ಕಡೇ ಕಾರ್ತಿಕ ಸೋಮವಾರ: ಕೊಂಗಳ್ಳಿ ಬೆಟ್ಟದಲ್ಲಿ ಪುರುಷ ಭಕ್ತಸಾಗರ!! ಮಾದಪ್ಪನ ಬೆಟ್ಟದಲ್ಲಿ ಮಹಾಜ್ಯೋತಿಗೆ ಕ್ಷಣಗಣನೆ

Kone Karthika Somavara: ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು ಎಂಬಲ್ಲಿ ಇಂದು ರಾತ್ರಿ ಮಹಾಜ್ಯೋತಿ(ಬೃಹತ್ ದೀಪ) ಬೆಳಗಲಿದ್ದು ಭಕ್ತರು ವಿಶೇಷ ಜ್ಯೋತಿ ದರ್ಶನ ಪಡೆಯಕು ಕಾತರದಿಂದ ಕಾಯುತ್ತಿದ್ದಾರೆ.

Written by - Yashaswini V | Last Updated : Nov 25, 2024, 02:40 PM IST
  • ಮಲ್ಲಿಕಾರ್ಜುನ ಸ್ವಾಮಿ ಘೋರ ತಪಸ್ವಿ ಹಿನ್ನೆಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶ ನಿಷೇಧ‌‌. ಪುರುಷ ಭಕ್ತರಷ್ಟೇ ಇಲ್ಲಿ ದೇವರ ದರ್ಶನ ಪಡೆಯಬಹುದಾಗಿದೆ‌.
  • ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು ಎಂಬಲ್ಲಿ ಇಂದು ರಾತ್ರಿ ಮಹಾಜ್ಯೋತಿ
  • ವಿಶೇಷ ಜ್ಯೋತಿ ದರ್ಶನ ಪಡೆಯಲು ಕಾತರದಿಂದ ಕಾದು ಕುಳಿತ ಭಕ್ತಸಾಗರ
ಕಡೇ ಕಾರ್ತಿಕ ಸೋಮವಾರ: ಕೊಂಗಳ್ಳಿ ಬೆಟ್ಟದಲ್ಲಿ ಪುರುಷ ಭಕ್ತಸಾಗರ!! ಮಾದಪ್ಪನ ಬೆಟ್ಟದಲ್ಲಿ ಮಹಾಜ್ಯೋತಿಗೆ ಕ್ಷಣಗಣನೆ title=

ಚಾಮರಾಜನಗರ: ಶಿವನ‌ ಆರಾಧನೆಗೆ ಪುಣ್ಯ ಮಾಸ ಎಂಥಲೇ ಕರೆಯುವ ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಪ್ರಮುಖ ಹರನ ದೇಗುಲಗಳಾದ ಮಲೆ ಮಹದೇಶ್ವರ ಬೆಟ್ಟ ಮತ್ತು ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇಗುಲದಲ್ಲಿ ಭಕ್ತಸಾಗರವೇ ಹರಿದು ಬಂದಿದೆ.

ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಹಸ್ರಾರು ಮಂದಿ ಭಕ್ತರು ದೇವರ ದರ್ಶನ ಪಡೆದಿದ್ದು ದೇವರ ವಿಶೇಷ ದರ್ಶನ, ಅಭಿಷೇಕವನ್ನು ಕಣ್ತುಂಬಿಕೊಂಡಿದ್ದಾರೆ.

ಇನ್ನು, ಕಾರ್ತಿಕ ಸೋಮವಾರದ ಪ್ರಯುಕ್ತ ಭಕ್ತಾದಿಗಳಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು ದೇವಾಲಯವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದೆ.

ಇದನ್ನೂ ಓದಿ- Weekly Horoscope: ನವೆಂಬರ್ ಕೊನೆಯ ವಾರ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ? ಯಾರಿಗೆ ಅಶುಭ?

ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು ಎಂಬಲ್ಲಿ ಇಂದು ರಾತ್ರಿ ಮಹಾಜ್ಯೋತಿ(ಬೃಹತ್ ದೀಪ) ಬೆಳಗಲಿದ್ದು ಭಕ್ತರು ವಿಶೇಷ ಜ್ಯೋತಿ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ.

ಕೊಂಗಳ್ಳಿ ಬೆಟ್ಟದಲ್ಲಿ ಪುರುಷ ಭಕ್ತರ ಕಲರವ: 
ತಮಿಳುನಾಡಿನ ತಾಳವಾಡಿ ತಾಲೂಕಿನಲ್ಲಿರುವ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೂ ಭಕ್ತಸಾಗರವೇ ಹರಿದುಬಂದಿದೆ. ಚಾಮರಾಜನಗರ, ಗುಂಡ್ಲುಪೇಟೆ, ಟೀ‌.ನರಸಿಪುರ ಸೇರಿ ವಿವಿಧೆಡೆಯಿಂದ ಎತ್ತಿನ ಗಾಡಿಗಳಲ್ಲಿ ಭಕ್ತರು ಬಂದಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News