ಪಂದ್ಯ ಗೆದ್ದ ನಂತರವೂ ರೋಹಿತ್ ಶರ್ಮಾ ಈ ಪರಿ ಸಿಟ್ಟಾಗಿರುವುದಕ್ಕೆ ಕಾರಣ !

India vs New Zealand ODI Series : ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ಕೋಪಗೊಂಡಿರುವುದು ಕಂಡು ಬಂತು.   ಪ್ರಸಾರಕರ ವಿರುದ್ದ ರೋಹಿತ್ ಶರ್ಮಾ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. 

Written by - Ranjitha R K | Last Updated : Jan 25, 2023, 03:22 PM IST
  • ರೋಹಿತ್ ಶರ್ಮಾ ಕೆಂಡಾಮಂಡಲ
  • ಕಳೆದ 3 ವರ್ಷಗಳಲ್ಲಿ ಕಡಿಮೆ ODI
  • ಅಂಕಿ ಅಂಶ ಪ್ರಸಾರದ ಬಗ್ಗೆ ರೋಹಿತ್ ಶರ್ಮಾ ಅಸಮಾಧಾನ
ಪಂದ್ಯ ಗೆದ್ದ ನಂತರವೂ ರೋಹಿತ್ ಶರ್ಮಾ ಈ ಪರಿ ಸಿಟ್ಟಾಗಿರುವುದಕ್ಕೆ ಕಾರಣ !  title=

India vs New Zealand ODI Series : ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭಾರತ ತಂಡ 90 ರನ್‌ಗಳಿಂದ ಗೆದ್ದಿದೆ. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಶತಕ ಸಿಡಿಸಿದ್ದಾರೆ. ಇಷ್ಟಾದರೂ ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ಕೋಪಗೊಂಡಿರುವುದು ಕಂಡು ಬಂತು.  ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸಿರುವ ಬಗೆಗಿನ ಅಂಕಿಅಂಶಗಳ ಪ್ರಸಾರವೇ ರೋಹಿತ್ ಕೋಪಕ್ಕೆ ಕಾರಣವಾಗಿತ್ತು. 

ರೋಹಿತ್  ಶರ್ಮಾ ಕೆಂಡಾಮಂಡಲ :
ಮೂರು ವರ್ಷಗಳಲ್ಲಿ ರೋಹಿತ್ ಶರ್ಮ ಕೇವಲ 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅಂಕಿ ಅಂಶಗಳು ಸರಿಯಾಗಿಯೇ ಇವೆ. ಆದರೆ ಪೂರ್ತಿ ವಿಚಾರವನ್ನು ಸ್ಪಷ್ಟವಾಗಿ ಬಿತ್ತರಿಸಬೇಕು ಎನ್ನುವುದೇ ರೋಹಿತ್ ಶರ್ಮಾ ಕಾಳಜಿ.  3 ವರ್ಷಗಳ ಅಂತರದ ಬಳಿಕ ODIನಲ್ಲಿ  ಶತಕ ಬಾರಿಸಿರುವ ಬಗೆಗಿನ ಅಂಕಿ ಅಂಶದ ಬಗ್ಗೆ ಟೀಂ ಇಂಡಿಯಾ ನಾಯಕ ಸಿಟ್ಟಾಗಿದ್ದಾರೆ. 

ಇದನ್ನೂ ಓದಿ IND vs NZ ಏಕದಿನ ಸರಣಿ ಜೊತೆ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನವೂ ಕೊನೆಗೊಂಡಿತು!

ಕಳೆದ 3 ವರ್ಷಗಳಲ್ಲಿ ಕಡಿಮೆ ODI : 
'ನಾನು ಮೂರು ವರ್ಷಗಳಲ್ಲಿ ಕೇವಲ 12 ಏಕದಿನ ಪಂದ್ಯಗಳನ್ನು ಆಡಿದ್ದೇನೆ. ಮಾತಿನಲ್ಲಿ ಹೇಳುವಾಗ ಮೂರು ವರ್ಷ ದೀರ್ಘ ಕಾಲವೆಂದೇ ಅನ್ನಿಸುತ್ತದೆ. ಆದರೆ ಕಳೆದ ವರ್ಷ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಗಮನಹರಿಸಿದ್ದರಿಂದ ಏಕದಿನ ಕ್ರಿಕೆಟ್‌ನಲ್ಲಿ ಆಡುವುದು ಸಾಧ್ಯವಾಗಲಿಲ್ಲ. ಪ್ರಸಾರಕರು ಈ ಬಗ್ಗೆಯೂ ಗಮನ ಹರಿಸಿ, ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಇನ್ನು 3 ವರ್ಷಗಳಲ್ಲಿ ಎಂಟು ತಿಂಗಳು ಕೊವಿಡ್ ಕಾರಣದಿಂದಾಗಿ ಮನೆಯಲ್ಲಿಯೇ ಇದ್ದೆವು. ಆ ಸಂದರ್ಭದಲ್ಲಿ ಪಂದ್ಯಗಳೇ ನಡೆದಿರಲಿಲ್ಲ. ಕಳೆದ ವರ್ಷ ನಾವು ಟಿ20 ಕ್ರಿಕೆಟ್ ಮಾತ್ರ ಆಡಿದ್ದೆವು. ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಶ್ರೀಲಂಕಾ ವಿರುದ್ಧ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ. ಇದಲ್ಲದೆ, ನಾನು ಗಾಯಗೊಂಡಿರುವುದು ಕೂಡಾ ಪಂದ್ಯಗಳನ್ನು ಆಡದಿರುವುದಕ್ಕೆ ಕಾರಣ. ಈ ಎಲ್ಲಾ ವಿಷಯಗಳನ್ನು ಪರಿಶೀಲಿಸಿದ ನಂತರ ನನ್ನ ಫಾರ್ಮ್ ಬಗ್ಗೆ ಕೇಳಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. 

ಇದನ್ನೂ ಓದಿ : Video: ರೋಹಿತ್ ಶತಕ ಸಿಡಿಸುವುದನ್ನು ತಡೆಯಲು ಕಿವೀಸ್ ಬೌಲರ್ ಚೀಪ್ ಟ್ರಿಕ್.!

ಶತಕ ಬಾರಿಸಿದ ರೋಹಿತ್  :
ನಿನ್ನೆ ನ್ಯೂಜಿಲೆಂಡ್ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿದ ವೇಳೆ, ಪ್ರಸಾರಕರು ಜನವರಿ 19 2020 ರ ನಂತರ ಭಾರತೀಯ ನಾಯಕನ ಮೊದಲ ಶತಕ ಎಂದು ಅಂಕಿಅಂಶಗಳನ್ನು ತೋರಿಸಿದ್ದರು. ಇದು  ರೋಹಿತ್ ಶರ್ಮಾ ಅಸಮಾಧಾನಕ್ಕೆ ಕಾರಣವಾಗಿತ್ತು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News