ಹಸ್ತದಲ್ಲಿ ಈ ಗುರುತುಗಳಿದ್ದರೆ ಜೀವನದುದ್ದಕ್ಕೂ ತೊಂದರೆ ಎದುರಿಸಬೇಕಾಗುತ್ತದೆ .!
ಕೈಯ ರೇಖೆಗಳು, ಗುರುತುಗಳು ಮತ್ತು ಚಿಹ್ನೆಗಳು ಭವಿಷ್ಯದ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತವೆ. ಈ ರೇಖೆಗಳು ಮತ್ತು ಗುರುತುಗಳು ಮಂಗಳಕರವಾಗಿದ್ದರೆ, ಜೀವನದಲ್ಲಿ ಬಹಳಷ್ಟು ಯಶಸ್ಸು ಇರುತ್ತದೆ.
ಬೆಂಗಳೂರು : ಯಾವ ರೀತಿ ಜನ್ಮ ಜಾತಕದ ಮೂಲಕ ಜನ್ಮ ನಕ್ಷತ್ರ, ಜನ್ಮ ರಾಶಿಯ ಮೂಲಕ ಭವಿಷ್ಯವನ್ನು ಹೇಳಲಾಗುತ್ತದೆಯೋ ಅದೇ ರೀತಿ ಹಸ್ತ ರೇಖೆಯ ಮೂಲಕವೂ ವ್ಯಕ್ತಿಯ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಕೈಯ ರೇಖೆಗಳು, ಗುರುತುಗಳು ಮತ್ತು ಚಿಹ್ನೆಗಳು ಭವಿಷ್ಯದ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತವೆ. ಈ ರೇಖೆಗಳು ಮತ್ತು ಗುರುತುಗಳು ಮಂಗಳಕರವಾಗಿದ್ದರೆ, ಜೀವನದಲ್ಲಿ ಬಹಳಷ್ಟು ಯಶಸ್ಸು ಇರುತ್ತದೆ. ವ್ಯಕ್ತಿಯು ಬಹಳ ವೇಗವಾಗಿ ಪ್ರಗತಿ ಹೊಂದುತ್ತಾನೆ ಎಂದು ಹೇಳಲಾಗುತ್ತದೆ. ಅಲ್ಲದೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷ ಸಮೃದ್ದಿ ಪ್ರಾಪ್ತಿಯಾಗುತ್ತದೆ. ಆದರೆ ಅಶುಭ ರೇಖೆಗಳು ಅಥವಾ ಗುರುತುಗಳು ಹಸ್ತದಲ್ಲಿ ಇದ್ದರೆ ಹೋರಾಟವನ್ನೇ ಬದುಕಾಗಿಸಬೇಕಾಗುತ್ತದೆ. ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಸಂತೋಷ ಎನ್ನುವುದು ಮರೀಚಿಕೆಯಾಗಿರುತ್ತದೆ. ಅವರು ಎಂದಿಗೂ ಸಂತೋಷದಿಂದ ಜೀವನವನ್ನು ನಡೆಸಲು ಸಾಧ್ಯವಾಗುವುದೇ ಇಲ್ಲ.
ಅಶುಭ ಕೈ ರೇಖೆಗಳು :
- ಅಂಗೈಯಲ್ಲಿ ಅನೇಕ ಸಣ್ಣ ಗೆರೆಗಳಿದ್ದರೆ ಮತ್ತು ಈ ರೇಖೆಗಳು ಜೀವನದ ರೇಖೆಯನ್ನು ದಾಟಿದರೆ, ಅದನ್ನು ಮಂಗಳಕರವೆಂದು ಕರೆಯಲಾಗುವುದಿಲ್ಲ. ಅಂತಹ ವ್ಯಕ್ತಿಯ ಜೀವನದಲ್ಲಿ ಯಾವಾಗಲೂ ಕಷ್ಟವನ್ನೇ ಎದುರಿಸಬೇಕಾಗುತ್ತದೆ. ಆ ವ್ಯಕ್ತಿ ಜೀವನದಲ್ಲಿ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ : Vastu Tips : ಮನೆಯ ಈ ಸ್ಥಳಗಳಲ್ಲಿ ಚಪ್ಪಲಿ - ಶೋ ಹಾಕೊಂಡು ಹೋಗಬೇಡಿ, ಹಣ ಮತ್ತು ಧಾನ್ಯ ಸಮಸ್ಯೆ ಎದುರಾಗುತ್ತೆ
- ಕಿರು ಬೆರಳಿನ ಮೇಲೆ ಅನೇಕ ಅಡ್ಡ ರೇಖೆಗಳಿದ್ದರೆ, ಅವುಗಳನ್ನು ಸಹ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಈ ರೇಖೆಗಳು ವ್ಯಕ್ತಿಯ ಜೀವನದಲ್ಲಿ ದುರಾದೃಷ್ಟವನ್ನು ತರುತ್ತದೆ.
- ಇನ್ನು ಯಾರ ಕೈಯ್ಯಲ್ಲಿ ಕಪ್ಪು ಚುಕ್ಕೆಗಳಿರುತ್ತವೆಯೋ ಅವರು ಜೀವನದಲ್ಲಿ ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈಯಲ್ಲಿ ಕಪ್ಪು ಚುಕ್ಕೆಗಳಿರುವುದನ್ನು ಅಶುಭ ಎಂದು ಹೇಳಲಾಗುತ್ತದೆ. ಅಂತಹ ವ್ಯಕ್ತಿಯು ಗಂಭೀರ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
- ಕೈಯಲ್ಲಿ ದ್ವೀಪದ ಗುರುತು ಇರುವುದು ಸಾಮಾನ್ಯವಾಗಿ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ದ್ವೀಪದ ಚಿಹ್ನೆಯು ಹಸ್ತದಲ್ಲಿರುವ ಶುಭ ರೇಖೆಯ ಶುಭ ಫಲವನ್ನು ಕೂಡಾ ಕಡಿಮೆ ಮಾಡುತ್ತದೆ. ಧನ ರೇಖೆ, ಭಾಗ್ಯ ರೇಖೆಯ ಮೇಲೆ ದ್ವೀಪದ ಚಿಹ್ನೆ ಇದ್ದರೆ ಪ್ರಗತಿಯಲ್ಲಿ ಅಡಚಣೆ ಉಂಟು ಮಾಡುತ್ತದೆ.
ಇದನ್ನೂ ಓದಿ : Job Tips : ನಿಮ್ಮ ನಿರುದ್ಯೋಗ ಸಮಸ್ಯೆಗೆ ಈ 4 ಉಪಾಯಗಳು : ಇದರಿಂದ ಬದಲಾಗಲಿದೆ ನಿಮ್ಮ ಅದೃಷ್ಟ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.