Sankranti 2023: ಈ ಬಾರಿ ಜನವರಿ 15ಕ್ಕೆ ಮಕರ ಸಂಕ್ರಾಂತಿ, ಸ್ನಾನ-ದಾನದ ಸರಿಯಾದ ಸಮಯ ಮತ್ತು ಪುಣ್ಯಕಾಲದ ಮಹತ್ವ ಇಲ್ಲಿದೆ

Makar Sankranti 2023: 2023 ನೇ ಸಾಲಿನ ಮೊದಲ ಪ್ರಮುಖ ಹಬ್ಬವಾದ ಮಕರ ಸಂಕ್ರಾಂತಿಯನ್ನು ಈ ಬಾರಿ ಜನವರಿ 15 ರ ಭಾನುವಾರದಂದು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ ಪುಣ್ಯಕಾಲ ಮತ್ತು ಸ್ನಾನ-ದಾನದ ಸರಿಯಾದ ಸಮಯ ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jan 9, 2023, 05:19 PM IST
  • ಉತ್ತರಾಯಣ ಮತ್ತು ಶುಕ್ಲ ಪಕ್ಷದಲ್ಲಿ ದೇಹವನ್ನು ತೊರೆಯುವ ವ್ಯಕ್ತಿಗೆ
  • ಜನ್ಮ ಮತ್ತು ಮರಣದ ಚಕ್ರದಿಂದ ಮುಕ್ತಿ ಸಿಗುತ್ತದೆ ಎಂದು ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ.
  • ಅವನು ಮರಣಾನಂತರ ಮತ್ತೆ ಭೂಲೋಕದಲ್ಲಿ ಮತ್ತೆ ಹುಟ್ಟಿ ಬರುವದಿಲ್ಲ.
Sankranti 2023: ಈ ಬಾರಿ ಜನವರಿ 15ಕ್ಕೆ ಮಕರ ಸಂಕ್ರಾಂತಿ, ಸ್ನಾನ-ದಾನದ ಸರಿಯಾದ ಸಮಯ ಮತ್ತು ಪುಣ್ಯಕಾಲದ ಮಹತ್ವ ಇಲ್ಲಿದೆ title=
Sankranti 2023

Makar Sankranti 2023: 2023 ನೇ ಸಾಲಿನ ಮೊದಲ ಪ್ರಮುಖ ಹಬ್ಬವಾದ ಮಕರ ಸಂಕ್ರಾಂತಿಯನ್ನು ಈ ಬಾರಿ  ಜನವರಿ 15 ರ ಭಾನುವಾರದಂದು ಆಚರಿಸಲಾಗುತ್ತದೆ. ಇದು ಸೂರ್ಯನ ಆರಾಧನೆಯ ಹಬ್ಬ. ಈ ದಿನ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸಿದಾಗ ಮತ್ತು ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾದಾಗ ಧನುರ್ಮಾಸ ಅಂತ್ಯವಾಗುತ್ತದೆ.

ಈ ವರ್ಷ, ಮಕರ ಸಂಕ್ರಾಂತಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತಿದೆ, ಏಕೆಂದರೆ ಭಾನುವಾರ ಮತ್ತು ಮಕರ ಸಂಕ್ರಾಂತಿ ಎರಡೂ ಸೂರ್ಯನಿಗೆ ಸಮರ್ಪಿತವಾಗಿವೆ. ಪುರಾಣಗಳ ಪ್ರಕಾರ, ಮಕರ ಸಂಕ್ರಾಂತಿಯ ಆರಂಭಕ್ಕೆ ಸೂರ್ಯ ಅಸ್ತನಾಗುತ್ತಿದ್ದಾನೆ.ಅಂತಹ ಮಂಗಳಕರ ಕಾಕತಾಳೀಯದಲ್ಲಿ, ಮಕರ ಸಂಕ್ರಾಂತಿಯಂದು ಸ್ನಾನ, ದಾನ ಮತ್ತು ಸೂರ್ಯನನ್ನು ಪೂಜಿಸುವುದರಿಂದ ಇತರ ದಿನಗಳಲ್ಲಿ ಮಾಡುವ ದಾನಕ್ಕಿಂತ ಹೆಚ್ಚಿನ ಪುಣ್ಯ ಸಿಗುತ್ತದೆ. ಮಕರ ಸಂಕ್ರಾಂತಿಯ ಪುಣ್ಯ ಮತ್ತು ಅದರ ವಿಶಿಷ್ಥತೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,  

ಮಕರ ಸಂಕ್ರಾಂತಿ 2023 ಸ್ನಾನ-ದಾನ ಮುಹೂರ್ತ 
ಮಕರ ಸಂಕ್ರಾಂತಿಯ ದಿನದಂದು, ಸೂರ್ಯ ದೇವ ತನ್ನ ಮಗ ಶನಿಯ ರಾಶಿಯಲ್ಲಿ ವಿರಾಜಮಾನನಾಗಲಿದ್ದಾನೆ. ತಂದೆಯಾದ ಸೂರ್ಯದೇವನು ತನ್ನ ರಾಶಿಯಾದ ಮಕರರಾಶಿಗೆ ಪ್ರವೇಶಿಸಿದಾಗ ಶನಿದೇವನು ಸೂರ್ಯನನ್ನು ಎಳ್ಳು ಮತ್ತು ಬೆಲ್ಲದಿಂದ ಪೂಜಿಸುತ್ತಾನೆ ಎಂದು ನಂಬಲಾಗಿದೆ. 

>> ಮಕರ ಸಂಕ್ರಾಂತಿಯ ಸೂರ್ಯನು ಮಕರ ರಾಶಿ ಪ್ರವೇಶದ ಸಮಯ - ರಾತ್ರಿ 08.57 (14 ಜನವರಿ 2023)

>> ಮಕರ ಸಂಕ್ರಾಂತಿ ಪುಣ್ಯ ಕಾಲ - 07:17 am - 05:55 pm (15 ಜನವರಿ 2023)

>> ಅವಧಿ - 10 ಗಂಟೆ 38 ನಿಮಿಷಗಳು

>> ಮಕರ ಸಂಕ್ರಾಂತಿ ಮಹಾ ಪುಣ್ಯ ಕಾಲ - 07:17 am - 09:04 am (15 ಜನವರಿ 2023)

>> ಅವಧಿ - 01 ಗಂಟೆ 46 ನಿಮಿಷಗಳು

ಮಕರ ಸಂಕ್ರಾಂತಿ ಮಹತ್ವ
ಮಕರ ಸಂಕ್ರಾಂತಿಯ ಪುಣ್ಯ ಮತ್ತು ಮಹಾಪುಣ್ಯ ಕಾಲ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಇಂದಿನಿಂದ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಮಕರ ಸಂಕ್ರಾಂತಿಯ ಪುಣ್ಯ ಮತ್ತು ಮಹಾ ಪುಣ್ಯಕಾಲದಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡಿ, ದಾನ ಮಾಡುವ ವ್ಯಕ್ತಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ ಮತ್ತು ಆತನಿಗೆ 7 ಜನ್ಮಗಳ ಪಾಪದಿಂದ ಮುಕ್ತಿ ಸಿಗುತ್ತದೆ ಎಂಬುದು ಕೂಡ ಒಂದು ಧಾರ್ಮಿಕ ನಂಬಿಕೆ.

ಇದನ್ನೂ ಓದಿ-Gemstone: ನಿಮ್ಮ ಹುಟ್ಟು ದಿನಾಂಕ ಆಧರಿಸಿ ನಿಮ್ಮ ಪಾಲಿಗೆ ಯಾವ ರತ್ನ ಶುಭ ಇಲ್ಲಿ ತಿಳಿದುಕೊಳ್ಳಿ

ಉತ್ತರಾಯಣ ಮತ್ತು ಶುಕ್ಲ ಪಕ್ಷದಲ್ಲಿ ದೇಹವನ್ನು ತೊರೆಯುವ ವ್ಯಕ್ತಿಗೆ ಜನ್ಮ ಮತ್ತು ಮರಣದ ಚಕ್ರದಿಂದ ಮುಕ್ತಿ ಸಿಗುತ್ತದೆ ಎಂದು ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಅವನು ಮರಣಾನಂತರ ಮತ್ತೆ ಭೂಲೋಕದಲ್ಲಿ ಮತ್ತೆ ಹುಟ್ಟಿ ಬರುವದಿಲ್ಲ. ಈ ದಿನ ಪಾದರಕ್ಷೆ, ಧಾನ್ಯಗಳು, ಎಳ್ಳು, ಬೆಲ್ಲ, ಬಟ್ಟೆ, ಹೊದಿಕೆಗಳನ್ನು ದಾನ ಮಾಡುವುದರಿಂದ ಶನಿ ಮತ್ತು ಸೂರ್ಯ ದೇವನ ವಿಶೇಷ ಆಶೀರ್ವಾದ ಲಭಿಸುತ್ತದೆ.

ಇದನ್ನೂ ಓದಿ-Sankranti 2023: ಈ ಬಾರಿಯ ಮಕರ ಸಂಕ್ರಾಂತಿಯಂದು ಒಂದಲ್ಲ 3 ಶುಭಯೋಗಗಳ ನಿರ್ಮಾಣ, ಏನಿದರ ವಿಶೇಷತೆ?

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News