Karnataka Football : ಕರ್ನಾಟಕ ಯುವ ಫುಟ್ ಬಾಲ್ ಆಟಗಾರರಿಗೆ ಭರ್ಜರಿ ಅವಕಾಶ!
ಕರ್ನಾಟಕದ ಯುವ ಫುಟ್ಬಾಲ್ ಆಟಗಾರರಿಗೆ ಭರ್ಜರಿ ಅವಕಾಶವೊಂದು ತರೆದಿದೆ.. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರೋ ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ಹೊಸ ಯೋಜನೆಯೊಂದನ್ನ ಆರಂಭಿಸಿದೆ.
ಬೆಂಗಳೂರು : ಕರ್ನಾಟಕದ ಯುವ ಫುಟ್ಬಾಲ್ ಆಟಗಾರರಿಗೆ ಭರ್ಜರಿ ಅವಕಾಶವೊಂದು ತರೆದಿದೆ.. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರೋ ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ಹೊಸ ಯೋಜನೆಯೊಂದನ್ನ ಆರಂಭಿಸಿದೆ.
ಇಂದು ನಗರದ ರಿಟ್ಜ್ ಕಾರ್ಲ್ಟನ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಇಬಿ ಸಂಸ್ಥೆಯ ಸಿಇಓ ಕಿಶೋರ್ ಎಸ್ ಆರ್, ಪಟ್ಟಣ ಮತ್ತು ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ತಂಡದಲ್ಲಿ ಸ್ಥಾನ ನೀಡತ್ತೇವೆ. ಶಾಲಾ- ಕಾಲೇಜು, ಸಣ್ಣ ಮಟ್ಟದ ಕ್ಲಬ್ ಮಟ್ಟದಲ್ಲೂ ಆಡುತ್ತಿರುವ ಪ್ರತಿಭಾವಂತ ಆಟಗಾರರನ್ನು ಗುರುತಿಸುತ್ತಿದ್ದೇವೆ.. ಮತ್ತು ಆ ಆಟಗಾರರನ್ನು ಹೆಕ್ಕಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ತರಬೇತಿ ನೀಡುವ ಮೂಲಕ ಕ್ಲಬ್ಬನ್ನ ವಿಸ್ತರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : Breaking News : ಅದಾನಿ ಗ್ರೂಪ್ ತೆಕ್ಕೆಗೆ ಅಹಮದಾಬಾದ್ ಮಹಿಳಾ IPL ಟೀಂ, ₹1289 ಕೋಟಿ ಬಿಡ್!
ಇದೇ ಟೈಮ್ನಲ್ಲಿ ಈ ಸಲ 16 ಆಟಗಾರರನ್ನು ಗುರ್ತಿಸಲಾಗುವುದು.. ಕಳೆದ ಬಾರಿ ದಾವಣಗೆರೆಯ ದೇಸೀ ಪ್ರತಿಭೆ ತೇಜಸ್ ಅವರನ್ನು ಗುರ್ತಿಸಿ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತಿದೆ.. ಈಗಾಗಲೇ ಸೂಪರ್ ಡಿವಿಷನ್ ಫುಟ್ಬಾಲ್ ಮೊದಲ ಹಂತದಲ್ಲಿ ಗೆಲುವನ್ನು ಸಾಧಿಸಿದ್ದು, ಐಎಸ್ಎಲ್ಗೆ ಸ್ಥಾನ ಪಡೆಯಲು ಸರ್ವ ರೀತಿಯ ತಯಾರಿ ನಡೆಸುತ್ತಿದೆ.. ಹಾಗೂ ಐ- ಲೀಗ್‌ನಲ್ಲಿ ಸ್ಥಾನ ಪಡೆದ ಕರ್ನಾಟಕದ ಮೊದಲ ಮೊದಲ ಕ್ಲಬ್ ಎಂಬ ಹೆಗ್ಗಳಿಕೆ ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ಪಾತ್ರವಾಗಿದೆ ಅಂತಲೂ ತಿಳಿಸಿದರು..
[[{"fid":"280793","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಇದನ್ನೂ ಓದಿ : ಪಂದ್ಯ ಗೆದ್ದ ನಂತರವೂ ರೋಹಿತ್ ಶರ್ಮಾ ಈ ಪರಿ ಸಿಟ್ಟಾಗಿರುವುದಕ್ಕೆ ಕಾರಣ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.