Mars Mercury Transit On Solar Eclipse: ಇದೇ ಏಪ್ರಿಲ್ 20, 2023ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ.  ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಗ್ರಹಣವನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಸೂರ್ಯ ಗ್ರಹಣದ ದಿನವೇ ಮಂಗಳ ಮತ್ತು ಬುಧ ಗ್ರಹಗಳ ರಾಶಿ ಪರಿವರ್ತನೆ ನಡೆಯಲಿದ್ದು ಇದನ್ನು ಕೆಲವು ರಾಶಿಯವರಿಗೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ವರ್ಷದ ಮೊದಲ ಸೂರ್ಯ ಗ್ರಹಣದ ದಿನ ಏಪ್ರಿಲ್ 20ರಂದು ದಿನ ಮಂಗಳನ ರಾಶಿಯಾದ ಮೇಷ ರಾಶಿಯಲ್ಲಿ ಬುಧ ಸಂಕ್ರಮಿಸಲಿದ್ದಾನೆ. ಅದೇ ದಿನ ಬುಧನ ರಾಶಿಚಕ್ರ ಚಿಹ್ನೆಯಾದ ಮಿಥುನ ರಾಶಿಯಲ್ಲಿ ಮಂಗಳ ಸಂಕ್ರಮಿಸಲಿದ್ದಾನೆ. ಸೂರ್ಯ ಗ್ರಹಣದಂದು ಮಂಗಳ-ಬುಧನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರಿಗೆ ಧನ ಸಂಪತ್ತು ಹರಿದು ಬರಲಿದ್ದು, ಬಂಪರ್ ಲಾಭದ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಸೂರ್ಯ ಗ್ರಹಣದಂದೇ ಮಂಗಳ-ಬುಧರ ರಾಶಿ ಬದಲಾವಣೆ- ಕೆಲವು ರಾಶಿಯವರಿಗೆ ಭಾರೀ ಅದೃಷ್ಟ:- 
ಮಿಥುನ ರಾಶಿ: 

ಸೂರ್ಯ ಗ್ರಹಣದಂದು ರಚನೆಯಾಗುತ್ತಿರುವ ಮಂಗಳ-ಬುಧ ರಾಶಿ ಬದಲಾವಣೆ ಯೋಗವು ಮಿಥುನ ರಾಶಿಯವರಿಗೆ ಅಪಾರ ಕೀರ್ತಿ, ಯಶಸ್ಸನ್ನು ತರಲಿದೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನಕ್ಕೇರುವ ಸಾಧ್ಯತೆಯೂ ಇದೆ. 


ಇದನ್ನೂ ಓದಿ- Shukra Gochar: ಮುಂದಿನ 25ದಿನಗಳ ಕಾಲ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು


ಕರ್ಕಾಟಕ ರಾಶಿ: 
ಸೂರ್ಯಗ್ರಹಣದಂದು ಮಂಗಳ-ಬುಧರ ರಾಶಿ ಪರಿವರ್ತನೆ ಯೋಗವು ಕರ್ಕಾಟಕ ರಾಶಿಯವರಿಗೆ ವೃತ್ತಿ ರಂಗದಲ್ಲಿ ಭಾರೀ ಪ್ರಯೋಜನವನ್ನು ನೀಡಲಿದೆ. ಈ ರಾಶಿಯವರಿಗೆ ಪ್ರಮೋಷನ್ ಭಾಗ್ಯವಿದ್ದು, ಧನಾಗಮನ ಹೆಚ್ಚಾಗಲಿದೆ. 


ಸಿಂಹ ರಾಶಿ:
ಸೂರ್ಯ ಗ್ರಹಣದಂದೇ ಮಂಗಳ-ಬುಧರ ರಾಶಿ ಬದಲಾವಣೆಯು ಸಿಂಹ ರಾಶಿಯವರಿಗೂ ಸಹ ವಿಶೇಷ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಕೈ ಹಾಕಿದ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ಇದರಿಂದ ನೀವು ಅಪಾರ ಸಂಪತ್ತಿನ ಒಡೆಯರಾಗುವ ಯೋಗವೂ ಇದೆ. 


ಇದನ್ನೂ ಓದಿ- ಸೂರ್ಯಗ್ರಹಣದಲ್ಲಿ ಮಂಗಳ ಬುಧ ಪರಿವರ್ತನ ಯೋಗದ ವಿನಾಶಕಾರಿ ಆಟ: ಈ 5 ರಾಶಿಯವರ ಬೆನ್ನೇರಲಿದೆ ಸಮಸ್ಯೆಗಳ ಮೂಟೆ!


ಕುಂಭ ರಾಶಿ: 
ವರ್ಷದ ಮೊದಲ ಸೂರ್ಯ ಗ್ರಹಣದ ದಿನ ಮಂಗಳ-ಬುಧರ ರಾಶಿ ಪರಿವರ್ತನೆ ಯೋಗವು ಕುಂಭ ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ಕುಂಭ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಲಿದ್ದು ನಿಮ್ಮ ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.