ಶತಮಾನಗಳ ಬಳಿಕ ಡಿಸೆಂಬರ್ ತಿಂಗಳಿನಲ್ಲಿ 7 ಅಪರೂಪದ ರಾಜಯೋಗಗಳು, ವರ್ಷ 2024ರಲ್ಲಿ ಈ ಜನರ ಗೋಲ್ಡನ್ ಟೈಮ್ ಆರಂಭ!

Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ ತಿಂಗಳು ತುಂಬಾ ವಿಶೇಷವಾಗಿದೆ. ಏಕೆಂದರೆ ಡಿಸೆಂಬರ್ ತಿಂಗಳಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜಯೋಗಗಳು 2024 ರಲ್ಲಿ ಹಲವು ರಾಶಿಗಳ ಭಾಗ್ಯವನ್ನು ಪರಿವರ್ತಿಸಲಿದ್ದು. ಅವರ ಜೀವನದಲ್ಲಿ ಭಾಗ್ಯೋದಯ-ಉನ್ನತಿ-ಧನಲಾಭ ಎಲ್ಲವೂ ಆಗಮಿಸಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಹಲವು ಗ್ರಹಗಳ ನಡೆ ಪರಿವರ್ತನೆಯಾಗಲಿದೆ. ಗ್ರಹಗಳ ಈ ಸ್ಥಿತಿಗತಿಗಳ ಕಾರಣ ಹಲವು ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ. ಡಿಸೆಂಬರ್ 28, 2023 ರಂದು ಬುಧ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಅಲ್ಲಿ ಈಗಾಗಲೇ ಶುಕ್ರ ಕುಳಿತಿದ್ದಾನೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯ ಲಾಭದ ಭಾವದಲ್ಲಿ ಶುಕ್ರ ಹಾಗೂ ಬುಧರ ಮೈತ್ರಿ ನೆರವೇರಲಿದೆ. ಇದರಿಂದ ಲಕ್ಷ್ಮಿ ನಾರಾಯಣ ಯೋಗ ರಚನೆಯಾಗುತ್ತಿದೆ. ಇದರ ಜೊತೆಗೆ ಶುಕ್ರನ ಕೇಂದ್ರ ತ್ರಿಕೋನ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಇನ್ನೊಂದೆಡೆ ಶುಕ್ರ ಹಾಗೂ ಗುರುವಿನ ಸಮಸಪ್ತದ ದೃಷ್ಟಿ ಮೈತ್ರಿ ಕೂಡ ರೂಪುಗೊಳ್ಳುತ್ತಿದೆ. ಸಮಸಪ್ತಕ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಇದಲ್ಲದೆ ಗುರುವಿನ ಮೇಲೆ ಶುಕ್ರನ ಶುಭ ಯೋಗ ಹಾಗೂ ಶುಕ್ರನ ಮೇಲೆ ಗುರುವಿನ ಶುಭಯೋಗದ ಕಾರಣ ಗುರು ಶುಕ್ರರ ಮೈತ್ರಿಯಿಂದ ಕಾಮ ರಾಜಯೋಗ ಕೂಡ ರಚನೆಯಾಗುತ್ತಿದೆ. (Spiritual News In Kannada)

 

ಇದನ್ನೂ ಓದಿ-ದೇವಗುರು ಬೃಹಸ್ಪತಿ ಮತ್ತು ಶುಕ್ರರಿಂದ 'ಕಾಮ ರಾಜಯೋಗ' ರಚನೆ, ಧನ ಕುಬೇರ ಕೃಪೆಯಿಂದ ಈ ರಾಶಿಗಳ ಭಾಗ್ಯೋದಯ-ಉನ್ನತಿಯ ಯೋಗ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಕಾಮ ರಾಜಯೋಗವನ್ನು ಎಲ್ಲಾ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಯೋಗ ಎಂದು ಭಾವಿಸಲಾಗುತ್ತದೆ. ಇದಲ್ಲದೆ ಶುಕ್ರನಿಂದ ಮಾಲವ್ಯ ರಾಜಯೋಗ ಕೂಡ ರಚನೆಯಾಗುತ್ತಿದೆ. ಈ ದೊಡ್ಡ ಯೋಗಗಳ ಜೊತೆಗೆ ಧನಶಕ್ತಿ ಯೋಗ ಹಾಗೂ ಮಹಾಧನಿ ರಾಜಯೋಗಗಳು ಕೂಡ ರೂಪುಗೊಳ್ಳುತ್ತಿವೆ. ಇಂತಹ ಅಪರೂಪದ ಕಾಕತಾಳೀಯ ಶತಮಾನಗಳಲ್ಲಿ ಒಂದು ಬಾರಿ ರೂಪುಗೊಳ್ಳುತ್ತಿದೆ ಎನ್ನಲಾಗುತ್ತಿದೆ. ಡಿಸೆಂಬರ್ ಅಂತ್ಯದಲ್ಲಿ ಈ ಎಲ್ಲಾ ಶುಭಯೋಗಗಳ ರೂಪುಗೊಳ್ಳುವಿಕೆಯ ಕಾರಣ ಕೆಲ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ, ಹೊಸ ವರ್ಷ ಈ ಜನರಿಗೆ ಸಾಕಷ್ಟು ಖುಷಿಗಳನ್ನು ಹೊತ್ತು ತರಲಿದೆ. ಈ ಎಲ್ಲಾ ರಾಶಯೋಗಗಳ ನಿರ್ಮಾಣದಿಂದ ಯಾವ ರಾಶಿಗಳ ಜಾತಕದವರಿಗೆ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ, 

2 /5

ಮಕರ ರಾಶಿ: ಈ ಎಲ್ಲಾ ಶುಭಯೋಗಗಳ ಕಾರಣ ಮುಚ್ಚಿಹೋದ ನಿಮ್ಮ ಆದಾಯದ ಎಲ್ಲಾ ಮಾರ್ಗಗಳು ಮತ್ತೆ ತೆರೆದುಕೊಳ್ಳಲಿವೆ. ಹೊಸ ಮಾರ್ಗಗಳು ರೂಪುಗೊಳ್ಳಲಿವೆ. ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹಣ ಉಳಿತಾಯ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ. ಇದಲ್ಲದೆ ಶನಿ ಹಾಗೂ ರಾಹುಗಳು ಕೂಡ ಈ ಜಾತಕದ ಜನರ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದ್ದಾರೆ. ಹಲವು ಸಮಯದಿಂದ ನಿಂತುಹೋದ ಕೆಲಸ ಕಾರ್ಯಗಳು ಮತ್ತೆ ಆರಂಭಗೊಳ್ಳಲಿವೆ. ಕೆಲಸದ ನಿಮಿತ್ತ ವಿದೇಶ ಯಾತ್ರೆಯ ಅವಕಾಶ ಒದಗಿಬರಲಿದೆ. ಕುಟುಂಬದಲ್ಲಿ ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಭಿನ್ನಾಭಿಪ್ರಾಯಗಳು ಶಮನಗೊಳ್ಳಲಿವೆ. ಶನಿಯ ದೃಷ್ಟಿ ಲಾಭ ಸ್ಥಾನದ ಮೇಲೆ ಬೀಳುವ ಕಾರಣ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಅವುವಾಹಿತರಿಗೆ ವಿವಾಹ ಪ್ರಸ್ತಾವನೆ ಬರುವ ಸಾಧ್ಯತೆ ಇದೆ. ಪ್ರಸ್ತುತ ನಿಮ್ಮ ರಾಶಿಗೆ ಸಾಡೇಸಾತಿ ನಡೆಯುತ್ತಿದ್ದು, ಅದರ ಶುಭ ಫಲಗಳ ಲಾಭ ನಿಮಗೆ ವಿಶೇಷವಾಗಿ ಲಭಿಸಲಿದೆ. ಶುಕ್ರ ಮಕರ ರಾಶಿಯ ಜಾತಕದವರಿಗೆ ಸಾಕಷ್ಟು ಧನಸಂಪತ್ತು ಕರುಣಿಸಲಿದ್ದಾನೆ. 

3 /5

ಕನ್ಯಾ ರಾಶಿ: ಭಾಗ್ಯ, ಧನದ ದೃಷ್ಟಿಯಿಂದ ಹೊಸ ವರ್ಷ ಕನ್ಯಾ ರಾಶಿಯ ಜಾತಕದವರಿಗೆ ಸಾಕಷ್ಟು ಉತ್ತಮವಾಗಿರಲಿದೆ. ಪ್ರಬಲ ರಾಜಯೋಗಗಳು ನಿರ್ಮಾಣಗೊಳ್ಳುತ್ತಿರುವ ಕಾರಣ, ನೌಕರಿಯ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ವಿದೇಶದಲ್ಲಿ ನೌಕರಿ ಮಾಡಲು ಬಯಸುವ ನಿಮ್ಮ ಆಸೆ ಕೂಡ ಈಡೇರುವ ಸಾಧ್ಯತೆ ಇದೆ. ಇದಲ್ಲದೆ ಶನಿ ನಿಮ್ಮ ಜಾತಕದ ಶಷ್ಟಮ ಭಾವದಲ್ಲಿ ವಿಪರೀತ ರಾಜಯೋಗ ರೂಪಿಸುತ್ತಿದ್ದು, ಅದರಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಮುಂಬರುವ ದಿನಗಳಲ್ಲಿ ನಿಮಗೆ ಶನಿ ಖುಷಿಗಳೆ-ಖುಷಿಗಳನ್ನು ಕರುಣಿಸಲಿದ್ದಾನೆ. ಮಕ್ಕಳ ಕಡೆಯಿಂದಲೂ ನಿಮಗೆ ಸಂತಸದ ಸುದ್ದಿ ಸಿಗಲಿದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕಾಯಿಲೆಗಲಿಂದ ಮುಕ್ತಿ ಸಿಗಲಿದೆ. ಬುಧ ಕನ್ಯಾ ರಾಶಿಯಲ್ಲಿ ಉತ್ತಮ ಸ್ಥಿತಿಯಲ್ಲಿ ಇರುವ ಕಾರಣ ಹಲವು ರೀತಿಯ ಕಾಯಿಲೆಗಳಿಂದ ಮುಕ್ತಿ ದೊರಕಲಿದೆ. ಸ್ವಚ್ಛ ಆರೋಗ್ಯ ನಿಮ್ಮದಾಗಲಿದೆ. ಇದಲ್ಲದೆ ಗುರುವಿನ ಕೃಪೆಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ದೀರ್ಘಾವಧಿಯಿಂದ ನಡೆದುಕೊಂಡು ಬಂದ ಕಷ್ಟಗಳಿಂದ ಮುಕ್ತಿ ಸಿಗಲಿದೆ. 

4 /5

ವೃಶ್ಚಿಕ ರಾಶಿ: ಡಿಸೆಂಬರ್ ತಿಂಗಳಿನಿಂದ ಹಿಡಿದು ಹೊಸ ವರ್ಷದ ವರೆಗೆ ವೃಷಿಕ ಜಾತಕದವರಿಗೆ ಕಾಲ ಅತ್ಯಂತ ಶುಭವಾಗಿರಲಿದೆ. ನಿಮ್ಮ ಜಾತಕದಲ್ಲಿ ಬುಧ ಮತ್ತು ಶುಕ್ರರ ಮೈತ್ರಿ ನೆರೆವೇರಲಿದೆ. ವರ್ಷಾಂತ್ಯದಲ್ಲಿ ಈ ಮೈತ್ರಿ ನೆರವೇರುವ ಕಾರಣ ಹೊಸವರ್ಷದಲ್ಲಿ ಹಲವು ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ. ಇದಲ್ಲದೆ ಮಂಗಳ ಕೂಡ ರುಚಕ ರಾಜಯೋಗ ರೂಪಿಸುತ್ತಿದ್ದಾನೆ. ನಿಮ್ಮ ಜಾತಕದ ಲಗ್ನ ಭಾವದಲ್ಲಿ ಈ ರಾಜಯೋಗ ರೂಪುಗೊಳ್ಳುವ ಕಾರಣ ನಿಮಗೆ ಶುಭಫಲಗಳ ಪ್ರಾಪ್ತಿಯಾಗಲಿವೆ. ಇದಲ್ಲದೆ ಶನಿ, ಗುರು, ರಾಹು, ಮಂಗಳ ನಿಮ್ಮ ಜೀವನದಲಿ ಹೊಸ ವರ್ಷದಲ್ಲಿ ನಿಮಗೆ ಭಾರಿ ಸಂತಸವನ್ನು ನೀಡಲಿದ್ದಾರೆ. ದೀರ್ಘಕಾಲದಿಂದ ನಿಂತು ಹೋದ ಕೆಲಸಗಳಿವೆ ಮತ್ತೆ ಗತಿ ಸಿಗಲಿದೆ. ಮಂಗಳ ಹಾಗೂ ಶುಕ್ರರ ಕಾರಣ ಧನಶಕ್ತಿ ಯೋಗ ರೂಗೊಳ್ಳುತ್ತಿದೆ ಹಾಗೂ ಬುಧ ಹಾಗೂ ಶುಕ್ರ ಸೇರಿ ಲಕ್ಷ್ಮಿ ನಾರಾಯಣ ಯೋಗ ನಿಮಗೆ ಸಾಕಷ್ಟು ಸುಖ ಸಮೃದ್ಧಿಯನ್ನು ನೀಡಲಿವೆ. ಆಟೋಟ, ವೈದ್ಯಕೀಯ, ರಕ್ಷಣಾ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಭಾರಿ ಲಾಭ ಸಿಗುವ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)