Vastu Shastra On Lizard: ಮನೆಗಳ ಗೋಡೆಗಳ ಮೇಲೆ ಹಲ್ಲಿಗಳು ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ನೊಣ, ಸೊಳ್ಳೆಗಳಂತಹ ಕೀಟಗಳನ್ನು ತಿಂದು ಮನೆಯನ್ನು ಸ್ವಚ್ಛವಾಗಿಡಲು ಈ ಹಲ್ಲಿಗಳು ನಮಗೆ ನೆರವಾಗುತ್ತವೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಹಲ್ಲಿಗಳಿಗೆ ಭವಿಷ್ಯವನ್ನು (Astrology) ನೋಡುವ ವಿಶಿಷ್ಟ ಶಕ್ತಿ ಇದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಹಲ್ಲಿಗಳು ತಾಯಿ ಲಕ್ಷ್ಮಿಯ ಪ್ರತೀಕಗಳಾಗಿವೆ ಮತ್ತು ತಮ್ಮ ದೇಹದ ವಿವಿಧ ಭಂಗಿಗಳ ಮೂಲಕ, ಭವಿಷ್ಯದಲ್ಲಿ ವ್ಯಕ್ತಿಗೆ ಏನಾಗಲಿದೆ ಎಂಬುದನ್ನು ಮೊದಲೇ ಸಂಕೇತಿಸುತ್ತವೆ ಎನ್ನಲಾಗುತ್ತದೆ. ನೀವು ಇಲ್ಲಿಯವರೆಗೆ ಈ ಸಂಕೇತಗಳತ್ತ ಗಮನ ಹರಿಸಿಲ್ಲ ಎಂದಾದರೆ, ಇಂದಿನಿಂದಲೇ ಅವುಗಳನ್ನು ಗಮನಿಸಲು ಪ್ರಾರಂಭಿಸಿ. ಹೀಗೆ ಮಾಡುವುದರಿಂದ ನೀವು ಖಂಡಿತವಾಗಿಯೂ ಲಾಭದಲ್ಲಿರುತ್ತೀರಿ. ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.(Spiritual News In Kananda)


COMMERCIAL BREAK
SCROLL TO CONTINUE READING

ಕಾಲುಗಳ ಮೇಲೆ ಹಲ್ಲಿ ಬೀಳುವ ಅರ್ಥ (lizards in house good or bad astrology)
ಸಾಮಾನ್ಯವಾಗಿ ಹಲ್ಲಿಗಳು ಹಗಲಿನಲ್ಲಿ ಶಾಂತವಾಗಿರುತ್ತದೆ ಮತ್ತು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಆದರೆ ರಾತ್ರಿಯಲ್ಲಿ ಕೀಟಗಳು ಮತ್ತು ಪತಂಗಗಳು ಸಕ್ರಿಯವಾದ ತಕ್ಷಣ, ಹಲ್ಲಿಗಳು ಸಹ ಅವುಗಳನ್ನು ತಿನ್ನಲು ಗೋಡೆಗಳ ಮೇಲೆ ಅಲ್ಲಲ್ಲಿ ಚಲಿಸಲು ಪ್ರಾರಂಭಿಸುತ್ತವೆ. ಗೋಡೆಯ ಮೇಲೆ ಅವುಗಳ ಹಿಡಿತ ಬಲವಾಗಿದ್ದರೂ, ಅನೇಕ ಬಾರಿ ಅವು ಕೆಳಗೆ ಬೀಳುತ್ತವೆ. ವಾಸ್ತು ನಿಯಮಗಳ ಪ್ರಕಾರ, ಹಲ್ಲಿ ನಿಮ್ಮ ಬಲ ಪಾದದ ಮೇಲೆ ಅಥವಾ ಹಿಮ್ಮಡಿಯ ಮೇಲೆ ಬಿದ್ದರೆ, ಅದು ಒಳ್ಳೆಯ ಸುದ್ದಿಯ ಸಂಕೇತವಾಗಿದೆ. ಇದರರ್ಥ ನೀವು ಶೀಘ್ರದಲ್ಲೇ ಪ್ರವಾಸಕ್ಕೆ ಹೋಗಬಹುದು ಎಂದರ್ಥ. ಮತ್ತೊಂದೆಡೆ, ಹಲ್ಲಿ ಎಡ ಕಾಲು ಅಥವಾ ಹಿಮ್ಮಡಿಯ ಮೇಲೆ ಬಿದ್ದರೆ, ಇದು ಕುಟುಂಬದಲ್ಲಿ ಕೆಲವು ರೋಗ ಅಥವಾ ಅಪಶ್ರುತಿಯ ಬೆಳವಣಿಗೆ ಎಂದರ್ಥ.


ದೇವರ ಕೋಣೆಯಲ್ಲಿ ಹಲ್ಲಿ ಹರಿದಾಡುವುದರ ಅರ್ಥ (lizard in pooja room good or bad in kannada)
ಹಲ್ಲಿಯ ಮೇಲಿನ ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದೇವರ ಕೋಣೆಯಲ್ಲಿ  ಹಲ್ಲಿ ಸುಳಿದಾಡುವುದನ್ನು ನೀವು ನೋಡಿದರೆ, ಶೀಘ್ರದಲ್ಲೇ ಸಂತೋಷ ನಿಮ್ಮ ಮನೆಯನ್ನು ಪ್ರವೇಶಿಸಲಿದೆ ಎಂದರ್ಥ. ನಿಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಬಹುದು ಅಥವಾ ನೀವು ಎಲ್ಲಿಂದಲಾದರೂ ಶುಭ ಸಮಾಚಾರ ಪಡೆಯಬಹುದು ಎಂಬುದು ಇದರ ಅರ್ಥ. ಇದರ ಜೊತೆಗೆ ತಾಯಿ ಲಕ್ಷ್ಮಿ (izard goddess lakshmi) ಶೀಘ್ರದಲ್ಲೇ ನಿಮ್ಮ ಮನೆಗೆ ಆಗಮಿಸಲಿದ್ದಾಳೆ ಎಂದರ್ಥ ಮತ್ತು ಈ ಬಗ್ಗೆ ಪೂರ್ವ ಸೂಚನೆಯನ್ನು ದೇವರ ಕೊನೆಗೆ ಹಲ್ಲಿ ಕಳುಹಿಸುವ ಮೂಲಕ ಆಕೆ ನೀಡಿದ್ದಾಳೆ ಎಂದರ್ಥ.


ಕನಸಿನಲ್ಲಿ ಹಲ್ಲಿಯನ್ನು ಈ ರೀತಿ ನೋಡಿ (12 ways to attract goddess lakshmi)
ಮಲಗಿರುವಾಗ ನಿಮ್ಮ ಕನಸಿನಲ್ಲಿ ಹಲ್ಲಿ ಕೀಟಗಳು ಮತ್ತು ಪತಂಗಗಳನ್ನು ತಿನ್ನುವುದನ್ನು ನೀವು ನೋಡಿದರೆ, ಅದು ಕುಟುಂಬದಲ್ಲಿ ಕೆಲವು ಅಹಿತಕರ ಘಟನೆಗಳ ಸಂಕೇತವಾಗಿದೆ. ಇದರೊಂದಿಗೆ, ನೀವು ಹಲ್ಲಿಯಿಂದ ಓಡಿಹೋಗುವುದು ಅಥವಾ ಕನಸಿನಲ್ಲಿ ಅದನ್ನು ಕೊಲ್ಲುವುದು ಕಂಡುಬಂದರೆ, ಅದು ಕೆಲವು ಕೆಟ್ಟ ಶಕುನಗಳನ್ನು ಸೂಚಿಸುತ್ತದೆ. ಇದರರ್ಥ ಮುಂದಿನ ದಿನಗಳಲ್ಲಿ ನೀವು ಕೆಲವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಳ್ಳಲಿದ್ದೀರಿ ಅಥವಾ ರೋಗವು ನಿಮ್ಮ ಮನೆಯನ್ನು ಪ್ರವೇಶಿಸಲಿದೆ ಎಂಬುದರ ಸಂಕೇತವಾಗಿದೆ.


ಹಲ್ಲಿ ಜಗಳ ಕಂಡರೆ! (lizard near tulsi plant)
ಮನೆ ಅಥವಾ ಕಚೇರಿಯಲ್ಲಿ ಹಲ್ಲಿಗಳು ಪರಸ್ಪರ ಜಗಳವಾಡುವುದನ್ನು ನೀವು ನೋಡಿದರೆ, ಅದು ಭವಿಷ್ಯದಲ್ಲಿ ಯಾರೊಂದಿಗಾದರೂ ನಿಮ್ಮ ಗಂಭೀರವಾದ ಬ್ರೇಕ್ ಅಪ್ ಅಥವಾ ವಿವಾದದ ಸಂಕೇತವಾಗಿದೆ. ಇಂತಹ ದೃಶ್ಯಗಳನ್ನು ನೋಡುವುದರಿಂದ ನಿಮ್ಮ ಕುಟುಂಬದಲ್ಲಿ ಗೃಹ ವೈಷಮ್ಯ ಉಂಟಾಗಬಹುದು, ಇದರಿಂದ ನಿಮ್ಮ ಮಾನಸಿಕ ಶಾಂತಿ ಕದಡಬಹುದು. ಇಂತಹ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು, ನಿಮ್ಮ ಮೇಲೆ ಸಂಯಮವನ್ನು ಇಟ್ಟುಕೊಳ್ಳಿ ಮತ್ತು ಈ ಸಮಯವನ್ನು ಶಾಂತಿಯುತವಾಗಿ ಕಳೆಯಲು ಪ್ರಯತ್ನಿಸಿ.


(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)