India Women vs England Women Mumbai Test: ಮಹಿಳಾ ಕ್ರಿಕೆಟ್’ನಲ್ಲಿ, ಮುಂಬೈ ಟೆಸ್ಟ್’ನ ಮೊದಲ ದಿನ ಇಂಗ್ಲೆಂಡ್ ವಿರುದ್ಧ ಭಾರತ ಅದ್ಭುತ ಪ್ರದರ್ಶನ ನೀಡಿದೆ. ಕಳೆದ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತ್ತು. ಈ ಮೂಲಕ ಭಾರತ ತನ್ನ 88 ವರ್ಷಗಳ ಹಳೆಯ ಸಾಧನೆಯನ್ನು ಪುನರಾವರ್ತಿಸಿದೆ.
ಇದನ್ನೂ ಓದಿ:ತೆ ಲುಗು ಬಿಗ್ ಬಾಸ್ ವಿನ್ನರ್ ಬಹುಮಾನ ಮೊತ್ತಕ್ಕೆ ಕತ್ತರಿ.. ಪಲ್ಲವಿ ಪ್ರಶಾಂತ್’ಗೆ ಸಿಕ್ಕ ಹಣವೆಷ್ಟು
ಮೊದಲ ಬಾರಿಗೆ ಭಾರತ ಟೆಸ್ಟ್’ನ ಮೊದಲ ದಿನದಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದೆ. ಮಹಿಳಾ ಕ್ರಿಕೆಟ್’ನಲ್ಲಿ ಎರಡನೇ ಬಾರಿಗೆ ಈ ಸಾಧನೆ ಮಾಡಲಾಗಿದೆ. ಈ ಹಿಂದೆ ಅಂದರೆ 1935ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಮೊದಲ ಬಾರಿಗೆ ಈ ಸಾಧನೆ ಮಾಡಿತ್ತು.
ಭಾರತದ ನಾಲ್ವರು ಆಟಗಾರ್ತಿಯರು ಅರ್ಧಶತಕ ಗಳಿಸಿದ್ದರು. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ತಂಡಕ್ಕೆ ಆರಂಭಿಕರಾಗಿ ಎಂಟ್ರಿ ಕೊಟ್ಟಿದ್ದರು. ಮಂಧಾನ 12 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರೆ, ಶಫಾಲಿ 30 ಎಸೆತಗಳಲ್ಲಿ 19 ರನ್ ಗಳಿಸಿ ಪೆವಿಲಿಯನ್’ಗೆ ಮರಳಿದರು. ಈ ಸಂದರ್ಭದಲ್ಲಿ ಶುಭಾ ಸತೀಶ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ, 13 ಬೌಂಡರಿಗಳ ನೆರವಿನಿಂದ ಅರ್ಧಶತಕ ಗಳಿಸಿದರು. ಒಟ್ಟು 76 ಎಸೆತಗಳನ್ನು ಎದುರಿಸಿದ ಶುಭಾ 69 ರನ್ ಗಳಿಸಿದರು. ಜೆಮಿಮಾ ರೋಡ್ರಿಗಸ್ ಕೂಡ ತನ್ನ ಚೊಚ್ಚಲ ಟೆಸ್ಟ್’ನಲ್ಲಿ ಅರ್ಧಶತಕ ಗಳಿಸಿದರು. 99 ಎಸೆತಗಳಲ್ಲಿ 68 ರನ್ ಗಳಿಸಿದರು. ಯಾಸ್ತಿಕಾ ಭಾಟಿಯಾ ಕೂಡ 88 ಎಸೆತಗಳಲ್ಲಿ 66 ರನ್ ಗಳಿಸಿದರು.
ಇದನ್ನೂ ಓದಿ: ಕ್ರಿಕೆಟ್ ಜಗತ್ತನ್ನೇ ನಡುಗಿಸಿದ ಐವರು ಅವಳಿಗಳಿವರು…! ಎದುರಾಳಿಗಳ ಬೆವರಿಳಿಸಿದ ಸಹೋದರರು…!
ನಾಯಕಿ ಹರ್ಮನ್ಪ್ರೀತ್ ಕೌರ್ 81 ಎಸೆತಗಳನ್ನು ಎದುರಿಸಿ 49 ರನ್ ಗಳಿಸಿದರು. ಇದರಲ್ಲಿ 6 ಬೌಂಡರಿ ಸೇರಿದ್ದವು. ದೀಪ್ತಿ ಶರ್ಮಾ ಮೊದಲ ದಿನ ಅಜೇಯರಾಗಿ ಮರಳಿದ್ದರು. 95 ಎಸೆತಗಳನ್ನು ಎದುರಿಸಿದ ಅವರು ಅಜೇಯ 60 ರನ್ ಗಳಿಸಿದರು. ಸ್ನೇಹ್ ರಾಣಾ 30 ರನ್ ಗಳಿಸಿ ಔಟಾದರೆ, ಪೂಜಾ ವಸ್ತ್ರಾಕರ್ 4 ರನ್ ಗಳಿಸಿ ಅಜೇಯರಾಗಿ ಉಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ