ಬೆಂಗಳೂರು : ಜಾತಕದಲ್ಲಿ ಗುರುವು ಬಲವಾಗಿದ್ದರೆ, ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ. ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಲಿದೆ.  ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ. ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.  ಗುರುವು ಪ್ರತಿ ವರ್ಷ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಗುರುವು 2024 ರಲ್ಲಿ ತನ್ನ  ರಾಶಿಯನ್ನು ಬದಲಾಯಿಸುತ್ತಾನೆ.


COMMERCIAL BREAK
SCROLL TO CONTINUE READING

ಗುರು  ಮೇ 1, 2024 ರಂದು ಮಧ್ಯಾಹ್ನ 12:59 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲದೆ ಈ ಬಾರಿ ಜೂನ್ 12 ರಂದು ರೋಹಿಣಿ ನಕ್ಷತ್ರದಲ್ಲಿ ಸಂಕ್ರಮಿಸುತ್ತಾನೆ. ಇದರ ನಂತರ, ಗುರು ಅಕ್ಟೋಬರ್ 9 ರಂದು ಮತ್ತೆ ತನ್ನ ನಡೆಯನ್ನು ಬದಲಿಸುತ್ತಾನೆ. ಇದರ ಶುಭ ಫಲ ಐದು ರಾಶಿಯವರ ಮೇಲೆ ಸರಿಯಾಗಿ ಗೋಚರಿಸಲಿದೆ.


ಇದನ್ನೂ ಓದಿ : ಶತಮಾನಗಳ ಬಳಿಕ ಡಿಸೆಂಬರ್ ತಿಂಗಳಿನಲ್ಲಿ 7 ಅಪರೂಪದ ರಾಜಯೋಗಗಳು, ವರ್ಷ 2024ರಲ್ಲಿ ಈ ಜನರ ಗೋಲ್ಡನ್ ಟೈಮ್ ಆರಂಭ!


ಗುರು ಸಂಕ್ರಮಣದಿಂದ ಈ ರಾಶಿಯವರಿಗೆ ಶುಭ : 
ಮೇಷ ರಾಶಿ : ಪ್ರಸ್ತುತ ಗುರುವು ಮೇಷ ರಾಶಿಯಲ್ಲಿದ್ದಾನೆ. ಅದೇ ಸಮಯದಲ್ಲಿ, ಮೇಷ ರಾಶಿಯವರ ಮೇಲೆ ಗುರುವಿನ ಸಂಚಾರದ ಲಾಭ ಹೆಚ್ಚಾಗಿ ಆಗುತ್ತದೆ. ಈ ಅವಧಿಯಲ್ಲಿ, ಮೇಷ ರಾಶಿಯವರು ನಿರೀಕ್ಷೆಗೂ ಮೀರಿದ ಯಶಸ್ಸನ್ನು ಸಾಧಿಸುತ್ತಾರೆ. ಕಚೇರಿಯಲ್ಲಿ ಬಡ್ತಿ ಪಡೆಯಬಹುದು.


ವೃಷಭ ರಾಶಿ : ಗುರುವಿನ ಸಂಚಾರದಿಂದ  ವೃಷಭ ರಾಶಿಯವರಿಗೆ ಇದರಿಂದ ಹೆಚ್ಚಿನ ಲಾಭ ಸಿಗಲಿದೆ. ವೃಷಭ ರಾಶಿಯವರು ಗುರುವಿನ ಆಶೀರ್ವಾದದಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ.  ಅಸಾಧ್ಯ  ಎನ್ನುವಂಥಹ ಕೆಲಸವೂ ಈ ಸಮಯದಲ್ಲಿ  ಸಾಧ್ಯವಾಗುವುದು. 


ಇದನ್ನೂ ಓದಿ : ದೇವಗುರು ಬೃಹಸ್ಪತಿ ಮತ್ತು ಶುಕ್ರರಿಂದ 'ಕಾಮ ರಾಜಯೋಗ' ರಚನೆ, ಧನ ಕುಬೇರ ಕೃಪೆಯಿಂದ ಈ ರಾಶಿಗಳ ಭಾಗ್ಯೋದಯ-ಉನ್ನತಿಯ ಯೋಗ!


ಮಿಥುನ ರಾಶಿ : ಗುರುವು ಸಂಚಾರದ ಸಮಯದಲ್ಲಿ ಮಿಥುನ ರಾಶಿಯವರ  ಆದಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹೊಸ ಆದಾಯದ ಮೂಲಗಳು  ಹುಟ್ಟಿಕೊಳ್ಳುತ್ತವೆ. ಗುರುವಿನ ಕೃಪೆಯಿಂದ ಮಿಥುನ ರಾಶಿಯವರಿಗೆ ಅಧಿಕ ಆದಾಯ ಸಿಗಲಿದೆ.


ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಗುರು ಯಾವಾಗಲೂ ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಕರ್ಕ ರಾಶಿಯವರಿಗೆ ಕೆಲಸದಲ್ಲಿ ಬಡ್ತಿ ದೊರೆಯುತ್ತದೆ. ವ್ಯಾಪಾರದಲ್ಲಿಯೂ ಹೆಚ್ಚಿನ ಲಾಭವಾಗುವುದು. ಲಾಟರಿ ಗೆಲ್ಲುವ ಅವಕಾಶವೂ ಇದೆ. 


ಸಿಂಹ ರಾಶಿ :  ಸಿಂಹ ರಾಶಿಯವರ ಅದೃಷ್ಟ ಬದಲಾಗುತ್ತದೆ. ಈ ಕಾರಣದಿಂದಾಗಿ, ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತದೆ. ಅಲ್ಲದೆ, ಅದೃಷ್ಟ  ಸದಾ ನಿಮ್ಮ ಜೊತೆಗಿದ್ದು ಕಾಯುತ್ತದೆ. ನೀವು ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಾಧಿಸುತ್ತೀರಿ. 


ಇದನ್ನೂ ಓದಿ : ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ ! 2024ರ ರಾಶಿ ಭವಿಷ್ಯ ಇಲ್ಲಿದೆ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.