ನವದೆಹಲಿ : ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ (Virat Kohli)ಇತ್ತೀಚೆಗೆ ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ವಿಶ್ವ ಕ್ರಿಕೆಟ್‌ಗೆ ಅಚ್ಚರಿ ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ ಏಕಾಏಕಿ ಟೆಸ್ಟ್ ತಂಡದ ನಾಯಕತ್ವ (Test Captaincy ತ್ಯಜಿಸಿದ ಬೆನ್ನಲ್ಲೇ ಟೆಸ್ಟ್ ಗೆ ಮುಂದಿನ  ನಾಯಕನನ್ನಾಗಿ ಯಾರನ್ನು ಮಾಡಬೇಕು ಎಂಬ ಚಿಂತನೆಯಲ್ಲಿ ಬಿಸಿಸಿಐ (BCCI) ಮುಳುಗಿದೆ. 


COMMERCIAL BREAK
SCROLL TO CONTINUE READING

ಕೊಹ್ಲಿ ನಂತರ ಈ ಆಟಗಾರ ಹೊಸ ಟೆಸ್ಟ್ ನಾಯಕನಾಗಲಿದ್ದಾರೆ :
ವಿರಾಟ್ ಕೊಹ್ಲಿ (Virat Kohli) ನಂತರ ಟೆಸ್ಟ್ ತಂಡದ ಹೊಸ ನಾಯಕನಾಗಲು ಅರ್ಹ ಯಾರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಟೆಸ್ಟ್ ತಂಡದ ಹೊಸ ನಾಯಕನಾಗಲು ಕಣದಲ್ಲಿರುವ ಏಕೈಕ ಸ್ಟಾರ್ ಆಟಗಾರ ಎಂದರೆ ಕೆಎಲ್ ರಾಹುಲ್ (KL Rahul). ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಕೆಎಲ್ ರಾಹುಲ್ ನಾಯಕತ್ವ ವಹಿಸುವ ಅವಕಾಶ ಪಡೆದರು. ಈ ಪಂದ್ಯದಲ್ಲಿ ಬೌಲರ್‌ಗಳ ಕಳಪೆ ಪ್ರದರ್ಶನದಿಂದ ಟೀಂ ಇಂಡಿಯಾ (Team India) ಸೋತರೂ,  ನಾಯಕತ್ವದ ವಿಚಾರದಲ್ಲಿ ರಾಹುಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. 


ಇದನ್ನೂ ಓದಿ : ಈ ಭಯದಿಂದಲೇ ನಾಯಕತ್ವ ತೊರೆದರಾ ಕೊಹ್ಲಿ ? ವಿರಾಟ್ ನಿರ್ಧಾರದ ಹಿಂದಿನ ಕಾರಣ?


ಮೈದಾನದಲ್ಲಿ ಕೊಹ್ಲಿ ರೀತಿಯೇ ಆಕ್ರಮಣಶೀಲತೆ :
ದಕ್ಷಿಣ ಆಫ್ರಿಕಾ ವಿರುದ್ಧ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಮಾಡಿದ ಟೆಸ್ಟ್ ಪಂದ್ಯದಲ್ಲೂ ಮೈದಾನದಲ್ಲಿ ಅವರ ಆಕ್ರಮಣಕಾರಿ ವರ್ತನೆ ಕಂಡುಬಂದಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು, ಕೆಎಲ್ ರಾಹುಲ್ (KL Rahul) ಬಗ್ಗೆ ಕೆಲವು ಕಾಮೆಂಟ್‌ಗಳನ್ನು ಮಾಡುತ್ತಿದ್ದರು.   ಇದಾದ ಬಳಿಕ ರಾಹುಲ್ ಕೂಡ ದಕ್ಷಿಣ ಆಫ್ರಿಕಾ ಆಟಗಾರರಿಗೆ ತಕ್ಕ ಉತ್ತರ ನೀಡಿದ್ದಾರೆ. ಕೆಎಲ್ ರಾಹುಲ್ ಅವರ ಈ ಶೈಲಿಯನ್ನು ಅಭಿಮಾನಿಗಳು ಕೂಡಾ ಮೆಚ್ಚಿಕೊಂಡಿದ್ದಾರೆ.


ಯಾರ ಹೆಗಲಿಗೆ ಟೆಸ್ಟ್ ನಾಯಕತ್ವ : 
ರೋಹಿತ್ ಶರ್ಮಾ(Rohit Sharma) ಅವರಿಗೆ ಈಗ 34 ವರ್ಷ. ವೃತ್ತಿಜೀವನದಲ್ಲಿ ಕೆಲವೇ ವರ್ಷಗಳು ಬಾಕಿ ಉಳಿದಿರುವ ಯಾರನ್ನಾದರೂ ಟೆಸ್ಟ್ ನಾಯಕನನ್ನಾಗಿ ಮಾಡುವ ಬಗ್ಗೆ ಬಿಸಿಸಿಐ (BCCI) ನಿರ್ಧಾರ ಮಾಡಲಿಕ್ಕಿಲ್ಲ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ 29ರ ಹರೆಯದ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನ ನಾಯಕತ್ವ ಪಡೆಯಬಹುದು. ವಿರಾಟ್ ಕೊಹ್ಲಿ (Virat Kohli) 27 ನೇ ವಯಸ್ಸಿನಲ್ಲಿ ಟೆಸ್ಟ್ ನಾಯಕತ್ವವನ್ನು ಪಡೆದಿದ್ದರು. ತಮ್ಮ 29 ನೇ ವಯಸ್ಸಿನಲ್ಲಿ ODI ಮತ್ತು T20 ಗಳ ನಾಯಕತ್ವವನ್ನು ಪಡೆದಿದ್ದರು. 


ಇದನ್ನೂ ಓದಿ : BCCI vs Kohli:ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತೊರೆಯುವ ನಿರ್ಧಾರದ ಹಿಂದಿವೆ ಈ 5 ಪ್ರಮುಖ ಕಾರಣಗಳು!?


ನಾಯಕತ್ವವನ್ನು ಆನಂದಿಸಲು ವಿರಾಟ್ ಕೊಹ್ಲಿಗೆ ಸಾಕಷ್ಟು ಸಮಯ ಸಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ಅವರನ್ನು ನೂತನ ನಾಯಕರನ್ನಾಗಿ ಸಿದ್ಧಪಡಿಸುವುದು ಬಿಸಿಸಿಐನ ಗುರಿಯಾಗಿದೆ. ಭಾರತಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದರೆ ಕೆಎಲ್ ರಾಹುಲ್ ಉತ್ತಮ ಆಯ್ಕೆಯಾಗಿದೆ. ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್‌ನಲ್ಲೂ ಅವರ ಬ್ಯಾಟಿಂಗ್ ಉತ್ತಮವಾಗಿತ್ತು. ಐಪಿಎಲ್ (IPL)ಹಾಗೂ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.