ಮನೆಗಾಗಿ ವಾಸ್ತು ಸಲಹೆಗಳು: ಭಾರತೀಯ ಸಂಸ್ಕೃತಿಯಲ್ಲಿ ವಾಸ್ತು ಶಾಸ್ತ್ರದ ಮಹತ್ವವನ್ನು ಹೇಳಲಾಗಿದೆ. ವಾಸ್ತು ಪ್ರಕಾರ, ಮನೆ ನಿರ್ಮಿಸುವುದು ಮತ್ತು ವಸ್ತುಗಳನ್ನು ಇಡುವುದರಿಂದ, ಕುಟುಂಬದಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ಓಡಿಹೋಗುತ್ತವೆ ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಪ್ಪಿತಪ್ಪಿಯೂ ಸಹ ಕೆಲವು ವಸ್ತುಗಳನ್ನು ತಪ್ಪಾದ ದಿಕ್ಕಿನಲ್ಲಿ ಇಡಬಾರದು. ಇದರಿಂದ ಅಂತಹ ಮನೆಯಲ್ಲಿ ಸಂಪತ್ತಿನ ನಷ್ಟ ಸಂಭವಿಸುವುದಲ್ಲದೆ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ನೀವು ಹೊಸ ಮನೆಯನ್ನು ನಿರ್ಮಿಸುತ್ತಿದ್ದರೆ ಅಥವಾ ಹಳೆಯ ಮನೆಯನ್ನು ನವೀಕರಿಸುತ್ತಿದ್ದರೆ, ಖಂಡಿತವಾಗಿಯೂ ವಾಸ್ತುವಿನ ಕೆಲವು ನಿಯಮಗಳನ್ನು ನೆನಪಿನಲ್ಲಿಡಿ.  ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಮರೆತೂ ಸಹ ಇಂತಹ ತಪ್ಪುಗಳಾಗದಂತೆ ನಿಗಾವಹಿಸಿ.


ಈಶಾನ್ಯ ದಿಕ್ಕಿನಲ್ಲಿ ಶೌಚಾಲಯ ನಿರ್ಮಿಸಬೇಡಿ:
ಮೊದಲನೆಯದು ನಿಮ್ಮ ಮನೆಯಲ್ಲಿ ನಿರ್ಮಿಸುವ ಶೌಚಾಲಯ. ನಮ್ಮಲ್ಲಿ ಅನೇಕರು ಸ್ಥಳದ ಕೊರತೆಯಿಂದ ಅಥವಾ ವಿನ್ಯಾಸವನ್ನು ಆಕರ್ಷಕವಾಗಿಸಲು ಈಶಾನ್ಯ ದಿಕ್ಕಿನಲ್ಲಿ ಶೌಚಾಲಯವನ್ನು ನಿರ್ಮಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಶೌಚಾಲಯವನ್ನು ಯಾವಾಗಲೂ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ಹಾಗೆ ಮಾಡದಿದ್ದರೆ ಮನೆಯ ಆರ್ಥಿಕ ಸ್ಥಿತಿ ದುರ್ಬಲಗೊಳ್ಳುತ್ತದೆ ಮತ್ತು ಕುಟುಂಬದಲ್ಲಿ ಸಂಕಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Shani Krupe 2022: ಜುಲೈನಿಂದ ಈ 2 ರಾಶಿಯವರಿಗೆ ಶನಿ ವಕ್ರದೃಷ್ಟಿಯಿಂದ ಮುಕ್ತಿ


ಮನೆಯ ಈ ದಿಕ್ಕಿನಲ್ಲಿ ಕಸ ಹಾಕಲೇಬಾರದು:
ಮನೆ ಎಂದ ಮೇಲೆ ಮನೆಯಲ್ಲಿ ಕೆಲವು ಬೇಡದ ವಸ್ತುಗಳು, ಬೇಡದ ವಸ್ತುಗಳು ಅನ್ನುವುದಕ್ಕಿಂತ ಮುಂದೆ ಯಾವಾಗಲಾದರೂ ಬೇಕಾಗಬಹುದು ಎಂದು ತೆಗೆದಿಡುವ ವಸ್ತುಗಳೂ ಇರುತ್ತವೆ. ಇದಕ್ಕಾಗಿ ಹೆಚ್ಚಿನವರು ಸ್ಟೋರ್ ರೂಂ ಮಾಡಿ ಮನೆಯಲ್ಲಿ ಹಳೆಯ ವಸ್ತುಗಳನ್ನು ಇಡಲು ಜಾಗ ಗುರುತಿಸುತ್ತಾರೆ. ಜಂಕ್ ಅಥವಾ ಹಳೆಯ ವಸ್ತುಗಳನ್ನು ಎಂದಿಗೂ ಉತ್ತರ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ಈ ದಿಕ್ಕು ಸಂಪತ್ತಿನ ಅಧಿಪತಿಯಾದ ಕುಬೇರನದ್ದು ಎಂದು ನಂಬಲಾಗಿದೆ. ಆದ್ದರಿಂದ, ನೀವು ಅವರ ದಿಕ್ಕಿನಲ್ಲಿ ಜಂಕ್ ಅಥವಾ ಹಳೆಯ ವಸ್ತುಗಳ ರಾಶಿಯನ್ನು ಹಾಕಿದರೆ ಅದು ಬಡತನವನ್ನು ಆಹ್ವಾನಿಸಿದಂತೆ ಎನ್ನಲಾಗುತ್ತದೆ.


ಇದನ್ನೂ ಓದಿ- ದೇವರ ಮುಂದೆ ದೀಪ ಬೆಳಗುವ ವೇಳೆ ಆಗುವ ಈ ತಪ್ಪುಗಳಿಂದ ಆಗುತ್ತದೆ ಭಾರೀ ಧನ ಹಾನಿ


ನೀರಿನ ಟ್ಯಾಂಕ್:
ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿಯೂ ನೀರಿನ ಟ್ಯಾಂಕ್ ಇದ್ದೇ ಇರುತ್ತದೆ. ನೀರಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಅದಕ್ಕಾಗಿಯೇ ಟ್ಯಾಂಕ್ ಅನ್ನು ಸ್ಥಾಪಿಸುವುದು ಅಗತ್ಯವಾಗುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ವಾಸ್ತು ಶಾಸ್ತ್ರದ ಪ್ರಕಾರ, ನೀವು ಛಾವಣಿಯ ಮೇಲೆ ಟ್ಯಾಂಕ್ ಅನ್ನು ಸ್ಥಾಪಿಸಬೇಕು. ಎಷ್ಟೋ ಜನರು ತಿಳಿಯದೆ ನೀರಿನ ತೊಟ್ಟಿಯನ್ನು ಆಗ್ನೇಯ ದಿಕ್ಕಿನಲ್ಲಿ ಅಳವಡಿಸುತ್ತಾರೆ. ಈ ದಿಕ್ಕನ್ನು ಅಗ್ನಿ ಮೂಲೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ದಿಕ್ಕಿನಲ್ಲಿ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಇಡುವುದರಿಂದ ಕುಟುಂಬದಲ್ಲಿ ಅಶಾಂತಿ, ಆರ್ಥಿಕ ಮುಗ್ಗಟ್ಟು, ಆರೋಗ್ಯ ಹಾನಿ ಮುಂತಾದವುಗಳು ಸಂಭವಿಸುತ್ತವೆ. ಆದ್ದರಿಂದ, ನೀರಿನ ಟ್ಯಾಂಕ್ ಅಥವಾ ಇತರ ನೀರಿನ ಸಾಧನಗಳನ್ನು ಯಾವಾಗಲೂ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.