೆಯಲ್ಲಿ ಐಷಾರಾಮಿ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವಿರಿ. ನೀವು ಹೊಸ ಕೆಲಸಕ್ಕಾಗಿ ಯೋಚಿಸುತ್ತಿದ್ದರೆ ವಾರದ ಮಧ್ಯ ಭಾಗದಲ್ಲಿ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ವ್ಯಾಪಾರಸ್ಥರು ಬಯಸಿದ ಲಾಭವನ್ನು ಪಡೆಯುತ್ತಾರೆ.  ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಪ್ರೇಮ ಸಂಬಂಧದ ವಿಷಯದಲ್ಲಿ ಶುಭ ಸಮಯ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ವೃಷಭ ರಾಶಿಯವರು ಈ ವಾರದ ಆರಂಭದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಆದಾಗ್ಯೂ, ಈ ಬದಲಾವಣೆಗಳು ಭವಿಷ್ಯದಲ್ಲಿ  ನಿಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದರ ಜೊತೆಗೆ ಪ್ರಗತಿಗೂ ಕಾರಣವಾಗಲಿದೆ. ವ್ಯಾಪಾರಿಗಳು ಏರಿಳಿತವನ್ನು ಎದುರಿಸಬೇಕಾಗಬಹುದು. ವಾರದ ಮಧ್ಯ ಭಾಗದಲ್ಲಿ ಯಾವುದೇ ರೀತಿಯ ಅಪಾಯಕಾರಿ ಹೂಡಿಕೆಗಳನ್ನು ತಪ್ಪಿಸಿ. ಉದ್ಯೋಗಸ್ಥರು  ಅಪೇಕ್ಷಿತ ಯಶಸ್ಸನ್ನು ಪಡೆಯಲು ನೀವು ಸ್ವಲ್ಪ ಸಮಯ ಕಾಯಬೇಕಾಗಬಹುದು. ವೃತಿ-ವ್ಯವಹಾರದಲ್ಲಿ ಭಾವನಾತ್ಮಕವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. 

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಮಿಥುನ ರಾಶಿಯ ಜನರಿಗೆ ವಾರದ ಆರಂಭದಲ್ಲಿ ನಿಮ್ಮ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಶತ್ರುಗಳ ಕಾಟ ಕಡಿಮೆಯಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯಲಿದೆ. ಕಚೇರಿಯಲ್ಲಿ ಮೇಲಾಧಿಕಾರಿಗಳೊಂದಿಗೆ ಮೂಡಿರುವ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಉದ್ಯಮಿಗಳಿಗೆ ಮಾರುಕಟ್ಟೆಯಲ್ಲಿ ಸಿಲುಕಿರುವ ಹಣ ಕೈ ಸೇರಲಿದೆ. ಆದಾಗ್ಯೂ, ವಾರದ ಮಧ್ಯದಲ್ಲಿ ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ. ಆತುರದಿಂದ ಕೈಗೊಳ್ಳುವ ನಿರ್ಧಾರಗಳು ನಷ್ಟಕ್ಕೆ ಕಾರಣವಾಗಬಹುದು. ವಾಹನ ಚಲಾವಣೆ ವೇಳೆ ಎಚ್ಚರಿಕೆಯಿಂದಿರಿ. ಪ್ರೀತಿ-ಪ್ರೇಮದಲ್ಲಿರುವವರು ನಿಮ್ಮ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಕರ್ಕಾಟಕ ರಾಶಿಯವರು ವಾರದ ಆರಂಭದಲ್ಲಿ ವೃತ್ತಿ, ವ್ಯವಹಾರ ಅಥವಾ ಜೀವನಕ್ಕೆ ಸಂಬಂಧಿಸಿದಂತೆ ನೀವು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸು ನಿಮ್ಮದಾಗಲಿದೆ. ಉದ್ಯೋಗಸ್ಥ ಮಹಿಳೆಯ್ಯಾರಿಗೆ ಮನೆ-ಕಚೇರಿ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಕಷ್ಟವಾಗಬಹುದು. ಆದಾಗ್ಯೂ, ನಿಮ್ಮ ಪ್ರತಿ ಕೆಲಸದಲ್ಲೂ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ವಾರದ ಮಧ್ಯಭಾಗದಲ್ಲಿ ಬ್ಯುಸಿನೆಸ್ ಸಂಬಂಧಿತ ಪ್ರಯಾಣ ಸಾಧ್ಯತೆ ಇದೆ. ಪ್ರಯಾಣವು ಆಹ್ಲಾದಕರ ಮತ್ತು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಪ್ರೇಮಿಗಳಿಗೆ ಇದು ಮಿಶ್ರ ಫಲಗಳಿಂದ ಕೂಡಿದ ವಾರ. ವಿವಾಹಿತರಿಗೆ ಕೌಟುಂಬಿಕ ಜೀವನ ಸಂತೋಷಮಯವಾಗಿರುತ್ತದೆ. 

ಇದನ್ನೂ ಓದಿ- Shani Sadesati: ಮುಂದಿನ ವರ್ಷ ಈ ರಾಶಿಯವರಿಗೆ ಶನಿ ಸಾಡೇಸಾತಿ ಆರಂಭ, ಜೀವನದಲ್ಲಿ ಸಾಕಷ್ಟು ಏರಿಳಿತ

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಸಿಂಹ ರಾಶಿಯವರಿಗೆ ಈ ವಾರದ ಆರಂಭವು ಮಿಶ್ರ ಫಲಗಳಿಂದ ಕೂಡಿರಲಿದೆ. ಪ್ರೀತಿಪಾತ್ರರೊಂದಿಗೆ ವಾದ-ವಿವಾದಗಳಿಂದ ದುಃಖವನ್ನು ಅನುಭವಿಸುವಿರಿ. ಕಛೇರಿಯಲ್ಲಿ ನೀವು ಇದ್ದಕ್ಕಿದ್ದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆದರೆ, ಯೋಚಿಸಿ ಕೆಲಸ ಮಾಡುವುದರಿಂದ ಸಮಸ್ಯೆಗಳನ್ನು ತಪ್ಪಿಸಬಹುದು. ಉದ್ಯೋಗ ನಿಮಿತ್ತ ಪ್ರಯಾಣಿಸಬೇಕಾಗಬಹುದು. ಆದರೆ, ಈ ಪ್ರಯಾಣವು ದಣಿವು ಮತ್ತು ನಿರೀಕ್ಷೆಗಿಂತ ಕಡಿಮೆ ಫಲದಾಯಕವೆಂದು ಸಾಬೀತುಪಡಿಸುತ್ತದೆ. ವಾರದ ಮಧ್ಯದಲ್ಲಿ ನೀವು ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗಬಹುದು. ಇವರು ಭವಿಷ್ಯದಲ್ಲಿ ಲಾಭದಾಯಕ ಯೋಜನೆಗಳಿಗೆ ಸೇರಲು ಅನುವು ಮಾಡಿಕೊಡಲಿದ್ದಾರೆ. ಪ್ರೀತಿ ವಿಷಯದಲ್ಲಿ ಮನಸ್ಸು ಚಂಚಲವಾಗಿರಲಿದೆ. ವೈವಾಹಿಕ ಜೀವನ ಆನಂದದಾಯಕವಾಗಿರಲಿದೆ. 

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಕನ್ಯಾ ರಾಶಿಯ ಉದ್ಯೋಗಸ್ಥರಿಗೆ ವಾರದ ಪೂರ್ವಾರ್ಧವು ಸಮಸ್ಯೆಗಳಿಂದ ಕೂಡಿರಲಿದೆ. ವ್ಯಾಪಾರಸ್ಥರು ಮಾರುಕಟ್ಟೆಯಲ್ಲಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ನೀವು ಯಾವುದೇ ಮನೆ, ಆಸ್ತಿ ಖರೀದಿಸಲು ಯೋಚಿಸುತ್ತಿದ್ದರೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೆ ಇರುವುದು ಉತ್ತಮ. ವಾರದ ಮಧ್ಯದಲ್ಲಿ ನೀವು ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣ ಕೈಗೊಳ್ಳಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಅಧ್ಯಯನದ ಬಗ್ಗೆ ನಿಗಾವಹಿಸಿ. ಪ್ರೇಮ ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಉಂಟಾಗಬಹುದು. ವಿವಾಹವಾಗಿರುವವರು ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನಿಗಾವಹಿಸಿ. 

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ತುಲಾ ರಾಶಿಯ ಜನರಿಗೆ ಇದು ಮಿಶ್ರ ಫಲಗಳಿಂದ ಕೂಡಿದ ವಾರ. ಉದ್ಯೋಗಸ್ಥರು ನಿಮ್ಮ ಕೆಲಸದ ಮೇಲೆ ಸಂಪೂರ್ಣ ಗಮನಹಾರಿಸಬೇಕು. ವಾರದ ಆರಂಭದಲ್ಲಿ, ನಿಮ್ಮ ಕೆಲಸಗಳನ್ನು ನೀವೇ ಪೂರ್ಣಗೊಳಿಸುವತ್ತ ಶ್ರಮವಹಿಸಿ. ಹಣದ ಸಂಬಂಧಿತ ವಿಷಯಗಳು, ವ್ಯವಹಾರದಲ್ಲಿ ಜಾಗರೂಕರಾಗಿರಿ. ಇಲ್ಲವೇ, ಭಾರೀ ನಷ್ಟ ಸಾಧ್ಯತೆ ಇದೆ. ವಾರದ ಮಧ್ಯದಲ್ಲಿ ಸಮಯವು ನಿಮಗೆ ಅನುಕೂಲಕರವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಅಧ್ಯಯನದ ಮೇಲೆ ನಿಗಾವಹಿಸಿ. ಪ್ರೇಮ ಸಂಬಂಧಗಳು ಸಾಮಾನ್ಯವಾಗಿರುತ್ತವೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ವೃಶ್ಚಿಕ ರಾಶಿಯವರಿಗೆ ಈ ವಾರ ಸ್ವಲ್ಪ ಕಷ್ಟದ ಸಮಯ ಎಂತಲೇ ಹೇಳಬಹುದು. ವಾರದ ಆರಂಭದಲ್ಲಿ ನೀವು ಮಾಡಬೇಕಾದ್ದ ಕೆಲಸಗಳಿಗೆ ಅಡೆತಡೆಗಳು ಎದುರಾಗಬಹುದು. ವ್ಯವಹಾರದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆ ಎದುರಿಯಬೇಕಾಗಬಹುದು. ಆದಾಗ್ಯೂ, ಕೆಲಸ-ಕಾರ್ಯಗಳಲ್ಲಿ ಬಯಸಿದ ಯಶಸ್ಸು, ಸಿಗದಿದ್ದರೆ ತಾಳ್ಮೆಯಿಂದ ಕಾಯುವುದು ಒಳ್ಳೆಯದು. ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಪ್ರೇಮಿಗಳಿಗೆ ಈ ವಾರ ಉತ್ತಮವಾಗಿಲ್ಲ. ಆದರೆ, ದಂಪತಿಗಳ ನಡುವೆ ಈ ವಾರ ಉತ್ತಮ ಹೊಂದಾಣಿಕೆ ಇರಲಿದ್ದು, ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. 

ಇದನ್ನೂ ಓದಿ- ವೃಷಭದಲ್ಲಿ ಗುರು ಉದಯ.. ಈ ರಾಶಿಗಳಿಗೆ ಅದೃಷ್ಟದ ಪರ್ವಕಾಲ, ಸಂಪತ್ತಿನ ಸುರಿಮಳೆ.. ಮುಟ್ಟಿದ್ದೆಲ್ಲ ಚಿನ್ನವಾಗುವ ಗೋಲ್ಡನ್‌ ಟೈಮ್‌ !

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಧನು ರಾಶಿಯವರಿಗೆ ಈ ವಾರ ಹಿತ ಶತ್ರುಗಳ ಬಾಧೆ ಹೆಚ್ಚಾಗಬಹುದು. ಇದು ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಂದರೆಯನ್ನು ಉಂಟು ಮಾಡಬಹುದು. ಆದಾಗ್ಯೂ, ವಾರದ ಮಧ್ಯ ಭಾಗದಲ್ಲಿ ಪರಿಸ್ಥಿತಿಗಳು ಸಾಮಾನ್ಯ ಸ್ಥಿತಿಗೆ ಮರಳಲಿವೆ. ಯಾರೊಂದಿಗಾದರೂ ಮಾತನಾಡುವಾಗ ಕೋಪವನ್ನು ನಿಯಂತ್ರಿಸಿ. ಮಾತಿನ ಮೇಲೆ ನೀವು ಹೆಚ್ಚಿನ ನಿಯಂತ್ರಣವನ್ನು ಹೊಂದಿರಬೇಕು. ವಾರದ ಮಧ್ಯದಲ್ಲಿ, ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಂದಾಗಿ ನಿಮ್ಮ ಮನಸ್ಥಿತಿ ಹದಗೆದಬಹುದು. ಬಂಧು ಮಿತ್ರರಿಂದ ಸಕಾಲದಲ್ಲಿ ಸಹಾಯ ದೊರೆಯದೇ ಮನದಲ್ಲಿ ಹತಾಶೆಯ ಭಾವ ಮೂಡಬಹುದು. 

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯ ಜನರಿಗೆ ಇದು ಮಿಶ್ರ ಫಲಗಳಿಂದ ಕೂಡಿದ ವಾರ. ವಾರದ ಆರಂಭದಲ್ಲಿ ವೃತ್ತಿ ಸಂಬಂಧಿತ ಕೆಲವು ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಆದಾಗ್ಯೂ, ನೀವು ತಾಳ್ಮೆಯಿಂದ, ವಿವೇಚನೆಯಿಂದ ಮುಂದುವರೆಯಬೇಕು. ಹತ್ತಿರದ ಲಾಭವನ್ನು ಗಮನಿಸಿ ಭವಿಷ್ಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ. ವಾರದ ಮಧ್ಯದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ದೂರದ ಪ್ರಯಾಣ ಸಾಧ್ಯತೆ ಇದೆ. ಈ ವೇಳೆ ನಿಮ್ಮ ಆರೋಗ್ಯದ ಬಗ್ಗೆ ನಿಗಾವಹಿಸಿ. ಪ್ರೀತಿಯ ಸಂಬಂಧದ ವಿಷಯಗಳಿವೆ ವಾರವು ಅಷ್ಟು ಉತ್ತಮವಾಗಿಲ್ಲ, ವೈವಾಹಿಕ ಜೀವನದಲ್ಲಿ ಕೆಲವು ಕಹಿ ಅನುಭವವಾಗಬಹುದು. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಕುಂಭ ರಾಶಿಯವರಿಗೆ ಈ ವಾರದ ಆರಂಭದಲ್ಲಿ ಕಚೇರಿ ಕೆಲಸಗಳನ್ನು ಪೂರ್ಣಗ್ಳಿಸಲು ಹೆಚ್ಚುವರಿ ಶ್ರಮದ ಅಗತ್ಯವಿದೆ. ಆದಾಗ್ಯೂ, ಯೋಜಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಕೆಲಸಗಳನ್ನು ಬೇರೆಯವರ ಜವಾಬ್ದಾರಿಗೆ ಬಿಡುವುದರಿಂದ ಭಾರೀ ನಷ್ಟ ಅನುಭವಿಸಬೇಕಾಗಬಹುದು. ಈ ವಾರ ರಹಸ್ಯ ಶತ್ರುಗಳ ಬಗ್ಗೆ ಜಾಗರೂಕರಾಗಿರಿ. ಉದ್ಯಮಿಗಳು ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ಹಣವನ್ನು ಹೂಡಿಕೆ ಮಾಡಿ, ಇಲ್ಲವೇ ಭಾರೀ ನಷ್ಟ ಸಾಧ್ಯತೆ ಇದೆ. ಪ್ರೀತಿಗೆ ಸಂಬಂಧಿಸಿದಂತೆ ಇದು ಅನುಕೂಲಕರ ವಾರ ಎಂದು ಹೇಳಬಹುದು. 

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯವರಿಗೆ ಈ ವಾರ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ವಾರದ ಆರಂಭವು ವೃತ್ತಿ, ವ್ಯವಹಾರಕ್ಕೆ ಸಂಬಂಧಿಸಿದ ಪ್ರವಾಸಗಳಲ್ಲಿ ಯಶಸ್ಸನ್ನು ನೀಡಲಿದೆ. ಪ್ರಭಾವಿ ವ್ಯಕ್ತಿಯೊಂದಿಗಿನ ಸಭೆಯು ಭವಿಷ್ಯದ ಲಾಭಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಉದ್ಯೋಗಿಗಳಿಗೆ ಜವಾಬ್ದಾರಿ ಮುಡಿಗೆರಲಿದೆ. ವಾರಾಂತ್ಯದಲ್ಲಿ ಮಕ್ಕಳಿಂದ ಶುಭ ಸುದ್ದಿಗಳನ್ನು ನಿರೀಕ್ಷಿಸಬಹುದು. ಈ ವಾರ ಪ್ರೇಮ ವ್ಯವಹಾರಗಳ ವಿಷಯದಲ್ಲಿ ಒಳ್ಳೆಯ ಸುದ್ಧಿ ಕೇಳಿಬರಲಿದೆ. ದಾಂಪತ್ಯ ಜೀವನವೂ ಸುಖಮಯವಾಗಿರಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News