ಬೆಂಗಳೂರು : ಮಂಗಳವನ್ನು ಗ್ರಹಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಜನವರಿ 13 ರಿಂದ, ಮಂಗಳ ವೃಷಭ ರಾಶಿಯಲ್ಲಿ ನೇರ ನಡೆ ಆರಂಭಿಸಲಿದ್ದಾನೆ. ಇದಾದ ನಂತರ ಅಕ್ಟೋಬರ್ 30 ರವರೆಗೆ ನೇರ ನಡೆಯನ್ನೇ ಅನುಸರಿಸಲಿದ್ದಾನೆ. 


COMMERCIAL BREAK
SCROLL TO CONTINUE READING

ವ್ಯಕ್ತಿಯ ಜಾತಕದಲ್ಲಿ ಮಂಗಳ ದುರ್ಬಲನಾಗಿದ್ದರೆ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮಂಗಳನ ಈ ನೇರ ಚಲನೆಯು  ಆರಂಭವಾಗುತ್ತಿದ್ದಂತೆಯೇ, ನಾಲ್ಕು ರಾಶಿಯವರಿಗೆ ಅಶುಭ ಕಾಲ ಆರಂಭವಾಗಲಿದೆ. ಈ ರಾಶಿಯವರು ಅತ್ಯಂತ ಜಾಗರೂಕರಾಗಿರಬೇಕು. 


ಇದನ್ನೂ ಓದಿ : Tongue colour : ನಾಲಿಗೆಯ ಬಣ್ಣ, ಆಕಾರದಿಂದಲೇ ವ್ಯಕ್ತಿಯ ಗುಣಗಳನ್ನು ತಿಳಿಯಿರಿ!


ವೃಷಭ ರಾಶಿ : ಈ ರಾಶಿಯಲ್ಲಿಯೇ ಮಂಗಳ ನೇರ ಚಲನೆಗೆ ಮರಳಲಿದ್ದಾನೆ.   ಮಂಗಳ ಗ್ರಹದ ಈ ನೇರ ಸಂಚಾರದಿಂದ ಕಾಯಿಲೆಗಳಿಗೆ ಹಣ ಖರ್ಚು ಮಾಡುವ ಸನ್ನಿವೇಶ ಎದುರಾಗಬಹುದು. ನಿಮ್ಮ ಅಥವಾ ತಾಯಿಯ ಅನಾರೋಗ್ಯದ ಮೇಲೆ ಸಾಕಷ್ಟು ಖರ್ಚು ಮಾಡಬೇಕಾಗಿ ಬರಬಹುದು. 


ಮಿಥುನ ರಾಶಿ : ಸಂಗಾತಿಯೊಂದಿಗೆ  ಕಲಹ ಉಂಟಾಗಬಹುದು. ಒಂದು ಹಂತದಲ್ಲಿ ನೀನಾ ನಾನಾ ಎನ್ನುವ ಸನ್ನಿವೇಶ ಕೂಡಾ ಸೃಷ್ಟಿಯಾಗಬಹುದು. ದಾಂಪತ್ಯ ಜೀವನದಲ್ಲಿ ಸಂಚಲನ ಉಂಟಾಗುವುದು. ಈ ಹಿನ್ನೆಲೆಯಲ್ಲಿ  ಏನೇ ಸಮಸ್ಯೆಗಳು ಎದುರಾದರೂ ತಾಳ್ಮೆಯಿಂದ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ.  


ಇದನ್ನೂ ಓದಿ : Lucky Girls for Husband: ಈ ರೀತಿಯ ಹೆಂಡತಿಯರು ಗಂಡನ ಪಾಲಿಗೆ ಅದೃಷ್ಟವಂತರು!


ತುಲಾ ರಾಶಿ : ದೊಡ್ಡ ವ್ಯಕ್ತಿಗಳು ಅಥವಾ ಅಧಿಕಾರಿಗಳೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ. ದೂರದ ಪ್ರಯಾಣವನ್ನು ಮಾಡದಿರುವುದೇ ಒಳಿತು. ಯಾವುದೇ ಕಾರಣಕ್ಕೂ ಬೇರೆಯವರ ವಾಹನವನ್ನು ಚಲಾಯಿಸಲು ಹೋಗಬೇಡಿ.  


ವೃಶ್ಚಿಕ ರಾಶಿ : ಮಂಗಳ ಗ್ರಹದ ನೇರ ಸಂಚಾರದಿಂದ ಕೋಪ ಹೆಚ್ಚುತ್ತದೆ. ಈ ಕಾರಣದಿಂದಾಗಿ, ತೀರಾ ಹತ್ತಿರದವರೊಂದಿಗಿನ ಸಂಬಂಧ ಕೂಡಾ ಹಾಳಾಗುತ್ತದೆ. ನಾಲಿಗೆಯ ಮೇಲೆ ಹಿಡಿತವಿರಲಿ. ಮಾತಿನ ಮೂಲಕವೇ ವಿವಾದಕ್ಕೆ ಸಿಲುಕಿಕೊಳ್ಳಬಹುದು.  


ಯಾವ ಕ್ರಮಗಳನ್ನುಅನುಸರಿಸಿಕೊಳ್ಳಬೇಕು ? :
ಮಂಗಳ ನಡೆ ಬದಲಾಗುತ್ತಿದ್ದಂತೆಯೇ  ಸುಬ್ರಹ್ಮಣ್ಯನನ್ನು ಪೂಜಿಸಬೇಕು. ಸುಬ್ರಹ್ಮಣ್ಯನನ್ನು ಪೂಜಿಸಿದರೆ ಮಂಗಳನ ಅನುಗ್ರಹ ದೊರೆಯುತ್ತದೆ. ಇದಲ್ಲದೇ  ಆಂಜನೇಯನ ಪೂಜೆಯಿಂದ ಮಂಗಳದೋಷ ನಿವಾರಣೆಯಾಗುತ್ತದೆ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.