ಕ್ರಿಕೆಟ್ ದಿಗ್ಗಜ ಬ್ರೆಟ್ ಲೀ ಪ್ರಕಾರ ಭಾರತದ ಅತ್ಯಂತ ಅಪಾಯಕಾರಿ ಕ್ರಿಕೆಟಿಗ ಕೊಹ್ಲಿ ಅಲ್ಲ… ಈ ಬ್ಯಾಟ್ಸ್’ಮನ್ ಬೆಸ್ಟ್ ಅಂತೆ!
Team India: ಭಾನುವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್ 2023ರ ಸತತ ಎರಡನೇ ಶತಕದಲ್ಲಿ ವಿರಾಟ್ ಕೊಹ್ಲಿ ಅಜೇಯ 101 ರನ್ ಕಲೆ ಹಾಕುವ ಮೂಲಕ ಹಲವಾರು ದಾಖಲೆಗಳನ್ನು ಮುರಿದರು, ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ಲೇಆಫ್ ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
Team India: ಆಸ್ಟ್ರೇಲಿಯಾದ ಲೆಜೆಂಡರಿ ವೇಗದ ಬೌಲರ್ ಬ್ರೆಟ್ ಲೀ ಅವರು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ವಿರುದ್ಧ ಆಟವಾಡಿದ್ದಾರೆ. ಆದರೆ ತಮ್ಮ ದೃಷ್ಟಿಯಲ್ಲಿ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಯಾರು ಎಂದು ಹೇಳಿದಾಗ ಅದರಲ್ಲಿ ಈ ಇಬ್ಬರು ಆಟಗಾರರ ಹೆಸರು ಇರಲಿಲ್ಲ. ಬದಲಾಗಿ ಬೇರೊಬ್ಬ ಆಟಗಾರನ ಬಗ್ಗೆ ಹೇಳಲಾಗಿದೆ.
ಇದನ್ನೂ ಓದಿ: WTC ಫೈನಲ್’ಗೆ ಪ್ಲೇಯಿಂಗ್ 11 ಆಯ್ಕೆ ಮಾಡಿದ ರವಿಶಾಸ್ತ್ರಿ: Team Indiaದ ಈ ಸ್ಟಾರ್ ಬ್ಯಾಟ್ಸ್’ಮನ್’ಗಿಲ್ಲ ಸ್ಥಾನ!
ಭಾನುವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್ 2023ರ ಸತತ ಎರಡನೇ ಶತಕದಲ್ಲಿ ವಿರಾಟ್ ಕೊಹ್ಲಿ ಅಜೇಯ 101 ರನ್ ಕಲೆ ಹಾಕುವ ಮೂಲಕ ಹಲವಾರು ದಾಖಲೆಗಳನ್ನು ಮುರಿದರು, ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ಲೇಆಫ್ ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಶುಭ್ಮನ್ ಗಿಲ್ (ಔಟಾಗದೆ 104) ಅವರ ಅಮೋಘ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ 5 ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್ ಗಳ ಜಯ ಸಾಧಿಸಿತು.
ಕೊಹ್ಲಿ ಅಲ್ಲ, ಇವರು ಭಾರತದ ಅತ್ಯಂತ ಅಪಾಯಕಾರಿ ಕ್ರಿಕೆಟಿಗ!
ಶುಭ್ಮನ್ ಗಿಲ್ ಶಾಟ್’ಗಳಿಗೆ ಕೊಹ್ಲಿಯ ದಾಖಲೆ ಸಮ ಬರಲಿಲ್ಲ. ಗಿಲ್ ಉತ್ತಮ ಸ್ಟ್ರೈಕ್ ರೇಟ್ ನೊಂದಿಗೆ ಸ್ಕೋರ್ ಮಾಡಿದ್ದರು. ಅಷ್ಟೇ ಅಲ್ಲದೆ ಅವರಿಗೆ ವಿಜಯ್ ಶಂಕರ್ ಉತ್ತಮ ಬೆಂಬಲ ನೀಡಿದರು. ಇನ್ನು ಆಸ್ಟ್ರೇಲಿಯಾದ ದಿಗ್ಗಜ ವೇಗದ ಬೌಲರ್ ಬ್ರೆಟ್ ಲೀ ಗಿಲ್ ಅವರನ್ನು ಹೊಗಳಿ, “ಅವರು 8 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಲೆಗ್ ಸೈಡ್ ನಲ್ಲಿ ಅವರ ಹೊಡೆತಗಳು ಅತ್ಯುತ್ತಮವಾಗಿದ್ದವು. ಅವರ ಮಣಿಕಟ್ಟು ಬಲವಾಗಿದೆ ಮತ್ತು ಸಮಯ ಉತ್ತಮದಲ್ಲಿ ಬ್ಯಾಟಿಂಗ್ ಮಾಡುತ್ತಾರೆ: ಎಂದು ಪ್ರಶಂಸಿದ್ದಾರೆ.
ದಿನದ ಆರಂಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸಿದ ಮುಂಬೈ ಇಂಡಿಯನ್ಸ್ (MI), 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ಪ್ಲೇಆಫ್‌ಗೆ ಪ್ರವೇಶಿಸಿದರು. ಮತ್ತೊಂದೆಡೆ, RCB ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ಗಿಂತ ಕಡಿಮೆ ಅಂದರೆ 14 ಅಂಕಗಳೊಂದಿಗೆ ಆರನೇ ಸ್ಥಾನವನ್ನು ಗಳಿಸಿತು. 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೈಟಾನ್ಸ್ ಇಂದು ಕ್ವಾಲಿಫೈಯರ್ 1 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಮುಂಬೈ ಇಂಡಿಯನ್ಸ್ ಒಂದು ದಿನದ ನಂತರ ಎಲಿಮಿನೇಟರ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ.
ಶುಭ್ಮನ್ ಗಿಲ್ ಮತ್ತು ವಿಜಯ್ ಶಂಕರ್ ಅವರ ಶತಕದ ಜೊತೆಯಾಟದ ಕುರಿತು ಬ್ರೆಟ್ ಲೀ ಮಾತನಾಡಿದ್ದು, '71 ಎಸೆತಗಳಲ್ಲಿ 123 ರನ್ ಗಳಿಸಿ RCB ಬೌಲರ್ ಗಳನ್ನು ಬಗ್ಗು ಬಡಿದಿದ್ದಾರೆ. ಪರಿಸ್ಥಿತಿಗಳು ನಿಜವಾಗಿಯೂ ಬೌಲರ್ ಗಳ ಪರವಾಗಿರಲಿಲ್ಲ. ಆದರೆ ಅದಕ್ಕೆ ಅರ್ಹವಾಗಿರುವಲ್ಲಿ ನೀವು ಕ್ರೆಡಿಟ್ ನೀಡಬೇಕು. ಇಬ್ಬರೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು” ಎಂದು ಹೇಳಿದರು.
ಇದನ್ನೂ ಓದಿ: RCB ಸೋತಿದ್ದಕ್ಕೆ ʼಶುಭಮನ್ ಗಿಲ್ ತಂಗಿʼಯ ನಿಂದನೆ..! ಕ್ಷಮೇ ಕೇಳಿದ ʼವಿರಾಟ್ ಪ್ಯಾನ್ಸ್ʼ
ಇನ್ನು ಕೊಹ್ಲಿ ಶತಕದ ಬಗ್ಗೆ ಮಾತನಾಡಿದ ಅನಿಲ್ ಕುಂಬ್ಳೆ, “ಗೆಲ್ಲಲೇ ಬೇಕು ಎಂಬ ಆ ಉತ್ಸಾಹ ಮತ್ತು ಹಸಿವನ್ನು ಕಾಣಬಹುದು. ಆರ್ ಸಿ ಬಿ ಪಾಲಿಗೆ ಇಂದು ಮಹತ್ವದ ದಿನವಾಗಿತ್ತು. ಯಾವುದೇ ಬ್ಯಾಟ್ಸ್‌ಮನ್ ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಫಾಫ್ ಡು ಪ್ಲೆಸಿಸ್ ಉತ್ತಮ ಆಟಗಾರ, ಆದರೆ ಅವರ ನಿರ್ಗಮನದ ನಂತರ ವಿರಾಟ್ ಕೊಹ್ಲಿ ಮೇಲೆ ಒತ್ತಡ ಬಂದಿತ್ತು. ಆ ಒತ್ತಡ ಮತ್ತು ಜವಾಬ್ದಾರಿಯೊಂದಿಗೆ ಅವರು ಅದ್ಭುತ ಶತಕ ಗಳಿಸಿದರು” ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ