ಶನಿಯ ರಾಶಿಯಲ್ಲಿ ತ್ರಿಗ್ರಾಹಿ ಯೋಗ- ಮೂರು ರಾಶಿಯವರಿಗೆ ಬೊಂಬಾಟ್ ಧನ ಯೋಗ, ಯಶಸ್ಸು
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದೀಗ, ಶನಿಯ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ, ಗ್ರಹಗಳ ರಾಜಕುಮಾರ ಬುಧ, ನ್ಯಾಯದ ದೇವರು ಶನಿ ಹೀಗೆ ಮೂರು ಗ್ರಹಗಳ ಸಂಯೋಗದಿಂದ ತ್ರಿಗ್ರಾಹಿ ಯೋಗ ರೂಪುಗೊಂಡಿದೆ. ಈ ಸಮಯದಲ್ಲಿ ಮೂರು ರಾಶಿಯವರಿಗೆ ಬೊಂಬಾಟ್ ಧನ ಲಾಭದ ಜೊತೆಗೆ ಭಾರೀ ಯಶಸ್ಸು ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.
ತ್ರಿಗ್ರಾಹಿ ಯೋಗದ ಪರಿಣಾಮ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ನಿರ್ದಿಷ್ಟ ಸಮಯದಲ್ಲಿ ರಾಶಿ ಪರಿವರ್ತನೆ ಮಾಡುತ್ತದೆ. ಈ ಸಮಯದಲ್ಲಿ ಗ್ರಹಗಳ ಸಂಯೋಜನೆಯು ಶುಭ-ಅಶುಭ ಯೋಗಗಳನ್ನು ಉಂಟು ಮಾಡುತ್ತದೆ. ಇದೀಗ ಶನಿಯ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ವಾಸ್ತವವಾಗಿ, ಮೂವತ್ತು ವರ್ಷಗಳ ಬಳಿಕ ನ್ಯಾಯದ ದೇವರು ಶನಿ ದೇವನು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದಾದ ಬಳಿಕ ವ್ಯಾಲೆಂಟೈನ್ಸ್ ಡೇ ದಿನದದ್ನು ಸೂರ್ಯನು ಇದೇ ರಾಶಿಯನ್ನು ಪ್ರವೇಶಿಸಿದ್ದಾನೆ. ಮೊನ್ನೆ ಮೊನ್ನೆಯಷ್ಟೇ ಗ್ರಹಗಳ ರಾಜಕುಮಾರನಾದ ಬುಧ ಕೂಡ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದಾಗಿ ಕುಂಭ ರಾಶಿಯಲ್ಲಿ ಶನಿ-ಸೂರ್ಯ-ಬುಧರ ಯುತಿಯಿಂದಾಗಿ ತ್ರಿಗ್ರಾಹಿ ಯೋಗ ರೂಪುಗೊಂಡಿದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯಲ್ಲಿ ರೂಪುಗೊಂಡಿರುವ ತ್ರಿಗ್ರಾಹಿ ಯೋಗವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯವೂ ಮೂರು ರಾಶಿಯವರಿಗೆ ತುಂಬಾ ಮಂಗಳಕರವಾಗಿದ್ದು ಅವರು ಪ್ರತಿ ಕೆಲಸದಲ್ಲೂ ಯಶಸ್ಸಿನ ಜೊತೆಗೆ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...
ಶನಿ ರಾಶಿಯಲ್ಲಿ ತ್ರಿಗ್ರಾಹಿ ಯೋಗ- ಮೂರು ರಾಶಿಯವರಿಗೆ ಬಂಪರ್ ಧನ ಲಾಭ, ಭಾರೀ ಯಶಸ್ಸು:-
ವೃಷಭ ರಾಶಿ:
ಶನಿಯ ರಾಶಿಯಲ್ಲಿ ನಿರ್ಮಾಣವಾಗಿರುವ ತ್ರಿಗ್ರಾಹಿ ಯೋಗವು ವೃಷಭ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಯಶಸ್ಸನ್ನು ತರಲಿದೆ. ಈ ಸಮಯದಲ್ಲಿ ಮೂರು ಗ್ರಹಗಳ ದಯೆಯಿಂದಾಗಿ ವೃಷಭ ರಾಶಿಯವರು ಉದ್ಯೋಗದಲ್ಲಿ ಭಾರೀ ಯಶಸ್ಸನ್ನು ಸಾಧಿಸಲಿದ್ದಾರೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ವಿತ್ತೀಯ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ತಮ್ಮ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಈ 5 ರಾಶಿಯ ಜನ
ಮಿಥುನ ರಾಶಿ:
ಶನಿ-ಸೂರ್ಯ-ಬುಧರ ಯುತಿಯಿಂದಾಗಿ ರೂಪುಗೊಂಡಿರುವ ತ್ರಿಗ್ರಾಹಿ ಯೋಗವು ಮಿಥುನ ರಾಶಿಯವರ ಜೀವನದಲ್ಲಿ ಬೊಂಬಾಟ್ ಪ್ರಯೋಜನಗಳನ್ನು ತರಲಿದೆ. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ನಿಮ್ಮ ಬಯಕೆಯ ಕಂಪನಿಯಿಂದ ಉದ್ಯೋಗದ ಆಫರ್ ಬರಬಹುದು. ವ್ಯಾಪಾರ-ವ್ಯವಹಾರದಲ್ಲಿಯೂ ಭಾರೀ ಪ್ರಯೋಜನವಾಗಲಿದ್ದು, ಆರ್ಥಿಕವಾಗಿ ಏಳ್ಗೆ ಹೊಂದುವಿರಿ.
ಇದನ್ನೂ ಓದಿ- ಮಾರ್ಚ್‌ನಲ್ಲಿ ವೃತ್ತಿ ಬದುಕಿನಲ್ಲಿ ಹೊಸ ಶಿಖರವನ್ನು ಏರಲಿದ್ದಾರೆ ಈ ರಾಶಿಯವರು
ವೃಶ್ಚಿಕ ರಾಶಿ:
ಪ್ರಸ್ತುತ ಶನಿ ಧೈಯಾ ಪ್ರಭಾವವನ್ನು ಎದುರಿಸುತ್ತಿರುವ ವೃಶ್ಚಿಕ ರಾಶಿಯವರಿಗೂ ಕೂಡ ಶನಿ-ಸೂರ್ಯ-ಬುಧರ ಯುತಿಯಿಂದಾಗಿ ನಿರ್ಮಾಣಗೊಂಡಿರುವ ತ್ರಿಗ್ರಾಹಿ ಯೋಗವು ತುಂಬಾ ಶುಭ ಫಲಗಳನ್ನು ನೀಡಲಿದೆ. ಹಠಾತ್ ಧನ ಲಾಭವು ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ವ್ಯಾಪಾರಸ್ಥರಿಗೂ ಭಾರೀ ಲಾಭವಾಗಲಿದೆ. ನಿಮ್ಮ ಬಹುದಿನಗಳ ಕನಸಿನ ಮನೆ, ಕಾರು ಖರೀದಿಸುವ ಯೋಗವೂ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.