Dry Tulsi Plant Remedies: ಭಾರತದಲ್ಲಿ ಬಹುತೇಕ ಜನರ ಮನೆಯಲ್ಲಿ ತುಳಸಿ ಸಸ್ಯ ಇದ್ದೇ ಇರುತ್ತದೆ. ಹಿಂದೂ ಧರ್ಮದಲ್ಲಿ ತುಳಸಿಯನ್ನು ಪವಿತ್ರ ಸಸ್ಯವೆಂದು ಬಣ್ಣಿಸಲಾಗುತ್ತದೆ. ಮಾತ್ರವಲ್ಲ, ಈ ಸಸ್ಯದಲ್ಲಿ ತಾಯಿ ಮಹಾಲಕ್ಷ್ಮೀ ನೆಲೆಸಿದ್ದಾಳೆ ಎಂಬ ನಂಬಿಕೆಯೂ ಇದೆ. ಯಾವ ಮನೆಯಲ್ಲಿ ತುಳಸಿ ಸಸ್ಯ ಇರುತ್ತದೆಯೋ, ಎಲ್ಲಿ ತುಳಸಿಯನ್ನು ಭಕ್ತಿ ಭಾವದಿಂದ ಪೂಜಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ತುಳಸಿ ಸಸ್ಯವಿರುವ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ಮಾತ್ರವಲ್ಲ ಅಂತಹ ಮನೆಯಲ್ಲಿ ಸುಖ-ಶಾಂತಿಯೂ ಇರಲಿದೆ ಎನ್ನಲಾಗುವುದು. ವೈದಿಕ ಜ್ಯೋತಿಷ್ಯದ ಪ್ರಕಾರ, ತುಳಸಿ ಸಸ್ಯವಿರುವ ಮನೆಯಲ್ಲಿ ಋಣಾತ್ಮಕತೆ ಪ್ರವೇಶಿಸುವುದಿಲ್ಲ. ಕೆಲವೊಮ್ಮೆ ಸರಿಯಾಗಿ ಆರೈಕೆ ಮಾಡಿದರೂ ಸಹ ತುಳಸಿ ಸಸ್ಯ ಒಣಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಒಣಗುವುದನ್ನು ಅಶುಭ ಘಟನೆಗಳ ಸಂಕೇತ ಎಂತಲೂ ಹೇಳಲಾಗುತ್ತದೆ. ಆದಾಗ್ಯೂ, ಒಣಗಿರುವ ತುಳಸಿ ಸಸ್ಯದ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಮನೆಯ ಖಜಾನೆ ತುಂಬುತ್ತದೆ ಎಂದು ನಂಬಲಾಗಿದೆ.  


ಇದನ್ನೂ ಓದಿ- Vastu Tips: ಬೆಳ್ಳುಳ್ಳಿಯ ಸಣ್ಣ ಟ್ರಿಕ್ ನಿಮ್ಮ ಅದೃಷ್ಟನ್ನೇ ಬದಲಿಸುತ್ತೆ, ಹಣದ ಮಳೆಯೇ ಸುರಿಯುವುದು!


ವಾಸ್ತವವಾಗಿ ಮನೆಯಲ್ಲಿ ತುಳಸಿ ಗಿಡ ಒಣಗುವುದು  ಸರ್ವೇ ಸಾಮಾನ್ಯವಾದ ಸಂಗತಿಯಾದರೂ ಸಹ ಆ ಸಸ್ಯವನ್ನು ಕೀಳುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು. 


ವಾಸ್ತು ಪ್ರಕಾರ, ನಾವು ಇತರ ಒಣ ಸಸ್ಯಗಳನ್ನು ಕೀಳುವಂತೆ ತುಳಸಿ ಸಸ್ಯವನ್ನು ಏಕಾಏಕಿ ಕೀಳಬಾರದು. ತುಳಸಿ ಸಸ್ಯವನ್ನು ಕೀಳುವಾಗ ಈ ಕೆಳಗಿನ ನಿಯಮಗಳನ್ನು ಅನುಸರಿಸಿ... 
>> ಸ್ನಾನ ಮಾಡಿದ ಬಳಿಕವಷ್ಟೇ ತುಳಸಿ ಸಸ್ಯವನ್ನು ಕೀಳಬೇಕು. 
>>  ತುಳಸಿ ಸಸ್ಯವನ್ನು ಕೀಳುವ ಮೊದಲು ಗಿಡಕ್ಕೆ ಸ್ವಲ್ಪ ನೀರು ಚಿಮುಕಿಸಬೇಕು. ಇದರಿಂದ ಮಣ್ಣು ಮೃದುವಾಗುತ್ತದೆ. 
>> ಇದರ ನಂತರ, ತಾಯಿ ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವನ್ನು ಸ್ಮರಿಸಿ ಸಸ್ಯವನ್ನು ಕೀಳಬೇಕು. 
>> ಒಣಗಿರುವ ತುಳಸಿ ಸಸ್ಯವನ್ನು ಕಿತ್ತ ಬಳಿಕ ಅದನ್ನು ಎಲ್ಲೆಂದರಲ್ಲಿ ಬಿಸಾಡದೆ ಹರಿಯುವ ನೀರಿನಲ್ಲಿ ಬಿಡಬೇಕು. 
ನೆನಪಿಡಿ, ಪವಿತ್ರವಾದ ಈ ಸಸ್ಯವನ್ನು ಮರೆತೂ ಸಹ ಕಸದ ಬಳಿ ಹಾಕಲೇಬಾರದು.


ಇದನ್ನೂ ಓದಿ- Vastu Tips: ತಾಯಿ ಲಕ್ಷ್ಮಿಯ ಕೃಪಾಶೀರ್ವಾದ ಸದಾ ನಿಮ್ಮ ಮೇಲಿರಬೇಕೆ? ಇಲ್ಲಿದೆ ಉಪಾಯ !


ಒಣಗಿದ ತುಳಸಿ ಸಸ್ಯವನ್ನು ಕೀಳಲು ಶುಭ ಸಮಯ: 
ವಾಸ್ತು ಶಾಸ್ತ್ರದ ಪ್ರಕಾರ, ಯಾವ ಮನೆಯಲ್ಲಿ ನಿತ್ಯ ತುಳಸಿ ಪೂಜಿಸಲ್ಪಡುವಳೋ ಅಂತಹ ಮನೆಯಲ್ಲಿ ಎಂದಿಗೂ ಕೂಡ ಸುಖ, ಸಮೃದ್ಧಿಗೆ ಕೊರತೆ ಆಗುವುದಿಲ್ಲ. ಅಂತಹ ತುಳಸಿ ಸಸ್ಯವು ಒಣಗಿದಾಗ ಅದನ್ನು ಕೀಳಲು ಕೆಲವು ನಿಯಮಗಳನ್ನು ಅನುಸರಿಸೂವುದು ಕೂಡ ತುಂಬಾ ಅಗತ್ಯವಾಗಿದೆ. 


ಶಾಸ್ತ್ರಗಳ ಪ್ರಕಾರ, ಸೂರ್ಯಗ್ರಹಣ, ಏಕಾದಶಿ, ಅಮಾವಾಸ್ಯೆ, ಚಂದ್ರಗ್ರಹಣ, ಹುಣ್ಣಿಮೆ, ಭಾನುವಾರ, ಸೂತಕ, ಪಿತೃಪಕ್ಷದಂತಹ ಸಮಯದಲ್ಲಿ ಅಪ್ಪಿತಪ್ಪಿಯೂ ತುಳಸಿ ಸಸ್ಯವನ್ನು ಕೀಳಬಾರದು. ಇದನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಮೇಲೆ ಉಲ್ಲೇಖಿಸಿದಂತೆ ಒಣಗಿಡ ತುಳಸಿ ಗಿಡವನ್ನು ಕೀಳಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ