Vastu Tips: ಮಣ್ಣಿನಿಂದ ಮಾಡಿದ ಈ 6 ವಸ್ತುಗಳನ್ನು ಮನೆಗೆ ತನ್ನಿ, ಲಕ್ಷ್ಮಿಯ ಕೃಪೆಯಿಂದ ಸಂತೋಷ - ಸಂಪತ್ತು ವೃದ್ಧಿ!

ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿಗೆ ವಿಶೇಷ ಸ್ಥಾನವಿದೆ. ಶುಕ್ರ ಗ್ರಹವನ್ನು ಸೌಂದರ್ಯ, ಸಂಪತ್ತು ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಮಣ್ಣಿನಿಂದ ಮಾಡಿದ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸುವುದರಿಂದ ಸಂತೋಷ ಮತ್ತು ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಶುಕ್ರನ ಬಲದಿಂದ ಚಂದ್ರ ಮತ್ತು ಶನಿ ದೋಷಗಳೂ ಕಡಿಮೆಯಾಗುತ್ತವೆ.

Vastu Tips: ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿಗೆ ವಿಶೇಷ ಸ್ಥಾನವಿದೆ. ಶುಕ್ರ ಗ್ರಹವನ್ನು ಸೌಂದರ್ಯ, ಸಂಪತ್ತು ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಮಣ್ಣಿನಿಂದ ಮಾಡಿದ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸುವುದರಿಂದ ಸಂತೋಷ ಮತ್ತು ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಶುಕ್ರನ ಬಲದಿಂದ ಚಂದ್ರ ಮತ್ತು ಶನಿ ದೋಷಗಳೂ ಕಡಿಮೆಯಾಗುತ್ತವೆ.

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. Zಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮಣ್ಣಿನ ವಿಗ್ರಹ : ಮನೆಯಲ್ಲಿ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಮಣ್ಣಿನಿಂದ ಮಾಡಿದ ಗಣೇಶ, ಲಕ್ಷ್ಮಿ ಮೂರ್ತಿ ಇಡಿ. ಇದರಿಂದ ಲಕ್ಷ್ಮಿ ದೇವಿ ಸಂತುಷ್ಟಳಾಗುತ್ತಾಳೆ.  

2 /6

ಮಣ್ಣಿನ ಕಳಸ : ಶಾಸ್ತ್ರಗಳಲ್ಲಿ, ಪೂಜೆಯ ಸಮಯದಲ್ಲಿ ಮಣ್ಣಿನ ಕಳಸವನ್ನು ಬಳಸುವುದು ಮಂಗಳಕರವೆಂದು ಹೇಳಲಾಗಿದೆ. 1 ರೂಪಾಯಿಯ ನಾಣ್ಯವನ್ನು ಮಣ್ಣಿನ ಪಾತ್ರೆಯಲ್ಲಿ ಹಾಕಿ ಪೂಜಾ ಮನೆಯಲ್ಲಿ ಇಡಿ ಎಂದು ಹೇಳಲಾಗುತ್ತದೆ. ಇದರಿಂದ ಐಶ್ವರ್ಯ ಹೆಚ್ಚುತ್ತದೆ.   

3 /6

ಮಣ್ಣಿನ ಮಡಕೆ: ನೀರನ್ನು ತಂಪು ಮಾಡಲು ಮಣ್ಣಿನ ಮಡಕೆಯನ್ನು ಬಳಸಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಲ್ಲಿ ನೀರು ತುಂಬಿಸಿ ಉತ್ತರ ದಿಕ್ಕಿಗೆ ಇಡುವುದು ಶುಭಕರ. ನೀರು ಲಕ್ಷ್ಮಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪಗೆ ಪಾತ್ರರಾಗುವಿರಿ.   

4 /6

ಮಣ್ಣಿನ ಹಣತೆ: ಸಂಜೆ ತುಳಸಿ ಗಿಡದ ಬಳಿ ದೀಪವನ್ನು ಹಚ್ಚುವುದು ಶುಭವೆಂದು ನಂಬಲಾಗಿದೆ. ಮಣ್ಣಿನ ಹಣತೆಯನ್ನು ಪಂಚತತ್ವದ ಸಂಕೇತವೆಂದು ಪರಿಗಣಿಸಲಾಗಿದೆ. ಇರದಲ್ಲಿ ದೀಪ ಹಚ್ಚುವುದರಿಂದ ದಾಂಪತ್ಯ ಜೀವನದಲ್ಲಿ ಮಧುರತೆ ಮೂಡುತ್ತದೆ.   

5 /6

ಮಣ್ಣಿನ ಆಟಿಕೆ: ಡ್ರಾಯಿಂಗ್ ರೂಮಿನಲ್ಲಿ ಮಣ್ಣಿನ ಆಟಿಕೆಗಳು ಅಥವಾ ಮಣ್ಣಿನ ವಸ್ತುಗಳನ್ನು ಇಡುವುದರಿಂದ ಧನಾಗಮನ ಹೆಚ್ಚಾಗುತ್ತದೆ. ಇದು ಧನಾತ್ಮಕ ಶಕ್ತಿಯನ್ನು ಸಹ ಸೃಷ್ಟಿಸುತ್ತದೆ.   

6 /6

ಮಣ್ಣಿನ ಕುಂಡ: ಮನೆಯಲ್ಲಿರುವ ಮರಗಳು ಮತ್ತು ಸಸ್ಯಗಳನ್ನು ಯಾವಾಗಲೂ ಮಣ್ಣಿನ ಕುಂಡಗಳಲ್ಲಿ ನೆಡಬೇಕು. ಸಸ್ಯಗಳನ್ನು ನೆಡಲು ಪ್ಲಾಸ್ಟಿಕ್ ಮಡಕೆಗಳನ್ನು ಬಳಸಬೇಡಿ, ಇದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.