ಬರುಬರುತ್ತಾ ಕತ್ತೆಯಾಗ್ತಿದೆ ರಾಯರ ಕುದುರೆ...! ಗಂಭೀರ್ ಯುಗದಲ್ಲಿ ಟೀಂ ಇಂಡಿಯಾ ಸ್ಥಿತಿ ಹೀನಾಯ! ಸೋಲಿನ ಮೇಲೆ ಸೋಲು... 4 ತಿಂಗಳಲ್ಲಿ 11 ಕಳಪೆ ದಾಖಲೆ
Team India Poor Record: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 235 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 263 ರನ್ ಗಳಿಸಿ 28 ರನ್ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 174 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಭಾರತಕ್ಕೆ 147 ರನ್‌ಗಳ ಗುರಿ ಸಿಕ್ಕಿತು, ಆದರೆ ಭಾರತ ತಂಡ 29.1 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟ್ ಆಯಿತು.
Embarrassing Records of Team India: ಮುಂಬೈ ಟೆಸ್ಟ್‌ನಲ್ಲಿ ಭಾರತ ಕ್ರಿಕೆಟ್ ತಂಡವನ್ನು 25 ರನ್‌ಗಳಿಂದ ಸೋಲಿಸುವ ಮೂಲಕ ನ್ಯೂಜಿಲೆಂಡ್ 3-0 ಕ್ಲೀನ್ ಸ್ವೀಪ್ ಮಾಡಿದೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ತವರಿನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವುದು ಇದೇ ಮೊದಲು. ಈ ಸೋಲಿನ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪುವ ಭಾರತದ ಆಸೆಗೆ ದೊಡ್ಡ ಹೊಡೆತ ಬಿದ್ದಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 235 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 263 ರನ್ ಗಳಿಸಿ 28 ರನ್ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 174 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಭಾರತಕ್ಕೆ 147 ರನ್‌ಗಳ ಗುರಿ ಸಿಕ್ಕಿತು, ಆದರೆ ಭಾರತ ತಂಡ 29.1 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟ್ ಆಯಿತು.
ರಾಯರ ಕುದುರೆ ಕತ್ತೆಯಾಗ್ತಿದೆ...
ಗೌತಮ್ ಗಂಭೀರ್ ಯುಗದಲ್ಲಿ ಟೀಮ್ ಇಂಡಿಯಾ ಅತ್ಯಂತ ಕೆಟ್ಟ ಆರಂಭವನ್ನು ಹೊಂದಿದೆ. ಜುಲೈನಲ್ಲಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆದರು. ಅಂದಿನಿಂದ ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಮಾನಕರ ಸೋಲು ಕಂಡಿದೆ. ಗಂಭೀರ್ ಐಪಿಎಲ್‌ನಲ್ಲಿ ಮೆಂಟರ್ ಆಗಿದ್ದಾಗ ಹಲವು ಯಶಸ್ಸು ಗಳಿಸಿದ್ದರು. ಆದರೆ ಇದೀಗ 4 ತಿಂಗಳೊಳಗೆ, ಭಾರತ ಅನೇಕ ನಾಚಿಕೆಗೇಡಿನ ದಾಖಲೆಗಳನ್ನು ಬರೆದಿದೆ.
ಗಂಭೀರ್ ಕೋಚಿಂಗ್ ಅಡಿಯಲ್ಲಿ ಟೀಂ ಇಂಡಿಯಾದ 11 ನಾಚಿಕೆಗೇಡಿನ ದಾಖಲೆಗಳು:
1. 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಸೋಲು
ಈ ವರ್ಷ ಶ್ರೀಲಂಕಾ ಪ್ರವಾಸದಲ್ಲಿ ಭಾರತ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಸೋತಿತ್ತು. ಮೊದಲ ಪಂದ್ಯ ಟೈ ಆಗಿದ್ದು, ಆ ಬಳಿಕ ಭಾರತ ಎರಡು ಪಂದ್ಯಗಳಲ್ಲಿ ಸೋತಿತ್ತು. ಟೀಂ ಇಂಡಿಯಾ 27 ವರ್ಷಗಳ ನಂತರ ಲಂಕಾ ವಿರುದ್ಧ ಏಕದಿನ ಸರಣಿಯನ್ನು ಕಳೆದುಕೊಂಡಿದೆ.
2. ಮೊದಲ ಬಾರಿಗೆ 30 ವಿಕೆಟ್
ಮೊದಲ ಬಾರಿಗೆ ಭಾರತ ತಂಡ 3 ಪಂದ್ಯಗಳ ಏಕದಿನ ಸರಣಿಯಲ್ಲಿ 30 ವಿಕೆಟ್ ಕಳೆದುಕೊಂಡು ಕಳಪೆ ದಾಖಲೆ ಬರೆದಿದೆ. ಶ್ರೀಲಂಕಾ ವಿರುದ್ಧದ ಎಲ್ಲಾ ಮೂರು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಆಲೌಟ್ ಆಗಿತ್ತು.
3. 45 ವರ್ಷಗಳಲ್ಲಿ ಮೊದಲ ಬಾರಿಗೆ...
ಭಾರತ ಕ್ರಿಕೆಟ್ ತಂಡ ಈ ವರ್ಷ ಒಂದೇ ಒಂದು ಏಕದಿನ ಪಂದ್ಯವನ್ನು ಗೆದ್ದಿಲ್ಲ. 3 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದ ಅವರು ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಟೀಂ ಇಂಡಿಯಾ ಒಂದೇ ಒಂದು ಏಕದಿನ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದಿರುವುದು 45 ವರ್ಷಗಳಲ್ಲಿ ಇದೇ ಮೊದಲು.
4. 36 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸೋಲು
ಭಾರತ ಕ್ರಿಕೆಟ್ ತಂಡ 36 ವರ್ಷಗಳ ನಂತರ ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಬೆಂಗಳೂರಿನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಕಿವೀಸ್ ತಂಡವನ್ನು ಸೋಲಿಸಿತ್ತು. ಇದಕ್ಕೂ ಮೊದಲು 1986ರಲ್ಲಿ ಜಾನ್ ರೈಟ್ ನಾಯಕತ್ವದಲ್ಲಿ ಗೆದ್ದಿತ್ತು.
5. ಚಿನ್ನಸ್ವಾಮಿಯಲ್ಲೂ ಕಳಪೆ ದಾಖಲೆ
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಗಳ ಸೋಲು ಕಂಡಿದೆ. 19 ವರ್ಷಗಳ ನಂತರ ಇದೇ ಮೈದಾನದಲ್ಲಿ ಭಾರತ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು.
6. ತವರಿನಲ್ಲಿ 50 ರನ್‌ಗಿಂತ ಕಡಿಮೆ ರನ್‌ಗೆ ಆಲೌಟ್
ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 46 ರನ್‌ಗಳಿಗೆ ಕುಸಿದಿದೆ. ತವರು ನೆಲದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ 50 ರನ್‌ಗಳ ಕೆಳಗೆ ಆಲೌಟ್ ಆಗಿತ್ತು.
7. ಮೊದಲ ಬಾರಿಗೆ ಸರಣಿ ಸೋಲು
ಭಾರತ ತಂಡ ಮೊದಲ ಬಾರಿಗೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಸತತ 3 ಪಂದ್ಯಗಳಲ್ಲಿ ಸೋಲು ಎದುರಿಸಿದೆ
8. 12 ವರ್ಷಗಳ ನಂತರ ತವರಿನಲ್ಲಿ ಸೋಲು
ಭಾರತ ತಂಡ 12 ವರ್ಷಗಳ ನಂತರ ತವರು ನೆಲದಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಕೊನೆಯದಾಗಿ 2012ರಲ್ಲಿ ಇಂಗ್ಲೆಂಡ್ ವಿರುದ್ಧ 4-ಟೆಸ್ಟ್ ಸರಣಿಯಲ್ಲಿ 2-1 ಅಂತರದಲ್ಲಿ ಸೋಲನುಭವಿಸಿತ್ತು.
9. ಸತತ 2 ಟೆಸ್ಟ್ ಪಂದ್ಯಗಳಲ್ಲಿ ಸೋಲು
ಭಾರತ ತಂಡ 12 ವರ್ಷಗಳ ನಂತರ ತವರಿನಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳನ್ನು ಸೋತಿದೆ. ಇದು ಕೊನೆಯ ಬಾರಿಗೆ 2012 ರಲ್ಲಿ ಸಂಭವಿಸಿತ್ತು.
10. 12 ವರ್ಷಗಳ ನಂತರ ಮುಂಬೈನಲ್ಲಿ ಸೋಲು
ಮುಂಬೈನಲ್ಲಿ ಅಜೇಯವಾಗಿ ಉಳಿದಿದ್ದ ಟೀಂ ಇಂಡಿಯಾದ ದಾಖಲೆ 12 ವರ್ಷಗಳ ನಂತರ ಮುರಿದಿದೆ. ಕಳೆದ ಬಾರಿ ಇಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತಿತ್ತು.
ಇದನ್ನೂ ಓದಿ: ಒಂದೇ ವಾರದಲ್ಲಿ ಬೊಕ್ಕ ತಲೆಯಲ್ಲೂ ದಷ್ಟಪುಷ್ಟ ಕಡುಕಪ್ಪು ಕೂದಲು ಬೆಳೆಯುವಂತೆ ಮಾಡುತ್ತೆ ಈ ʼಎಣ್ಣೆʼ
11. ಮೊದಲ ಬಾರಿಗೆ ತವರು ನೆಲದಲ್ಲಿ 'ವೈಟ್‌ವಾಶ್'
ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಎಲ್ಲಾ ಮೂರು ಪಂದ್ಯಗಳನ್ನು ಸೋತಿದೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ತವರಿನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ಸೋತಿದ್ದು ಇದೇ ಮೊದಲು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ