Vastu Tips: ಭಾರತೀಯ ಮನೆಗಳಲ್ಲಿ ಉಪಯೋಗಿಸಲ್ಪಡುವ ಸಾಮಾನ್ಯ ಸಾಂಬಾರ ಪದಾರ್ಥಗಳಲ್ಲಿ ಹಳದಿ ಸಾಸಿವೆ ಕೂಡ ಒಂದು. ಆದರೆ, ಈ ಹಳದಿ ಸಾಸಿವೆಗೆ ಜೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವವಿದೆ. ಹಳದಿ ಸಾಸಿವೆಯ ಉಪಾಯಗಳು ಮನೆಯ ಏಳಿಗೆಯ ಬಾಗಿಲನ್ನೇ ತೆರೆಯುತ್ತವೆ ಮತ್ತು ಮನೆಯಲ್ಲಿ ಹಣದ ಹರಿವಿಗೆ ಕಾರಣವಾಗುತ್ತವೆ.ಹಾಗಾದರೆ ಬನ್ನಿ ಹಳದಿ ಸಾಸಿವೆಯ ಆ ಲಾಭಕಾರಿ ಉಪಾಯಗಳಾವುವು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಹಳದಿ ಸಾಸಿವೆಯ ಉಪಾಯಗಳು
ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಈ ಉಪಾಯ ಅನುಸರಿಸಿ

ಬೆಳಗ್ಗೆ ಸ್ನಾನ ಮಾಡಿ ಪೂಜೆ ಮಾಡುವಾಗ ಸಗಣಿಯ ಕುಳ್ಲಿನ ಮೇಲೆ ಸ್ವಲ್ಪ ಹಳದಿ ಸಾಸಿವೆ ಕಾಳುಗಳನ್ನು ಹಾಕಿ ಉರಿಸಿ. ನಂತರ ಇಡೀ ಮನೆಯಲ್ಲಿ ಅದರ ಹೊಗೆಯನ್ನು ಆಡಿಸಿ. ಇದರಿಂದ ಸದಾ ನಿಮ್ಮ ಮನೆಯಲ್ಲಿ ತಾಯಿ ಲಕ್ಷ್ಮಿಯ ವಾಸವಿರುತ್ತದೆ.


ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಲು ಈ ಉಪಾಯ ಅನುಸರಿಸಿ
ಒಂದು ಮುಷ್ಠಿ ಹಳದಿ ಸಾಸಿವೆ ಕಾಳುಗಳನ್ನು  ಒಂದು ಹಳದಿ ಬಣ್ಣದ ವಸ್ತ್ರದಲ್ಲಿ ಕಟ್ಟಿ ತಾಯಿ ಬಾಂಗ್ಲಾಮುಖಿಗೆ ಅರ್ಪಿಸಿ. ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತವೆ.


ಆರ್ಥಿಕ ಹಾನಿಯಿಂದ ಮೇಲೇಳಲು ಈ ಉಪಾಯ ಅನುಸರಿಸಿ
ಮನೆ ಮುಖ್ಯಸ್ಥನ ತಲೆ ಮೇಲಿಂದ ಕೆಲ ಸಾಸಿವೆ ಕಾಳುಗಳನ್ನು ನಿವಾಳಿಸಿ ಹೊರಹಾಕಿ. ಇದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಮೆಲ್ಲಗೆ ನಿವಾರಣೆಯಾಗುತ್ತವೆ.

ಧನವಂತರಾಗಲು ಈ ಉಪಾಯ ಅನುಸರಿಸಿ
ಬೆಳ್ಳಿ ಅಥವಾ ಸಾಮಾನ್ಯ ಧಾತುವಿನಿಂದ ತಯಾರಿಸಲಾಗಿರುವ ಒಂದು ಬಟ್ಟಲಲ್ಲಿ ಹಳದಿ ಸಾಸಿವೆ ಕಾಲುಗಳನ್ನು ಕರ್ಪೂರದ ಜೊತೆಗೆ ಉರಿಸಿ. ಈ ಕೆಲಸ ನಿತ್ಯ ಅನುಸರಿಸಿದರೆ, ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ ಮತ್ತು ಧನಾಗಮನ ಹೆಚ್ಚಾಗುತ್ತದೆ.


ಕೆಟ್ಟ ದೃಷ್ಟಿ ದೋಷ ನಿವಾರಿಸಲು ಈ ಉಪಾಯ ಅನುಸರಿಸಿ
ಕೆಟ್ಟ ದೃಷ್ಟಿ ದೋಷವನ್ನು ನಿವಾರಿಸಲು ಹಳದಿ ಸಾಸಿವೆಯ ಕೆಲ ಕಾಳುಗಳನ್ನು ಮನೆಯ ಎಲ್ಲಾ ಕೋಣೆಗಳಲ್ಲಿ ಸಿಂಪಡಿಸಿ. ಉಳಿದ ಕಾಳುಗಳನ್ನು ಮನೆಯ ನಾಲ್ಕು ದಿಕ್ಕುಗಳಲ್ಲಿ ಬೀರಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ.


ಇದನ್ನೂ ಓದಿ-Relationship: ಒಂದು ಆರೋಗ್ಯಕರ ಸಂಬಂಧದಲ್ಲಿ ನಿಮ್ಮ ಸಂಘರ್ಷವನ್ನು ಎತ್ತಿ ತೋರಿಸುತ್ತವೆ ಈ ಸಂಕೇತಗಳು!


ಧನ ವೃದ್ಧಿಯ ಉಪಾಯ
ಗುರುವಾರದಂದು ಸ್ವಲ್ಪ ಹಳದಿ ಸಾಸಿವೆ ಮತ್ತು ಕರ್ಪೂರವನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಮುಖ್ಯ ಬಾಗಿಲಿಗೆ ನೇತು ಹಾಕಿ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಇದು ತುಂಬಾ ಸಹಕಾರಿಯಾಗಿದೆ. 


ಇದನ್ನೂ ಓದಿ-Palmistry: ಅಂಗೈಯಲ್ಲಿನ ವಿಷ್ಣು ರೇಖೆ ಇರುವುದು ಏನನ್ನು ಸೂಚಿಸುತ್ತದೆ?

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.