ನಮ್ಮ ಧರ್ಮ ಗ್ರಂಥಗಳಲ್ಲಿ ಹೇಳಿರುವ ಪ್ರತಿಯೊಂದಕ್ಕೂ ಘಟನೆಗೂ ಸಾಕ್ಷ್ಯಗಳು ಸಿಗುತ್ತವೆ. ಆಸ್ತಿಕರಿಗೆ ಅದು ಪರಮ ಶ್ರದ್ದೆಯ ವಿಚಾರ. ಶಿವ ಪಾರ್ವತಿ ಕಲ್ಯಾಣ ನಡೆದಿದೆ ಎನ್ನುವುದಕ್ಕೂ ಸಾಕ್ಷಿಯಿದೆ. ಹಾಗಾದರೆ, ಶಿವ-ಪಾರ್ವತಿ ಕಲ್ಯಾಣವಾಗಿದ್ದು ಎಲ್ಲಿ? ಮಾತೆ ಪಾರ್ವತಿಯು  ಪರಮೇಶ್ವರನನ್ನು ಒಲಿಸಿಕೊಳ್ಳಲು ತಪಸ್ಸುಮಾಡಿದ ಆ ಸ್ಥಳ ಯಾವುದು? ಇಲ್ಲಿದೆ ನೋಡಿ ಮಾಹಿತಿ. 


COMMERCIAL BREAK
SCROLL TO CONTINUE READING

ಇದು ಪಾರ್ವತಿ ಪರಮೇಶ್ವರರ ಕಲ್ಯಾಣ ನಡೆದ ಪವಿತ್ರ ನೆಲ:
ಪರಮೇಶ್ವರನ ಒಲುಮೆಗೆ ಪಾರ್ವತಿ ತಪಸ್ಸು ಮಾಡಿದ ಸ್ಥಳ ಈಗ ಗೌರಿಕುಂಡ ಎಂದು ಪ್ರಸಿದ್ದಿ ಪಡೆದಿದೆ. ಈ ಗೌರಿ ಕುಂಡ ಈಗಿನ ಉತ್ತರಾಖಂಡ ರಾಜ್ಯದಲ್ಲಿದೆ. ಯಾವ ಸ್ಥಳದಲ್ಲಿ ಪಾರ್ವತಿ-ಪರಮೇಶ್ವರರ ವಿವಾಹವಾಗಿತ್ತೋ, ಆ ಸ್ಥಳದಲ್ಲೀಗ ತ್ರಿಯುಗ ನಾರಾಯಣ ಮಂದಿರವಿದೆ. 


ಇದನ್ನೂ ಓದಿ : ಕಡೇ ಕಾರ್ತಿಕ ಸೋಮವಾರ: ಕೊಂಗಳ್ಳಿ ಬೆಟ್ಟದಲ್ಲಿ ಪುರುಷ ಭಕ್ತಸಾಗರ!! ಮಾದಪ್ಪನ ಬೆಟ್ಟದಲ್ಲಿ ಮಹಾಜ್ಯೋತಿಗೆ ಕ್ಷಣಗಣನೆ


ಈಗಲೂ ಉರಿಯುತ್ತಿದೆ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದ  ಅಗ್ನಿಕುಂಡ :
ತ್ರಿಯುಗ ನಾರಾಯಣದಲ್ಲಿ ಶಂಕರ-ಪಾರ್ವತಿ ಸತಿಪತಿಯರಾದರು ಎನ್ನುತ್ತದೆ  ನಮ್ಮ ಧರ್ಮ ಗ್ರಂಥ. ಅದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲೊಂದು ಅಗ್ನಿ ಜ್ಯೋತಿ ನಿರಂತರ ಉರಿಯುತ್ತಿರುತ್ತದೆ. ಈ ಅಗ್ನಿ ತ್ರೇತಾಯುಗದಿಂದ ಆರಂಭವಾಗಿ ಇಲ್ಲಿಯವರೆಗೂ ಉರಿಯುತ್ತಲೇ ಇದೆ ಎಂದು ಹೇಳುತ್ತಾರೆ. ಇದು ಶಿವಪಾರ್ವತಿ ಕಲ್ಯಾಣ ನಡೆದ ಹವನ ಕುಂಡ ಎಂದು ಹೇಳಲಾಗುತ್ತದೆ.ಇದೇ ಹವನಕುಂಡದಲ್ಲಿ ಅಗ್ನಿದೇವನನ್ನೇ ಸಾಕ್ಷಿಯಾಗಿಟ್ಟುಕೊಂಡು ಪಾರ್ವತಿ ಪರಮೇಶ್ವರರ ಕಲ್ಯಾಣವಾಗಿತ್ತಂತೆ.


ತಪಸ್ಸು ನಡೆದ ಸ್ಥಳವೇ ಈಗಿನ ಗೌರಿಕುಂಡ :
ಪೌರಾಣಿಕ ಕಥೆಗಳನ್ನುನೋಡುವುದಾದರೆ, ಪರ್ವತರಾಜನ ಮಗಳಾಗಿ ಪಾರ್ವತಿ  ಜನ್ಮ ತಳೆಯುತ್ತಾಳೆ. ಈ ಜನ್ಮದಲ್ಲಿ ಶಿವನನ್ನು ವರಿಸಲು ಪಾರ್ವತಿ ಕಠಿಣ ತಪಸ್ಸು ಮತ್ತು ಧ್ಯಾನ ದಲ್ಲಿ ತೊಡಗುತ್ತಾರೆ. ಯಾವ ಸ್ಥಳದಲ್ಲಿ ಪರಮೇಶ್ವರನನ್ನು ಒಲಿಸಲು ಪಾರ್ವತಿ ತಪಸ್ಸು ಮಾಡಿದರೋ, ಆ ಸ್ಥಳ ಇಂದು ಗೌರಿ ಕುಂಡವೆಂದು ಹೆಸರು ಪಡೆದಿದೆ. ತ್ರಿಯುಗನಾರಾಯಣಕ್ಕೆ ತೆರಳುವವರು ಗೌರಿಕುಂಡಕ್ಕೆ ಬಂದು ದರ್ಶನ ಪಡೆಯುತ್ತಾರೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ತ್ರಿಯುಗನಾರಾಯಣ ಹಳ್ಳಿಯಲ್ಲಿದೆ ಮೂರು ಕುಂಡ :
ಮಂದಾಕಿನಿ, ಸೋನ ಮತ್ತು ಗಂಗಾ ಈ ತ್ರಿವೇಣಿ ಸಂಗಮದಲ್ಲಿದೆ ತ್ರಿಯುಗ ನಾರಾಯಣ ಹಳ್ಳಿ. ಈ ಮದುವೆಗೆ ದೇವಾದಿದೇವತೆಗಳೆಲ್ಲಾ ಬಂದಿದ್ದರಂತೆ. ಅವರೆಲ್ಲಾ ಇದೇ  ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದರಂತೆ. ಈಗಲೂ ಇಲ್ಲಿ ನೀರಿನ ಮೂರು  ಕುಂಡಗಳಿರುವುದು ನೋಡಬಹುದು. ಒಂದನ್ನು ರುದ್ರಕುಂಡ, ಮತ್ತೊಂದು ವಿಷ್ಣು ಕುಂಡ ಮತ್ತು ಮೂರನೆಯದ್ದನ್ನು ಬ್ರಹ್ಮ ಕುಂಡ ಎಂದು ಕರೆಯಲಾಗುತ್ತದೆ. ಈ ಮೂರೂ ಕುಂಡಗಳಿಗೆ ಸರಸ್ವತಿ ಕುಂಡದಿಂದ  ಜಲಧಾರೆ ಬಂದು ಸೇರುತ್ತದೆ.


ಈ ಕುಂಡದಿಂದ  ಸ್ನಾನಮಾಡಿದರೆ, ಸಂತಾನವಿಲ್ಲದವರಿಗೆ ಸಂತಾನ ಭಾಗ್ಯವಾಗುತ್ತದೆ ಎಂದು ಹೇಳುತ್ತಾರೆ. ಇದೇ ಸ್ಥಳದಲ್ಲಿ ಮಹಾವಿಷ್ಣು ವಾಮನ ಅವತಾರ ತಳೆದು ಬಲೀಂದ್ರನನ್ನು ಮೆಟ್ಟಿದ ಎಂದೂ ಹೇಳಲಾಗುತ್ತದೆ.ಕಥೆ, ಪ್ರತೀತಿಗಳು ಯಾವುದೇ ಇರಲಿ, ಈ ಸ್ಥಳಗಳು ಈಗಲೂ ಹೆಸರುವಾಸಿ. ಸಾಕಷ್ಟು ಭಕ್ತರು ಇಲ್ಲಿಗೆ ಬರುತ್ತಾರೆ.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.