Afghanistan Bowler Ban for 20 Month: ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ಫ್ರಾಂಚೈಸಿಯೊಂದಿಗೆ ಮಾಡಿದ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಹೊತ್ತಿದ್ದು, ಇದೇ ಕಾರಣದಿಂದ ಆತನಿಗೆ ಮುಂದಿನ 20 ತಿಂಗಳವರೆಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಕ್ರಿಕೆಟ್ ಲೀಗ್‌’ನಲ್ಲಿ ಭಾಗವಹಿಸಲು ಆತನಿಗೆ ಸಾಧ್ಯವಾಗುವುದಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬರೋಬ್ಬರಿ 88 ವರ್ಷಗಳ ಬಳಿಕ ಈ ಮಹಾನ್ ದಾಖಲೆ ಬರೆದ ಟೀಂ ಇಂಡಿಯಾ ವನಿತೆಯರು! ಯಾವುದು ಆ ರೆಕಾರ್ಡ್?


ILT20 ಅಥವಾ International League T20 2024 ರಲ್ಲಿ ನಡೆಯಲಿದೆ. ಇದು ಯುಎಇಯಲ್ಲಿ ನಡೆಸಲಾಗುವ ದೊಡ್ಡ ಕ್ರಿಕೆಟ್ ಪಂದ್ಯಾವಳಿಯೂ ಆಗಿದೆ. ಅಫ್ಘಾನಿಸ್ತಾನದ ಸ್ಟಾರ್ ಬೌಲರ್ ನವೀನ್ ಉಲ್ ಹಕ್ ಅವರನ್ನು ಈ ಟೂರ್ನಿಯಿಂದ ನಿಷೇಧಿಸಲಾಗಿದೆ. ನವೀನ್ ಉಲ್ ಶಾರ್ಜಾ ವಾರಿಯರ್ಸ್ ತಂಡದೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ಒಂದು ಋತುವಿಗಾಗಿ ಅವರನ್ನು ನಿಷೇಧಿಸಲಾಗಿದೆ.


ಇದನ್ನೂ ಓದಿ: ಕ್ರಿಕೆಟ್ ಜಗತ್ತನ್ನೇ ನಡುಗಿಸಿದ ಐವರು ಅವಳಿಗಳಿವರು…! ಎದುರಾಳಿಗಳ ಬೆವರಿಳಿಸಿದ ಸಹೋದರರು…!


ನವೀನ್ ಉಲ್ ಹಕ್ ಈಗಾಗಲೇ ಅಂತರಾಷ್ಟ್ರೀಯ ವೈಟ್ ಬಾಲ್ ಕ್ರಿಕೆಟ್‌’ನಿಂದ ನಿವೃತ್ತರಾಗಿದ್ದಾರೆ. ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌’ನಿಂದಲೂ ನಿವೃತ್ತಿ ಹೊಂದಿದ್ದರು. ಈಗ 20 ತಿಂಗಳ ಕಾಲ ILT20 ನಿಂದ ನಿಷೇಧಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ